ETV Bharat / bharat

ತಾಲಿಬಾನ್‌ಗಳು ಅಫ್ಘಾನ್‌ ಆಳಲು ಬಯಸಿದರೆ ಶರಿಯಾ ಕಾನೂನು ಅನುಸರಿಬೇಕು.. ಮಾಜಿ ಸಿಎಂ ಮೆಹಬೂಬಾ ಮುಫ್ತಿ - ಜಮ್ಮು-ಕಾಶ್ಮೀರ

ಅಫ್ಘಾನ್‌ನಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಇತರ ದೇಶಗಳು ಅವರೊಂದಿಗೆ ವ್ಯಾಪಾರ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಆದರೆ, ಅವರು ಮತ್ತೆ 1990ರ ಹಾದಿಯನ್ನು ಅನುಸರಿಸಿದರೆ, ಅದು ಅಫ್ಘಾನಿಸ್ತಾನದ ಜನರಿಗೆ ತೊಂದರೆಯಾಗುತ್ತದೆ..

PDP chief Mehbooba Mufti speaks in Kulgam on taliban rule
ತಾಲಿಬಾನ್‌ಗಳು ಅಫ್ಘಾನ್‌ ಆಳಲು ಬಯಸಿದರೆ, ಶರಿಯಾ ಕಾನೂನು ಅನುಸರಿಬೇಕು - ಮಾಜಿ ಸಿಎಂ ಮೆಹಬೂಬಾ ಮುಫ್ತಿ
author img

By

Published : Sep 8, 2021, 8:59 PM IST

ಕುಲ್ಗಾಮ್‌(ಜಮ್ಮು-ಕಾಶ್ಮೀರ) : ಉಗ್ರ ಸಂಘಟನೆ ತಾಲಿಬಾನ್‌ಗಳು ವಾಸ್ತವವಾಗಿ ಹೊರಹೊಮ್ಮುತ್ತಿದ್ದಾರೆ. ಈ ಸಂಘಟನೆ ಆಡಳಿತ ನಡೆಸಲು ಬಯಸಿದರೆ ಅಫ್ಘಾನಿಸ್ತಾನದಲ್ಲಿ ನಿಜವಾದ ಶರಿಯಾ ಕಾನೂನನ್ನು ಅನುಸರಿಸಬೇಕು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ತಾಲಿಬಾನ್‌ಗಳು ಅಫ್ಘಾನ್‌ ಆಳಲು ಬಯಸಿದರೆ ಶರಿಯಾ ಕಾನೂನು ಅನುಸರಿಬೇಕು - ಮಾಜಿ ಸಿಎಂ ಮೆಹಬೂಬಾ ಮುಫ್ತಿ

ಕುಲ್ಗಾಮ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ, ತಾಲಿಬಾನ್ ವಾಸ್ತವವಾಗಿ ಹೊರಹೊಮ್ಮುತ್ತಿದೆ. ಇವರ ಮೊದಲ ಆಡಳಿತದಲ್ಲಿ ಮಾನವ ವಿರೋಧಿ ಮನಸ್ಥಿತಿಯನ್ನು ಹೊಂದಿದ್ದರು. ಇದೀಗ ಮತ್ತೆ ಬಂದಿದ್ದಾರೆ. ಇವರು ನಿಜವಾಗಿಯೂ ಅಫ್ಘಾನಿಸ್ತಾನವನ್ನು ಆಳಲು ಬಯಸಿದರೆ, ಶರಿಯಾ ಕಾನೂನು ಅನುಸರಿಬೇಕು.

ಮಹಿಳಾ ಹಕ್ಕುಗಳು, ಮಕ್ಕಳು ಮತ್ತು ಇತರರನ್ನು ಒಳಗೊಂಡ ನೈಜ ಶರಿಯಾ ಕಾನೂನನ್ನು ಅನುಸರಿಸಿದರೆ ವಿಶ್ವಕ್ಕೆ ಉದಾಹರಣೆ ನೀಡಬಹುದೇ ಹೊರತು ಅವರ ಶರಿಯತ್‌ನ ವ್ಯಾಖ್ಯಾನವಲ್ಲ ಎಂದಿದ್ದಾರೆ.

ಅಫ್ಘಾನ್‌ನಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಇತರ ದೇಶಗಳು ಅವರೊಂದಿಗೆ ವ್ಯಾಪಾರ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಆದರೆ, ಅವರು ಮತ್ತೆ 1990ರ ಹಾದಿಯನ್ನು ಅನುಸರಿಸಿದರೆ, ಅದು ಅಫ್ಘಾನಿಸ್ತಾನದ ಜನರಿಗೆ ತೊಂದರೆಯಾಗುತ್ತದೆ ಎಂತಲೂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ತಾಲಿಬಾನ್‌ಗಳು ಅಫ್ಘಾನ್‌ನಲ್ಲಿ ಉತ್ತಮ ಆಡಳಿತ ನೀಡುತ್ತಾರೆ. ಆ ದೇಶದಲ್ಲಿ ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತಾರೆ. ಮಾನವ ಹಕ್ಕುಗಳನ್ನು ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಅವರು ಪ್ರತಿ ದೇಶದೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಹೇಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ತಾಲಿಬಾನ್‌ಗಳ ಕುರಿತು ಮುಫ್ತಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.