ETV Bharat / bharat

ವಿಮಾನ ಹಾರಾಟದ ವೇಳೆ ಏರ್ ಇಂಡಿಯಾ ಅಧಿಕಾರಿಗೆ ಹಲ್ಲೆ ನಡೆಸಿದ ಪ್ರಯಾಣಿಕ - ನಾಗರಿಕ ವಿಮಾನಯಾನ ಮಹಾನಿರ್ದೇಶನಾಲ

ಸಿಡ್ನಿಯಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ದುರ್ವರ್ತನೆ ತೋರಿರುವುದು ಬೆಳಕಿಗೆ ಬಂದಿದೆ.

ಏರ್​ ಇಂಡಿಯಾ ವಿಮಾನ
ಏರ್​ ಇಂಡಿಯಾ ವಿಮಾನ
author img

By

Published : Jul 16, 2023, 8:09 AM IST

Updated : Jul 16, 2023, 9:43 AM IST

ನವದೆಹಲಿ: ಆಸ್ಟ್ರೇಲಿಯಾದ ಸಿಡ್ನಿಯಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಏರ್ ಇಂಡಿಯಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಇತರ ಸಹ ಪ್ರಯಾಣಿಕರೊಂದಿಗೂ ದುರ್ವರ್ತನೆ ತೋರಿದ್ದಾರೆ ಎಂದು ಏರ್‌ಲೈನ್ಸ್‌ ವಕ್ತಾರರು ಶನಿವಾರ ತಿಳಿಸಿದ್ದಾರೆ. ಜುಲೈ 9ರಂದು ಸಿಡ್ನಿಯಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI 301 ವಿಮಾನದಲ್ಲಿದ್ದ ಪ್ರಯಾಣಿಕ, ಎಲ್ಲ ಎಚ್ಚರಿಕೆಗಳನ್ನು ನೀಡಿದ ಹೊರತಾಗಿಯೂ ಅಶಿಸ್ತು ಪ್ರದರ್ಶಿಸಿದರು ಎಂದು ಸಂಸ್ಥೆ ತಿಳಿಸಿದೆ.

ವಿಮಾನ ಸಿಬ್ಬಂದಿ, ಪ್ರಯಾಣಿಕರಿಗೆ ಈ ಘಟನೆ ತೊಂದರೆ ಉಂಟುಮಾಡಿತ್ತು. ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆದ ತಕ್ಷಣ ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಬಳಿಕ ಆತ ಕ್ಷಮೆ ಯಾಚಿಸಿದರು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿದೆ ಎಂದು ಏರ್‌ಲೈನ್ ವಕ್ತಾರರು ಮಾಹಿತಿ ನೀಡಿದರು.

ವಿಮಾನ ವಿಳಂಬ, ಕಾದು ಸುಸ್ತಾದ ಪ್ರಯಾಣಿಕರು : ಜುಲೈ 10ರ ರಾತ್ರಿ 11 ಗಂಟೆಗೆ ಏರ್​ ಇಂಡಿಯಾ ವಿಮಾನ ಮಂಗಳೂರಿನಿಂದ ದುಬೈಗೆ ಹೊರಡಬೇಕಿತ್ತು. ಆದರೆ ವಿಮಾನ ಮರುದಿನ ಬೆಳಗ್ಗೆಯಾದರೂ ಹೊರಡದೇ ನಿಲ್ದಾಣದಲ್ಲೇ ಬಾಕಿಯಾಗಿತ್ತು. ಪ್ರಯಾಣಿಕರು ರಾತ್ರಿಯಿಡೀ ಕಾದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಏರ್​ ಇಂಡಿಯಾ ಪ್ರತಿಕ್ರಿಯಿಸಿ, "ವಿಮಾನ ವಿಳಂಬದಿಂದ ನಮ್ಮ ಅತಿಥಿಗಳಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ತಾಂತ್ರಿಕ ದೋಷದಿಂದಾಗಿ 12 ಗಂಟೆಗಳಿಗೂ ಹೆಚ್ಚು ವಿಳಂಬವಾಯಿತು" ಎಂದು ತಿಳಿಸಿತ್ತು.

ಪೇಚಿಗೆ ಸಿಲುಕಿದ 350ಕ್ಕೂ ಪ್ರಯಾಣಿಕರು! : ಲಂಡನ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ಜೈಪುರದಲ್ಲಿ ಜೂನ್ 25ರಂದು ತುರ್ತು ಭೂಸ್ಪರ್ಶಿಸಿತ್ತು. ಕ್ಲಿಯರೆನ್ಸ್​ ಸಿಕ್ಕ ಬಳಿಕ ಪೈಲಟ್ ತನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ತಿಳಿಸಿ ವಿಮಾನ ಹಾರಿಸಲು ನಿರಾಕರಿಸಿದ್ದರು. ಇದರಿಂದ 350ಕ್ಕೂ ಹೆಚ್ಚು ಪ್ರಯಾಣಿಕರು ಜೈಪುರ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದರು. 6 ಗಂಟೆ ಕಳೆದರೂ ಜನರ ಪ್ರಯಾಣಕ್ಕೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಕೊನೆಗೆ ಪ್ರಯಾಣಿಕರು ಬಸ್​, ಕ್ಯಾಬ್​ಗಳ ಮೂಲಕ ತಮ್ಮ ಸ್ಥಳ ತಲುಪಿದ್ದರು.

ಇದನ್ನೂ ಓದಿ: ಮಂಗಳೂರಿನಿಂದ ದುಬೈಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ವಿಳಂಬ.. ಪ್ರಯಾಣಿಕರ ಆಕ್ರೋಶ

Last Updated : Jul 16, 2023, 9:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.