ETV Bharat / bharat

Pathankot Airbase ಮೇಲಿನ ದಾಳಿಗೆ ಸ್ಥಳೀಯ ಭ್ರಷ್ಟ ಪೊಲೀಸರ ಸಾಥ್ : ಬುಕ್​ನಲ್ಲಿ ಉಲ್ಲೇಖ - ಜೈಶೆ ಸಂಘಟನೆ

ಮರುದಿನವೂ ಐಇಡಿ ಸ್ಫೋಟದಲ್ಲಿ ಇನ್ನೂ ನಾಲ್ವರು ಯೋಧರು ಹುತಾತ್ಮರಾದರು. ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಭದ್ರತಾ ಪಡೆ ಮೂರು ದಿನಗಳನ್ನು ತೆಗೆದುಕೊಂಡಿತು. ಯುದ್ಧದಿಂದ ಬೇಸತ್ತ ಪಾಕಿಸ್ತಾನದ ಮೇಲೆ ಭಾರತ ನಿರಂತರವಾಗಿ ಒತ್ತಡ ಹೇರಿತು. ಪಂಜಾಬ್ ಗಡಿಯ 91 ಕಿಲೋಮೀಟರ್​ಗಳಿಗಿಂತ ಹೆಚ್ಚು ಬೇಲಿ ಹಾಕಿರಲಿಲ್ಲ ಎಂದು ಪುಸ್ತಕದಲ್ಲಿ ಬರೆಯಲಾಗಿದೆ..

Pathankot Airbase
Pathankot Airbase
author img

By

Published : Aug 13, 2021, 9:22 PM IST

ನವದೆಹಲಿ : ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಲು ಜೈಶ್‌-ಏ ಸಂಘಟನೆಯ ಭಯೋತ್ಪಾದಕರ ಪ್ರವೇಶಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳೇ ನೆರವು ನೀಡಿದ್ದಾರೆಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

2016ರಲ್ಲಿ ನಡೆದ ಈ ದಾಳಿಗೂ ಮುನ್ನ ಸ್ಥಳೀಯ ಪೊಲೀಸರು ವಾಯುನೆಲೆಯಲ್ಲಿ ಶೋಧ ನಡೆಸಿದ್ದಾರೆಂದು ಶಂಕಿಸಲಾಗಿದೆ. ಅದರಲ್ಲಿ ಒಬ್ಬರು, ಯಾರೂ ಇಲ್ಲದ (ಸಿಸಿಟಿವಿಯೂ ಇಲ್ಲದ) ಸ್ಥಳ ಗುರುತಿಸಿದ್ದಾರೆ. ಅಲ್ಲಿ ಮದ್ದು-ಗುಂಡುಗಳು, ಗ್ರೆನೇಡ್‌ಗಳು, ಎಕೆ-47ಗಳನ್ನು ಅಡಗಿಸಲು ಸಹಾಯ ಮಾಡಿದ್ದಾರೆಂದು ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದೆ.

ಪತ್ರಕರ್ತರಾದ ಆಡ್ರಿಯನ್​ ಲೆವಿ ಮತ್ತು ಕ್ಯಾಥಿ ಸ್ಕಾಟ್-ಕ್ಲಾರ್ಕ್​​ ಅವರು ಬರೆದಿರುವ "ಸ್ಪೈ ಸ್ಟೋರೀಸ್ : ಇನ್‌ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ದಿ ರಾ(RAW) ಮತ್ತು ಐಎಸ್‌ಐನಲ್ಲಿ ಈ ಹೇಳಿಕೆ ಬರೆಯಲಾಗಿದೆ. ಜನವರಿ 2, 2016 ರಂದು ಭಾರತ-ಪಾಕಿಸ್ತಾನ ಪಂಜಾಬ್ ಗಡಿಯಲ್ಲಿರುವ ರಾವಿ ನದಿ ಬಳಿ ಭಾರತೀಯ ಸೇನೆಯ ಮೇಲೆ ಬಂದೂಕುಧಾರಿಗಳ ಗುಂಪೊಂದು ಏಕಾಏಕಿ ದಾಳಿ ನಡೆಸಿತು.

ಕೆಲವರು ಸೇನೆಯ ವಾಹನಗಳ ಮೂಲಕ ಪಠಾಣ್​ ಕೋಟ್ ವಾಯುನೆಲೆಯತ್ತ ನುಗ್ಗಿದರು. ಈ ವೇಳೆ ಭಯೋತ್ಪಾದಕರು ಸೇನೆಯ ಮೇಲೆ ಗುಂಡಿನ ಮಳೆಗೈದಿದ್ದು, ಹಲವು ಸೈನಿಕರು ಹುತಾತ್ಮರಾದರು. ಇದೇ ವೇಳೆ ನಾಲ್ವರು ದಾಳಿಕೋರರನ್ನು ಸೇನೆ ಹೊಡೆದುರುಳಿಸಿತು.

ಮರುದಿನವೂ ಐಇಡಿ ಸ್ಫೋಟದಲ್ಲಿ ಇನ್ನೂ ನಾಲ್ವರು ಯೋಧರು ಹುತಾತ್ಮರಾದರು. ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಭದ್ರತಾ ಪಡೆ ಮೂರು ದಿನಗಳನ್ನು ತೆಗೆದುಕೊಂಡಿತು. ಯುದ್ಧದಿಂದ ಬೇಸತ್ತ ಪಾಕಿಸ್ತಾನದ ಮೇಲೆ ಭಾರತ ನಿರಂತರವಾಗಿ ಒತ್ತಡ ಹೇರಿತು. ಪಂಜಾಬ್ ಗಡಿಯ 91 ಕಿಲೋಮೀಟರ್​ಗಳಿಗಿಂತ ಹೆಚ್ಚು ಬೇಲಿ ಹಾಕಿರಲಿಲ್ಲ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಭಾರತೀಯ ಮಿತ್ರರಾಷ್ಟ್ರಗಳು ವಾಯುನೆಲೆಯ ಮೇಲೆ ಶೋಧ ನಡೆಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಈ ಪೊಲೀಸರಲ್ಲಿ ಒಬ್ಬರು ಯಾವುದೇ ಸೌಲಭ್ಯವಿಲ್ಲದ ಪ್ರದೇಶವನ್ನು ಪತ್ತೆ ಹಚ್ಚಿದರು.

ಫ್ಲಡ್‌ಲೈಟ್‌ಗಳಿಲ್ಲದ, ಸಿಸಿಟಿವಿ ಕ್ಯಾಮೆರಾಗಳಿಲ್ಲದ ಪ್ರದೇಶದ ಮೂಲಕ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡಿದರು. ಹಗ್ಗಗಳ ಸಹಾಯದಿಂದ ಸುಮಾರು 50 ಕಿ.ಮೀ ದೂರದಷ್ಟು ಗ್ರೆನೇಡ್​, ಎಕೆ-47 ಗನ್​ಗಳನ್ನು ಇರಿಸಿಕೊಳ್ಳಲಾಗಿತ್ತು. ಭಾರಿ ಶಸ್ತ್ರಸಜ್ಜಿತ ಜೈಶ್‌-ಏ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರು ವಾಯುನೆಲೆಗೆ ನುಗ್ಗಿ ಸೈನಿಕರು, ಅಧಿಕಾರಿಗಳನ್ನು ಕೊಂದರು ಎಂದು ಪುಸ್ತಕದಲ್ಲಿ ಲೇಖಕರು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.