ETV Bharat / bharat

ಹರಕೆ ತೀರಿಸಲು ವಿಶಿಷ್ಟ ಆಚರಣೆ: 20 ಅಡಿ ಎತ್ತರದ ಅಟ್ಟಣಿಗೆ ಹತ್ತಿ ಹಗ್ಗದಿಂದ ತಿರುಗುವ ಭಕ್ತರು!

ಪಟೇಲಿಯಾ ಬುಡಕಟ್ಟಿನ ಜನರು ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇಲ್ಲಿ ಅವರು 20 ಅಡಿ ಎತ್ತರದ ಅಟ್ಟಣಿಗೆ ಮೇಲೆ ಹತ್ತಿ ಹಗ್ಗದ ಸಹಾಯದಿಂದ ತಿರುಗುತ್ತಾರೆ.

patelia-tribal-winding-up-to-20-feet-high-with-loft-in-guna

author img

By

Published : Apr 2, 2021, 6:10 PM IST

Updated : Apr 2, 2021, 7:10 PM IST

ಗುನಾ (ಮಧ್ಯ ಪ್ರದೇಶ): ಇಲ್ಲಿನ ಬಮೋರಿ ಪ್ರದೇಶದಲ್ಲಿ ಪಟೇಲಿಯಾ ಬುಡಕಟ್ಟು ಜನಾಂಗದವರು ವಿಶೇಷ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಲ್ಲಿ ಅವರು ಲಕ್ಕಾಡ್ ದೇವ್ ಅವರನ್ನು ಪೂಜಿಸುತ್ತಾರೆ. ಇದರಲ್ಲಿ ಭಕ್ತರು ಅಟ್ಟಣಿಗೆ ಮೇಲೆ ಹತ್ತಿ ಹರಕೆ ಹೊತ್ತ ವ್ಯಕ್ತಿಯನ್ನು ಹಗ್ಗದ ಸಹಾಯದಿಂದ ತಿರುಗಿಸುತ್ತಾರೆ.

25ರಿಂದ 30 ಹಳ್ಳಿಗಳಿಂದ ಜನರು ಡುಮಾವಾನ್, ರಾಹಪುರ, ಭಿಲಾ, ಝೀರಿ ಅಥವಾ ಭೈನ್‌ಸಟೋರಿಯ ಗ್ರಾಮಗಳಲ್ಲಿ ಯಾವುದಾದರೂ ಒಂದು ಗ್ರಾಮವನ್ನು ತಲುಪುತ್ತಾರೆ. ಈ ಹಳ್ಳಿಗಳಲ್ಲಿ ಲಕ್ಕಾಡ್ ದೇವ್ ಸ್ಥಳಗಳಿದ್ದು, ಇಲ್ಲಿ 20 ಅಡಿ ಎತ್ತರದ ಅಟ್ಟಣಿಗೆ ಇದೆ. ಇದು ನೆಲದಿಂದ ಸುಮಾರು 20 ಅಡಿ ಎತ್ತರದಲ್ಲಿದ್ದು, ಹರಕೆ ಹೊತ್ತವರು ತಮ್ಮ ಹರಕೆ ಸಾಕಾರಗೊಂಡರೆ ಇಲ್ಲಿ ಬಂದು ತೀರಿಸುತ್ತಾರೆ.

20 ಅಡಿ ಎತ್ತರದ ಅಟ್ಟಣಿಗೆ ಹತ್ತಿ ಹಗ್ಗದಿಂದ ತಿರುಗುವ ಭಕ್ತರು

ಬಮೋರಿ ಪ್ರದೇಶದಲ್ಲಿ ಲಕ್ಕಾಡ್ ಅವರ ನಾಲ್ಕು ಸ್ಥಳಗಳಿವೆ. ಅಲ್ಲಿ ಹರಕೆ ಹೊತ್ತರೆ ಲಕ್ಕಾಡ್ ದೇವ್ ತಮ್ಮ ಆಸೆಗಳನ್ನೆಲ್ಲಾ ಈಡೇರಿಸುತ್ತಾನೆ ಎಂಬುವುದು ಗ್ರಾಮಸ್ಥರ ನಂಬಿಕೆ.

ಹರಕೆ ಹೊತ್ತವರು ಎಷ್ಟು ಸುತ್ತು ಸುತ್ತುತ್ತಾರೆ ಎಂಬುದನ್ನು ಒಂದು ವರ್ಷ ಮುಂಚಿತವಾಗಿ ನಿರ್ಧರಿಸುತ್ತಾರೆ. 20 ಅಡಿ ಎತ್ತರದ ಅಟ್ಟಣಿಗೆ ಮೇಲೆ 7 ಅಡಿ ಉದ್ದದ ಹಗ್ಗವನ್ನು ನೇತುಹಾಕಲಾಗುತ್ತದೆ. ಹಗ್ಗದ ಒಂದು ತುದಿಯನ್ನು ಹರಕೆ ತೀರಿಸುವ ವ್ಯಕ್ತಿ ಹಿಡಿದುಕೊಂಡು, ಇನ್ನೊಂದು ತುದಿಯನ್ನು 6-7 ಜನರು ಹಿಡಿದು ಹಗ್ಗವನ್ನು ತಿರುಗಿಸುತ್ತಾರೆ.

ಪ್ರತಿ ವರ್ಷ ಈ ಹಬ್ಬವನ್ನು ಹೋಳಿಯ ಸಮಯದಲ್ಲಿ ಆಯೋಜಿಸಲಾಗುತ್ತದೆ. ಸುತ್ತಮುತ್ತಲಿನ 25ರಿಂದ 30 ಹಳ್ಳಿಗಳಿಂದ ಜನರು ಲಕ್ಕಾಡ್ ದೇವ್‌ನ ಒಂದು ಸ್ಥಳದಲ್ಲಿ ಒಟ್ಟುಗೂಡುತ್ತಾರೆ ಮತ್ತು ಹರಕೆ ತೀರಿಸುತ್ತಾರೆ.

Last Updated : Apr 2, 2021, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.