ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ನಟ ಮತ್ತು ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್ ಕಲ್ಯಾಣ್ ಭಾನುವಾರ ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರವಾಸದಲ್ಲಿದ್ದರು. ಈ ವೇಳೆ ಅಭಿಮಾನಿಯೋರ್ವ ಮಾಡಿದ ಎಡವಟ್ಟಿನಿಂದ ನಟ ಕಾರಿನ ಮೇಲೆಯೇ ಕಾಲು ಜಾರಿ ಬಿದ್ದಿದ್ದಾರೆ.
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕ ನಟ ಕಣ್ಮುಂದೆ ಇದ್ದರೇ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇದೇ ರೀತಿ ನಟ ಪವನ್ ಕಲ್ಯಾಣ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಹಂಬಲದಿಂದ ಅಭಿಮಾನಿಯೊಬ್ಬ ಸೆಕ್ಯೂರಿಟಿಯನ್ನು ಭೇದಿಸಿ, ಕಾರು ಹತ್ತಿ ನಟನ ಕಡೆ ಧಾನಿಸಿದ್ದಾನೆ. ಈ ವೇಳೆ ಆತ ಪವನ್ ಕಲ್ಯಾಣ್ ಅವರನ್ನು ತಬ್ಬಿಕೊಳ್ಳುವ ಭರದಲ್ಲಿ ಅವರನ್ನು ಕೆಳಗೆ ಕೆಡುವಿದ್ದಾನೆ.
ಇದನ್ನೂ ಓದಿ:ಟಾಕ್ ಆಫ್ ದಿ ಟೌನ್ 2022 ಫ್ಯಾಷನ್ ವೀಕ್ : ರಂಗಿನ ಉಡುಗೆ ತೊಟ್ಟು ಮಿಂಚಿದ ನಟಿಯರು
ಅಭಿಮಾನಿ, ನಟ ಪವನ್ ಕಲ್ಯಾಣ್ರನ್ನು ಮುಟ್ಟುತ್ತಿದ್ದಂತೆ ಅವರು ದಿಢೀರ್ ಕೆಳಗೆ ಬಿದ್ದಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ. ಈ ಘಟನೆಯಿಂದ ನಟ ಪವನ್ ಕಲ್ಯಾಣ್ ಜೊತೆಗೆ ಅಭಿಮಾನಿಗಳು ಸಹ ಆತಂಕಗೊಂಡಿದ್ದರು. ಆದ್ರೆ ಟಾಲಿವುಡ್ ಪವರ್ ಸ್ಟಾರ್ಗೆ ಈ ಘಟನೆಯಲ್ಲಿ ಏನು ಆಗಿಲ್ಲ, ಅಲ್ಲದೇ ಅವರು ಸುರಕ್ಷಿತವಾಗಿದ್ದಾರೆ.