ETV Bharat / bharat

ಭಾರತದಲ್ಲಿ ಪ್ಯಾಸೆಂಜರ್​ ವಾಹನ ಮಾರಾಟದಲ್ಲಿ ಶೇ 10 ರಷ್ಟು ಕುಸಿತ - Passenger vehicle sales in India dip 10 pc in April

ಮಾರ್ಚ್ 2021 ಕ್ಕೆ ಹೋಲಿಸಿದರೆ ಪ್ರಯಾಣಿಕರ ವಾಹನಗಳ ಮಾರಾಟವು ಶೇಕಡಾ 10.07 ರಷ್ಟು ಕುಸಿದಿದೆ. ಕೊರೊನಾ ನಿರ್ಬಂಧಗಳು, ಬೇಡಿಕೆಯ ಮೇಲೆ ಪರಿಣಾಮ ಬೀರಿವೆ ಎಂದು ವಾಹನ ಉದ್ಯಮ ಸಂಸ್ಥೆ ಸಿಯಾಮ್ ತಿಳಿಸಿದೆ.

Passenger vehicle sales in India dip 10 pc in April
ಭಾರತದಲ್ಲಿ ಪ್ಯಾಸೆಂಜರ್​ ವಾಹನ ಮಾರಾಟದಲ್ಲಿ ಶೇ 10 ರಷ್ಟು ಕುಸಿತ
author img

By

Published : May 12, 2021, 2:19 PM IST

ನವದೆಹಲಿ: ಭಾರತದಲ್ಲಿ ಪ್ಯಾಸೆಂಜರ್​ ವಾಹನಗಳ ಸಗಟು ಮಾರಾಟವು ಕಳೆದ ತಿಂಗಳು ಶೇ 10 ರಷ್ಟು ಕುಸಿದು 2,61,633 ಕ್ಕೆ ತಲುಪಿದೆ. ಈ ವರ್ಷದ ಮಾರ್ಚ್‌ಗೆ ಹೋಲಿಸಿದರೆ ವಿವಿಧ ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳು ಬೇಡಿಕೆಯ ಮೇಲೆ ಪರಿಣಾಮ ಬೀರಿವೆ ಎಂದು ವಾಹನ ಉದ್ಯಮ ಸಂಸ್ಥೆ ಸಿಯಾಮ್ ತಿಳಿಸಿದೆ.

ಮಾರ್ಚ್ 2021 ರಲ್ಲಿ ಪ್ರಯಾಣಿಕರ ವಾಹನ ಮಾರಾಟ 2,90,939 ಯೂನಿಟ್ ಆಗಿತ್ತು. ಕೊರೊನಾ ವೈರಸ್ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣ 2020 ರ ಏಪ್ರಿಲ್‌ನಲ್ಲಿ ಪ್ರಯಾಣಿಕರ ವಾಹನ ಮಾರಾಟ ಇರಲಿಲ್ಲ.

"ನಿರೀಕ್ಷೆಯಂತೆ, ಕೊರೊನಾ ಏಪ್ರಿಲ್ 2021 ರಲ್ಲಿ ವಾಹನಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಮಾರ್ಚ್ 2021 ಕ್ಕೆ ಹೋಲಿಸಿದರೆ ಪ್ರಯಾಣಿಕರ ವಾಹನಗಳ ಮಾರಾಟವು ಶೇ 10.07 ರಷ್ಟು ಕುಸಿದಿದೆ. ಕೊರೊನಾ ಉಲ್ಬಣವನ್ನು ಅನುಭವಿಸುತ್ತಿರುವ ರಾಜ್ಯಗಳಲ್ಲಿನ ವಿವಿಧ ನಿರ್ಬಂಧಗಳಿಂದಾಗಿ ಈ ಪರಿಣಾಮ ಬೀರಿದೆ”ಎಂದು ಸಿಯಾಮ್ ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ (ಸಿಯಾಮ್) ಇತ್ತೀಚಿನ ಮಾಹಿತಿಯ ಪ್ರಕಾರ, ಮಾರಾಟಗಾರರಿಗೆ ದ್ವಿಚಕ್ರ ವಾಹನ ರವಾನೆ ಕಳೆದ ತಿಂಗಳು ಶೇ 33 ರಷ್ಟು ಇಳಿದು 9,95,097 ಕ್ಕೆ ತಲುಪಿದೆ.

ಮೋಟಾರ್‌ಸೈಕಲ್ ಮಾರಾಟವು ಶೇಕಡಾ 33 ರಷ್ಟು ಕುಸಿದು 6,67,841 ಕ್ಕೆ ತಲುಪಿದ್ದು, ಈ ವರ್ಷದ ಮಾರ್ಚ್‌ನಲ್ಲಿ 9,93,996 ರಷ್ಟಿದೆ. ಅಂತೆಯೇ, ಸ್ಕೂಟರ್ ಮಾರಾಟವು ಮಾರ್ಚ್‌ನಲ್ಲಿ 4,57,677 ಯುನಿಟ್‌ಗಳಿಂದ ಶೇ 34 ರಷ್ಟು ಕುಸಿದು 3,00,462 ಕ್ಕೆ ತಲುಪಿದೆ.

ಈ ವರ್ಷದ ಮಾರ್ಚ್‌ನಲ್ಲಿ 31,930 ಯುನಿಟ್‌ಗಳಿಗೆ ಹೋಲಿಸಿದರೆ ತ್ರಿಚಕ್ರ ಮಾರಾಟವು ಶೇಕಡಾ 57 ರಷ್ಟು ಇಳಿದು 13,728 ಕ್ಕೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.