ನವದೆಹಲಿ: ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದಿಶಾ ರವಿ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಿ, ಪಟಿಯಾಲಾ ಹೌಸ್ ಕೋರ್ಟ್ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಆದೇಶಿಸಿದ್ದಾರೆ.
ದೆಹಲಿ ಪೊಲೀಸರು ಐದು ದಿನಗಳವರೆಗೆ ದಿಶಾ ರವಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಆದರೆ, ಕೇವಲ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಪಟಿಯಾಲಾ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ’ಪಶ್ಚಿಮ ಬಂಗಾಳ ಅಭಿವೃದ್ದಿಗಾಗಿ ಹಾತೊರೆಯುತ್ತಿದೆ’: 'ಬಂಗಾಳ ಕೀ ಬೇಟಿ' ವಿರುದ್ಧ ನಮೋ ವಾಗ್ದಾಳಿ
ದಿಶಾ ರವಿ ಅವರ ಮೂರು ದಿನಗಳ ನ್ಯಾಯಾಂಗ ಬಂಧನ ಇಂದಿಗೆ ಕೊನೆಯಾಗಲಿದ್ದ ಕಾರಣದಿಂದ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಹಿಂದಿನ ವಾರ ದಿಶಾ ರವಿ ಜಾಮೀನು ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯ ತೀರ್ಪನ್ನು ಕಾಯ್ದಿರಿಸಲಾಗಿದೆ.
ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದಿಶಾ ರವಿ ಈ ತಿಂಗಳಿನ ಆರಂಭದಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದರು. 22 ವರ್ಷದ ಇವರ ಮೇಲೆ ಮತ್ತು ನಿಕಿತಾ ಜಾಕೋಬ್, ಶಂತನು ಮುಲುಕ್ ಮೇಲೆ ಖಲಿಸ್ತಾನಿ ಪರ ಸಂಘಟನೆಯಾದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ನೊಂದಿಗೆ ಸಂಪರ್ಕ ಇರುವ ಆರೋಪ ಮಾತ್ರವಲ್ಲದೇ, ಸರ್ಕಾರದ ವಿರುದ್ಧ ಪಿತೂರಿಯ ಆರೋಪವೂ ಇದೆ.