ETV Bharat / bharat

ಆಂಧ್ರ ವಸತಿ ಯೋಜನೆಯಲ್ಲಿ ಹಗರಣ: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಪವನ್​ ಕಲ್ಯಾಣ್ - Jana Sena party

ಆಂಧ್ರಪ್ರದೇಶದ ಸಿಎಂ ಜಗನ್​​ಮೋಹನ್ ​ರೆಡ್ಡಿ ಸರ್ಕಾರ ಬಡವರಿಗೆ ಮನೆ ನಿರ್ಮಾಣ ಮಾಡುವ ಯೋಜನೆಯಲ್ಲಿ ಭಾರಿ ಅಕ್ರಮ ಎಸಗಿದೆ ಎಂದು ಜನಸೇನಾ ಪಕ್ಷದ ನಾಯಕ ಪವನ್​ ಕಲ್ಯಾಣ್​ ಗಂಭೀರ ಆರೋಪ ಮಾಡಿದ್ದಾರೆ.

ನಟ ಪವನ್​ ಕಲ್ಯಾಣ್​ ಪ್ರಧಾನಿಗೆ ಪತ್ರ
ನಟ ಪವನ್​ ಕಲ್ಯಾಣ್​ ಪ್ರಧಾನಿಗೆ ಪತ್ರ
author img

By ANI

Published : Dec 31, 2023, 11:56 AM IST

ನವದೆಹಲಿ: ಆಂಧ್ರಪ್ರದೇಶದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮತ್ತು ಮನೆ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೋರಿ ಜನಸೇನಾ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ, ಖ್ಯಾತ ನಟ ಪವನ್ ಕಲ್ಯಾಣ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸರ್ಕಾರ ಜಾರಿಗೆ ತಂದಿರುವ ಬಡವರಿಗೆ ಮನೆ ನಿರ್ಮಾಣ ಯೋಜನೆಯಲ್ಲಿ 35 ಸಾವಿರ ಕೋಟಿ ರೂ.ಯಷ್ಟು ಹಗರಣ ನಡೆದಿದೆ ಎಂದು ಹೇಳಲಾಗಿದೆ. ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರಿ ಕರಾಮತ್ತು ನಡೆಸಲಾಗಿದೆ. ಇದರ ಸತ್ಯಾಸತ್ಯತೆ ತಿಳಿಯಲು ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತಕ್ಷಣವೇ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ರಾಜ್ಯ ಸರ್ಕಾರವೇ ಒದಗಿಸಿದ ಅಂಕಿಅಂಶಗಳಲ್ಲೇ ದೋಷಗಳಿವೆ. ಇದನ್ನು ಗಮನಿಸಿದರೆ, ಹಗರಣ ನಡೆದಿದೆ ಎಂದು ಬಿಂಬಿತವಾಗುತ್ತದೆ. ಸಾರ್ವಜನಿಕ ಖಜಾನೆಯಿಂದ ಹಣ ದೋಚುವುದು ಹೆಚ್ಚಾಗಿದೆ. ಆಡಳಿತ ಪಕ್ಷದ (ವೈಎಸ್‌ಆರ್ ಕಾಂಗ್ರೆಸ್) ಶಾಸಕರೇ ಈ ಬಗ್ಗೆ ರಾಜ್ಯ ವಿಜಿಲೆನ್ಸ್ ಮತ್ತು ಜಾರಿ ಇಲಾಖೆಯಿಂದ ತನಿಖೆಗೆ ಕೋರಿದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಪ್ರಕರಣವನ್ನು ಕೇಂದ್ರದ ಏಜೆನ್ಸಿಗಳಿಂದಲೇ ತನಿಖೆ ನಡೆಸಿ ಎಂದು ಮನವಿ ಮಾಡಿದ್ದಾರೆ.

