ETV Bharat / bharat

ಕರ್ನಾಟಕ, ಮಧ್ಯಪ್ರದೇಶ ಆಯ್ತು, ಇದೀಗ 'ಕೈ' ತಪ್ಪಿದ ಪುದುಚೇರಿ! - ಪುದುಚೇರಿಯಲ್ಲಿ ರಾಜಕೀಯ ಬಿಕ್ಕಟ್ಟು

ಪುದುಚೇರಿಯಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಮುಖ್ಯಮಂತ್ರಿ ನಾರಾಯಣಸ್ವಾಮಿ ರಾಜೀನಾಮೆ ನೀಡುವ ಮೂಲಕ ತಾರ್ಕಿಕ ಅಂತ್ಯಗೊಂಡಿದ್ದು, ಒಂದೇ ವರ್ಷದಲ್ಲಿ ಕಾಂಗ್ರೆಸ್ ಎರಡು ರಾಜ್ಯ ಕಳೆದುಕೊಂಡಿದೆ.

Puducherry
Puducherry
author img

By

Published : Feb 22, 2021, 3:47 PM IST

ನವದೆಹಲಿ: ಕಳೆದ ಕೆಲ ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ಸರ್ಕಾರ ಕಳೆದುಕೊಂಡಿದೆ. ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಇರುವಾಗಲೇ ಈ ಮಹತ್ವದ ಘಟನೆ ನಡೆದಿದೆ.

ಪುದುಚೇರಿಯಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದ ಕಾರಣ ಫೆ. 22ರೊಳಗೆ ಬಹುಮತ ಸಾಭೀತುಪಡಿಸುವಂತೆ ಲೆಫ್ಟಿನೆಂಟ್​ ಗವರ್ನರ್​ ತಮಿಳ್​​ಸಾಯಿ ಸೌಂದರ್​ರಾಜನ್​ ಆದೇಶ ನೀಡಿದ್ದರು. ಇದು ನಡೆದ ವಿಶ್ವಾಸಮತಯಾಚನೆಯಲ್ಲಿ ಪುದುಚೇರಿ ಸಿಎಂ ವಿ. ನಾರಾಯಣಸ್ವಾಮಿ ವಿಫಲವಾಗಿದ್ದು, ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಪುದುಚೇರಿ ಸಿಎಂ ವಿ. ನಾರಾಯಣಸ್ವಾಮಿ ರಾಜೀನಾಮೆ; ಅಧಿಕಾರ ಕಳೆದುಕೊಂಡ ಕಾಂಗ್ರೆಸ್

2016ರಲ್ಲಿ ನಡೆದ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ 15 ಕಾಂಗ್ರೆಸ್ ಶಾಸಕರು ಗೆಲುವು ದಾಖಲು ಮಾಡಿದ್ದು. ಇದಾದ ಬಳಿಕ ಅನೇಕ ಶಾಸಕರು, ಸಚಿವರು ರಾಜೀನಾಮೆ ನೀಡಿರುವ ಕಾರಣ ಸರ್ಕಾರ ಅಲ್ಪ ಮತಕ್ಕೆ ಕುಸಿತಗೊಂಡಿತ್ತು. 33 ಶಾಸಕರನ್ನು ಹೊಂದಿರುವ ಪುದುಚೇರಿ ವಿಧಾನಸಭೆಯಲ್ಲಿ ಪ್ರತಿಪಕ್ಷ 12 ಹಾಗೂ ಆಡಳಿತ ಪಕ್ಷ 14 ಸದಸ್ಯರ ಬಲ ಹೊಂದಿವೆ. ಇದೇ ಕಾರಣಕ್ಕಾಗಿ ಬಹುಮತ ಸಾಬೀತುಪಡಿಸುವಂತೆ ನೂತನ ಲೆಪ್ಟಿನೆಂಟ್​ ಗವರ್ನರ್ ಆದೇಶ ನೀಡಿದ್ದರು.

ವಿಧಾನಸಭೆ ಅವಧಿ ಮುಕ್ತಾಯಗೊಳ್ಳಲು ಆರು ತಿಂಗಳ ಬಾಕಿ ಇರುವ ಕಾರಣ ರಾಜ್ಯಪಾಲರು ಹೊಸ ಸರ್ಕಾರ ರಚನೆ ಮಾಡಲು ವಿಪಕ್ಷಗಳಿಗೆ ಆಹ್ವಾನ ಅಥವಾ ರಾಷ್ಟ್ರಪತಿ ಆಡಳಿತ ನಡೆಸಲು ಶಿಫಾರಸು ಮಾಡುವ ಸಾಧ್ಯತೆ ಇದೆ. ಕಳೆದ ವರ್ಷ ಕಮಲನಾಥ್​ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಅಧಿಕಾರ ಕಳೆದುಕೊಂಡಿತ್ತು.ಇದಕ್ಕೂ ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್​-ಜೆಡಿಎಸ್ ಸರ್ಕಾರ ಕೂಡ ಅಧಿಕಾರ ಕಳೆದುಕೊಂಡಿತ್ತು.

ಸದ್ಯ ಪಂಜಾಬ್​, ರಾಜಸ್ಥಾನ, ಛತ್ತೀಸಗಢದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದು, ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಬಿಜೆಪಿ ಮೇಲೆ ಆಕ್ರೋಶ ಹೊರಹಾಕಿರುವ ನಾರಾಯಣಸ್ವಾಮಿ ಆಪರೇಷನ್ ಕಮಲದ ಮೂಲಕ ಸರ್ಕಾರ ಕೆಡವಲಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.