ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದರು. ಯಾವುದೇ ರೀತಿಯ ಭಯೋತ್ಪಾದಕ ಕೃತ್ಯ ಅಥವಾ ಅದಕ್ಕೆ ಯಾವುದೇ ರೂಪದಲ್ಲಿ ಬೆಂಬಲ ನೀಡುವುದು ಮಾನವೀಯತೆಯ ವಿರುದ್ಧದ ದೊಡ್ಡ ಅಪರಾಧ ಎಂದು ಚಳಿ ಬಿಡಿಸಿದರು.
ಇದನ್ನೂ ಓದಿ: ಚೀನಾ ರಕ್ಷಣಾ ಸಚಿವರ ಕೈಕುಲುಕದೇ ಮೌನವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ರಾಜನಾಥ್ ಸಿಂಗ್
ಭಾರತ, ರಷ್ಯಾ, ಚೀನಾ ಮತ್ತು ಇತರ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಎಸ್‌ಸಿಒ ರಕ್ಷಣಾ ಸಚಿವರು ಸಭೆಯನ್ನು ಭಾರತ ಆಯೋಜಿಸಿದೆ. ಇದರಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ವರ್ಚುವಲ್ ಮೂಲಕ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಾಜನಾಥ್ ಸಿಂಗ್, ಒಂದು ರಾಷ್ಟ್ರವು ಭಯೋತ್ಪಾದಕರಿಗೆ ಆಶ್ರಯ ನೀಡಿದರೆ, ಅದು ಇತರರಿಗೆ ಮಾತ್ರವಲ್ಲದೆ ತನಗೂ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದರು.
ಭಯೋತ್ಪಾದನೆ ಎದುರಿಸುವುದೇ ಪ್ರಮುಖ ಆದ್ಯತೆ: ಭಯೋತ್ಪಾದನೆಯ ಬೆದರಿಕೆಯೊಂದಿಗೆ ಶಾಂತಿ ಮತ್ತು ಸಮೃದ್ಧಿ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಯುವಕರ ಆಮೂಲಾಗ್ರೀಕರಣವು ಭದ್ರತೆಯ ದೃಷ್ಟಿಯಿಂದ ಮಾತ್ರವಲ್ಲದೆ ಸಮಾಜದ ಸಾಮಾಜಿಕ ಆರ್ಥಿಕ ಪ್ರಗತಿಯ ಹಾದಿಯಲ್ಲಿ ಪ್ರಮುಖ ಅಡಚಣೆಯಾಗಿದೆ. ನಾವು ಎಸ್‌ಸಿಒಅನ್ನು ಬಲವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಸಂಘಟನೆಯನ್ನಾಗಿ ಮಾಡಲು ಬಯಸಿದರೆ, ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿರಬೇಕು ಎಂದು ರಕ್ಷಣಾ ಸಚಿವರು ಹೇಳಿದರು.
ಧನಸಹಾಯ ಮಾಡುವವರೇ ಹೊಣೆಗಾರಿಕೆ ಹೊರಬೇಕು: ಅಲ್ಲದೇ, ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಾಮೂಹಿಕವಾಗಿ ಕೆಲಸ ಮಾಡಬೇಕು. ಅಲ್ಲದೇ, ಅಂತಹ ಚಟುವಟಿಕೆಗಳಿಗೆ ಸಹಾಯ ಮಾಡುವ ಅಥವಾ ಧನಸಹಾಯ ಮಾಡುವವರನ್ನು ಅದಕ್ಕೆ ಹೊಣೆಗಾರಿಕೆಯನ್ನು ಮಾಡಬೇಕೆಂದು ರಾಜನಾಥ್ ಕರೆ ನೀಡಿದರು. ತಮ್ಮ ಕಾನೂನುಬದ್ಧ ಹಿತಾಸಕ್ತಿಗಳನ್ನು ನೋಡಿಕೊಳ್ಳುವ ಮೂಲಕ ಎಲ್ಲ ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪರಸ್ಪರ ಗೌರವಿಸುವ ಪ್ರಾದೇಶಿಕ ಸಹಕಾರದ ಚೌಕಟ್ಟನ್ನು ಭಾರತ ರೂಪಿಸುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ದೋಷಿ, 200 ರೂಪಾಯಿ ದಂಡ
ವಿಶ್ವಸಂಸ್ಥೆಯ ನಿಬಂಧನೆಗಳ ಆಧಾರದ ಮೇಲೆ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತ ಎಸ್‌ಸಿಒ ಸದಸ್ಯರಲ್ಲಿ ನಂಬಿಕೆ ಮತ್ತು ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಶ್ರಮಿಸುತ್ತದೆ. ಭಾರತವು ಯಾವಾಗಲೂ ಒಟ್ಟಾಗಿ ನಡೆಯೋಣ ಮತ್ತು ಒಟ್ಟಿಗೆ ಮುನ್ನಡೆಯೋಣ ಎಂಬ ತತ್ವವನ್ನು ಅನುಸರಿಸುತ್ತಿದೆ ಎಂದೂ ರಾಜನಾಥ್ ಪ್ರತಿಪಾದಿಸಿದರು.
ಇದೇ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚೀನಾದ ಸ್ಟೇಟ್ ಕೌನ್ಸಿಲರ್ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಚೀನಾ ರಕ್ಷಣಾ ಸಚಿವರೊಂದಿಗೆ ಕೈಕುಲುಕದೇ ಚೀನಾಕ್ಕೆ ಪರೋಕ್ಷವಾಗಿ ಭಾರತದ ಆಕ್ರೋಶವನ್ನು ರಾಜನಾಥ್ ವ್ಯಕ್ತಪಡಿಸಿದರು.
ಇದನ್ನೂ ಓದಿ: SCO: ಮುಂದಿನ ತಿಂಗಳು ಭಾರತಕ್ಕೆ ಬಿಲಾವಲ್ ಭುಟ್ಟೋ; ನವಾಜ್ ಷರೀಫ್ ಬಳಿಕ ಮಹತ್ವದ ಭೇಟಿ