ಪವನ್​ ನೀಡಿದ ಅಂಕಿಅಂಶಗಳಿವು: ಆಂಧ್ರಪ್ರದೇಶದಲ್ಲಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಬಡವರಿಗೆ ಮನೆ ಹಂಚಿಕೆ ಮತ್ತು ಮನೆಗಳ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭಾರಿ ಹಗರಣ ನಡೆಸಿದೆ. 2019ರ ಜೂನ್​ನಲ್ಲಿ ಭೂಮಿಯ ಬೆಲೆಗಳನ್ನು ಉದ್ದೇಶಪೂರ್ವಕವಾಗಿ ದುಪ್ಪಟ್ಟು ಮಾಡಲಾಗಿದೆ. ಆದರೆ, ಭೂ ಮಾಲೀಕರಿಗೆ ಅಲ್ಪ ಹಣವನ್ನು ನೀಡಲಾಗಿದೆ. ಇದರಲ್ಲಿನ 'ಹೆಚ್ಚುವರಿ' ಹಣವನ್ನು ಆಡಳಿತ ಪಕ್ಷದ ನಾಯಕರು ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಭೂಮಿ ಮತ್ತು ವಸತಿ ಯೋಜನೆಯ ಅಂದಾಜು ಯೋಜನಾ ವೆಚ್ಚವೇ 1,75,421 ಕೋಟಿ ರೂಪಾಯಿ. ಅದರಲ್ಲಿ ರಾಜ್ಯ ಸರ್ಕಾರ 91,503 ಕೋಟಿ ರೂಪಾಯಿಗಳನ್ನು 2023ರ ಅಕ್ಟೋಬರ್​ವರೆಗೆ ಖರ್ಚು ಮಾಡಿದೆ ಎಂದು ಹೇಳಿಕೊಂಡಿದೆ. ಇದು ಖಂಡಿತವಾಗಿಯೂ ಸಂಶಯಾಸ್ಪದವಾಗಿದೆ. ವೈಎಸ್‌ಆರ್‌ಸಿಪಿ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ಸರ್ಕಾರದಿಂದ ಬಂದ ಅನುದಾನವನ್ನು ದೋಚಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಯೋಜನೆ?: ಆಂಧ್ರಪ್ರದೇಶದ ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಸರ್ಕಾರ ರಾಜ್ಯಾದ್ಯಂತ 30 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವ ಭರವಸೆಯೊಂದಿಗೆ ಎಲ್ಲಾ ಬಡವರಿಗೆ ಮನೆ ಯೋಜನೆಯನ್ನು ಪ್ರಾರಂಭಿಸಿದೆ. ಮೊದಲ ಹಂತದಲ್ಲಿ ಮನೆ ನಿರ್ಮಾಣಕ್ಕಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಗ್ರಾಮೀಣದಲ್ಲಿ ಭಾಗದಲ್ಲಿ 1 ಸೆಂಟ್ಸ್​, ನಗರದಲ್ಲಿ 1.5 ಸೆಂಟ್ಸ್ ಭೂಮಿ ನೀಡಿದೆ. ಇದರಲ್ಲಿ 29,51,858 (ಮಹಿಳೆ) ಫಲಾನುಭವಿಗಳನ್ನು ತೋರಿಸಲಾಗಿದೆ. ವಾಸ್ತವದಲ್ಲಿ 21,87,985 ಮಹಿಳೆಯರಿಗೆ ಮಾತ್ರ ಮನೆ ನಿವೇಶನದ ಹಕ್ಕು ಪತ್ರ ನೀಡಲಾಗಿದೆ. ಇದಕ್ಕಾಗಿ 28,554.64 ಎಕರೆ ಸರ್ಕಾರಿ ಭೂಮಿಯನ್ನು ಮನೆ ನಿವೇಶನವನ್ನಾಗಿ ಪರಿವರ್ತಿಸಲಾಗಿದೆ. ಇನ್ನೂ 25,374.66 ಎಕರೆಯನ್ನು ಖಾಸಗಿ ವ್ಯಕ್ತಿಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಎನ್​ಡಿಎ ಮೈತ್ರಿಕೂಟದಿಂದ ಜನಸೇನಾ ಹೊರಬರುವ ಬಗ್ಗೆ ವೈಎಸ್​ಆರ್​ ಕಾಂಗ್ರೆಸ್​ನಿಂದ ಅಪಪ್ರಚಾರ: ಪವನ್​ ಕಲ್ಯಾಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.