ನವದೆಹಲಿ: ಕೋವಿಡ್ -19 ಸಂಬಂಧಿತ ತೊಂದರೆಗಳಿಂದಾಗಿ ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಡೈರಿ ಬ್ಯುಸಿನೆಸ್ ಸಿಇಒ ಸುನಿಲ್ ಬನ್ಸಾಲ್ ನಿಧನರಾಗಿದ್ದರು. ಆದರೆ, ಆತನ ಅಲೋಪತಿ ಚಿಕಿತ್ಸೆಗೂ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದಿದೆ.
ಮೇ 19ರಂದು ನಿಧನರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಡೈರಿ ವಿಭಾಗದ ಉಪಾಧ್ಯಕ್ಷರಾಗಿದ್ದ ಬನ್ಸಾಲ್ ಅವರು 2018ರ ಜನವರಿಯಲ್ಲಿ ಪತಂಜಲಿಯ ಡೈರಿ ವಿಭಾಗದ ಉಸ್ತುವಾರಿ ವಹಿಸಿಕೊಂಡರು. ಆ ಸಮಯದಲ್ಲಿ ಪತಂಜಲಿ ಹಸುವಿನ ಪೂರ್ವಸಿದ್ಧ ಹಾಲು ಮತ್ತು ಮೊಸರು, ಮಜ್ಜಿಗೆ ಮತ್ತು ಚೀಸ್ ಸೇರಿದಂತೆ ಇತರ ಹಾಲು ಆಧಾರಿತ ಉತ್ಪನ್ನಗಳನ್ನು ಮಾರಾಟ ಮಾಡುವ ಯೋಜನೆಯನ್ನು ಪ್ರಕಟಿಸಿದ್ದರು.
ಇನ್ನೂ ಬನ್ಸಾಲ್ ಸಾವಿಗೂ ಮೊದಲು ಯೋಗ ಗುರು ಬಾಬಾ ರಾಮ್ದೇವ್ ಅಲೋಪತಿ ಚಿಕಿತ್ಸೆ ಕುರಿತು ನೀಡಿರುವ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಬನ್ಸಾಲ್ಗೆ ಕೋವಿಡ್ ದೃಢಪಟ್ಟಿದ್ದ ಹಿನ್ನೆಲೆ ಅವರು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು. ಅಲ್ಲಿ ಅವರ ಪತ್ನಿ ರಾಜಸ್ಥಾನ ಸರ್ಕಾರದ ಹಿರಿಯ ಆರೋಗ್ಯ ಅಧಿಕಾರಿಯಾಗಿದ್ದಾರೆ ಎಂದು ಹರಿದ್ವಾರ ಮೂಲದ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪತಂಜಲಿ ಸಂಸ್ಥೆ ಬನ್ಸಾಲ್ ಅವರ ಅಲೋಪತಿ ಚಿಕಿತ್ಸೆಯಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ, ಅದು ಅವರ ಪತ್ನಿಯೇ ನೋಡಿಕೊಳ್ಳುತ್ತಿದ್ದರು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಅಲ್ಲದೇ ಅವರ ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ರಾಮ್ದೇವ್ ಅವರು ಅಲೋಪತಿ ಚಿಕಿತ್ಸೆ ಕುರಿತಂತೆ ನೀಡಿದ್ದ ಹೇಳಿಕೆಗೆ ಭಾರಿ ವಿರೋಧ ಕೇಳಿಬಂದಿತ್ತು. ಅಲೋಪತಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷಾಂತರ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ ಎಂದಿದ್ದರು. ಈ ಹೇಳಿಕೆಯನ್ನ ಬಳಿಕ ಅವರು ಹಿಂತೆಗೆದುಕೊಂಡರು.