ETV Bharat / bharat

ಎಲ್ಲ ನ್ಯಾಯಾಧೀಶರಿಗೆ ಆ್ಯಪಲ್​​ ಐಫೋನ್​ 13 ಪ್ರೊ ಪೂರೈಸಲು ಟೆಂಡರ್​ ಕರೆದ ಹೈಕೋರ್ಟ್​! - ಐಫೋನ್​ ಪೂರೈಸಲು ಟೆಂಡರ್​ ಕರೆದ ಪಾಟ್ನಾ ಹೈಕೋರ್ಟ್

ಒಂದು ಆ್ಯಪಲ್​​ ಐಫೋನ್​ 13 ಪ್ರೊ 256 ಜಿಬಿ ಡೇಟಾ ಸಾಮರ್ಥ್ಯವಿರುವ ಮೊಬೈಲ್​ ಬೆಲೆ 1.38 ಲಕ್ಷ ರೂ. ಇದೆ. ಹೈಕೋರ್ಟ್​ನಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಸೇರಿದಂತೆ 31 ನ್ಯಾಯಾಧೀಶರಿದ್ದಾರೆ.

Patna High Court to buy Apple iPhone for all judges
ಎಲ್ಲ ನ್ಯಾಯಾಧೀಶರಿಗೆ ಆ್ಯಪಲ್​​ ಐಫೋನ್​ 13 ಪ್ರೊ ಪೂರೈಸಲು ಟೆಂಡರ್​ ಕರೆದ ಹೈಕೋರ್ಟ್​
author img

By

Published : Jun 23, 2022, 3:15 PM IST

ಪಾಟ್ನಾ(ಬಿಹಾರ): ಪಾಟ್ನಾ ಹೈಕೋರ್ಟ್ ಎಲ್ಲ ನ್ಯಾಯಾಧೀಶರಿಗೆ ಆ್ಯಪಲ್​​ ಐಫೋನ್​ 13 ಪ್ರೊ ಒದಗಿಸಲು ಮುಂದಾಗಿದ್ದು, ಇದಕ್ಕಾಗಿ ಟೆಂಡರ್​ ಕೂಡ ಕರೆಯಲಾಗಿದೆ.

ಆ್ಯಪಲ್​​ ಐಫೋನ್​ 13 ಪ್ರೊ ಖರೀದಿ ಸಂಬಂಧ ಹೈಕೋರ್ಟ್‌ನ ವಿಶೇಷ ಕರ್ತವ್ಯ ಅಧಿಕಾರಿ ಕಚೇರಿಯಿಂದ ಮಂಗಳವಾರ ಅಧಿಕೃತ ಟೆಂಡರ್​ ಆದೇಶ ಹೊರಡಿಸಲಾಗಿದೆ. ಟೆಂಡರ್ ಪ್ರಕಾರ, ಪ್ರತಿಷ್ಠಿತ ಸಂಸ್ಥೆಗಳು, ಅಧಿಕೃತ ವಿತರಕರು, ಪೂರೈಕೆದಾರರು ತಮ್ಮ ಕೊಟೇಷನ್​ ಅನ್ನು ವಿಶೇಷ ಕರ್ತವ್ಯಾಧಿಕಾರಿಯ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಬಿಡ್​ದಾರರು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌, ಜಿಎಸ್‌ಟಿ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ದಾಖಲೆಗಳನ್ನೂ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಜೊತೆಗೆ ಫೋನ್​ ಪೂರೈಕೆದಾರ ಕಂಪನಿಗೆ ಮುಂಗಡವಾಗಿ ಯಾವುದೇ ಹಣ ಪಾವತಿಸುವುದಿಲ್ಲ ಎಂದೂ ಹೈಕೋರ್ಟ್ ಷರತ್ತು ಕೂಡ ಹಾಕಿದೆ.

ಅಲ್ಲದೇ, ಪೂರೈಸಿದ ನಂತರ ಸೂಕ್ತವಾದ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಮಾತ್ರವೇ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಟೆಂಡರ್​ ಆದೇಶದಲ್ಲಿ ತಿಳಿಸಲಾಗಿದೆ.ಇದೇ ವೇಳೆ ಯಾವುದೇ ಹಂತದಲ್ಲಿ ಬಿಡ್​ದಾರರ ಅರ್ಜಿಯನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಅವಕಾಶ ಇರುತ್ತದೆ. ಪೂರೈಕೆದಾರ ಕಂಪನಿಯನ್ನು ಅಂತಿಮಗೊಳಿಸಿದ ಬಳಿಕ ಆ ಕಂಪನಿ ನ್ಯಾಯಾಧೀಶರಿಗೆ ಫೋನ್‌ಗಳನ್ನು ಪೂರೈಸಲು ಸಿದ್ಧವಿರಬೇಕೆಂದು ಸ್ಪಷ್ಟಪಡಿಸಿದೆ.

ಒಂದು ಆ್ಯಪಲ್​​ ಐಫೋನ್​ ಪ್ರೊ 256 ಜಿಬಿ ಮೊಬೈಲ್​ ಬೆಲೆ 1.38 ಲಕ್ಷ ರೂ. ಇದೆ. ಹೈಕೋರ್ಟ್​ನಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಸೇರಿದಂತೆ 31 ನ್ಯಾಯಾಧೀಶರಿದ್ದಾರೆ.

ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಬರಲಿದೆ Realme GT Neo 3T: ಈ ಮೊಬೈಲ್​ನ​ ವಿಶೇಷತೆಗಳೇನು ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.