ETV Bharat / bharat

ಮೋದಿ ಸರ್ಕಾರ್ ಜಿಂದಾಬಾದ್.. ಹಿಂದೂಸ್ತಾನ್ ಜಿಂದಾಬಾದ್ ಎಂದು ಹಾಡಿ ಹೊಗಳುವ ಗಿಳಿ.. Video

ಜಮುಯಿ ಜಿಲ್ಲೆಯ ಲಕ್ಷ್ಮೀಪುರ ಬ್ಲಾಕ್‌ನ ಟೆಟಾರಿಯಾ ಗ್ರಾಮದ ಮಂಟುಸಾವ್ ಅವರು ಸಾಕಿದ ಗಿಳಿಯೂ ಜೈ ಶ್ರೀರಾಮ, ಮೋದಿ ಸರ್ಕಾರ್ ಜಿಂದಾಬಾದ್ ಎಂದು ಮಾತನಾಡುತ್ತಿದೆ. ಗಿಳಿಯೂ ಮಾತನಾಡುವುದನ್ನೂ ನೋಡಲು ದೂರಿನ ಊರು, ಪಟ್ಟಣಗಳಿಂದ ಜನರು ಮುಗಿಬಿದ್ದಿದ್ದಾರೆ.

author img

By

Published : Aug 1, 2023, 10:52 PM IST

Updated : Aug 1, 2023, 11:09 PM IST

ಮೋದಿ ಸರ್ಕಾರ್ ಜಿಂದಾಬಾದ್ ಹಾಡಿ ಹೊಗಳುವ ಗಿಳಿ
ಮೋದಿ ಸರ್ಕಾರ್ ಜಿಂದಾಬಾದ್ ಹಾಡಿ ಹೊಗಳುವ ಗಿಳಿ
ಮೋದಿ ಸರ್ಕಾರ್ ಜಿಂದಾಬಾದ್ ಹಾಡಿ ಹೊಗಳುವ ಗಿಳಿ

ಜಮುಯಿ(ಬಿಹಾರ): ಗಿಳಿ ಸ್ಪಷ್ಟವಾಗಿ ಮಾತನಾಡಬಲ್ಲದೆಂದು ತಾವೂ ಯೋಚಿಸಿದ್ದೀರಾ? ಗಿಳಿ ವಿವಿಧ ರೀತಿ ಧ್ವನಿ ಮಾಡಬಲ್ಲದು.. ಹಾಡುವುದನ್ನು ಕೇಳಿ ತಾವೂ ಆನಂದಿಸಿರಬಹದು. ಆದರೆ ಬಿಹಾರದ ಜಮುಯಿ ಜಿಲ್ಲೆಯ ಹಳ್ಳಿಯೊಂದರ ಗಿಳಿಯೊಂದು ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳುತ್ತಿದೆ.. ಇದು ಬಿಹಾರ ರಾಜ್ಯಾದ್ಯಂತ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ..

ಈ ಗಿಳಿಯೂ ಜೈ ಶ್ರೀ ರಾಮ್.. ಮೋದಿ ಸರ್ಕಾರ್​ ಜಿಂದಾಬಾದ್ ಸ್ಪಷ್ಟವಾಗಿ ಹಾಡುತ್ತದೆ. ಇಷ್ಟೇ ಅಲ್ಲ, ಹಿಂದೂಸ್ತಾನದ ಬಗ್ಗೆ ಮಾತನಾಡುತ್ತಿದ್ದ ವೇಳೆ ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿದೆ. ಈ ಗಿಳಿಯನ್ನು ನೋಡಲು ದಂಡು ದಂಡಾಗಿ ಜನರು ಟೆಟಾರಿಯಾ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಈ ಗಿಳಿ ಬೆಳಗಿನ ಜಾವದವರೆಗೆ ನರೇಂದ್ರ ಮೋದಿ ಜಿಂದಾಬಾದ್, ಮೋದಿ ಸರ್ಕಾರ್ ಜಿಂದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಲೇ ಇರುತ್ತದೆ ಎನ್ನುತ್ತಾರೆ ಮಂಟು ಸಾವ್.

ನಾಲ್ಕು ವರ್ಷಗಳ ಹಿಂದೆ ಜಮುಯಿ ಜಿಲ್ಲೆಯ ಲಕ್ಷ್ಮೀಪುರ ಬ್ಲಾಕ್‌ನ ಟೆಟಾರಿಯಾ ಗ್ರಾಮದ ಮಂಟು ಸಾವ್ ಎಂಬ ವ್ಯಕ್ತಿ ಈ ಗಿಳಿಯನ್ನು ಕಾಡಿನಿಂದ ತನ್ನ ಮನೆಗೆ ತಂದು ಸಾಕಿದ್ದನು. ಈ ಕಾರ್ಮಿಕ ರೈತ ತನ್ನ ಮುದ್ದಿನ ಗಿಳಿಗೆ ಹಿಂದೂಸ್ತಾನ್ ಎಂಬ ಘೋಷಣೆ ಕೂಗುವ ರೀತಿ ತರಬೇತಿ ನೀಡಿದ್ದನು. ಅದೇ ರೀತಿ ಜಿಂದಾಬಾದ್ ಮತ್ತು ಮೋದಿ ಸರ್ಕಾರ್ ಜಿಂದಾಬಾದ್, ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತಿದೆ. ಅಷ್ಟೇ ಅಲ್ಲ, ಅದಕ್ಕೆ ಹಸಿವು ಆಗಿದ್ದಾಗ ಆಹಾರ ಮತ್ತು ಬಾಯಾರಿಕೆಯಾದಾಗ ನೀರಿಗಾಗಿ ಸ್ಪಷ್ಟವಾಗಿ ಮಾತನಾಡುತ್ತದೆ.

ಗಿಳಿಯು ಮೋದಿ ಅಭಿಮಾನಿ: ಕೃಷಿ ಕಾರ್ಮಿಕ ಮಂಟು ಸಾವ್​ ಗಿಳಿಗೆ ತರಬೇತಿ ನೀಡಿದ ಬಳಿಕ, ಮಾನವರಂತೆ ಭಾಷೆಯಲ್ಲಿ ಮಾತನಾಡುತ್ತದೆ. 100 ವಿವಿಧ ಉಪಭಾಷೆಗಳಲ್ಲಿ ಧ್ವನಿ ಮಾಡುತ್ತದೆ. ಗಿಳಿ ಯಾವಾಗಲೂ ಮೋದಿ ಮತ್ತು ಮೋದಿ ಸರ್ಕಾರ ಹೊಗಳುತ್ತದೆ. ಕೃಷಿ ಕಾರ್ಮಿಕ ಮಂಟು ಸಾವ್​ ಕೂಡ ಮೋದಿ ಅಭಿಮಾನಿಯಾಗಿದ್ದು, ಹೀಗಾಗಿ ಗಿಳಿಯೂ ಸಹ ತನ್ನ ಮಾಲೀಕನ ತರಹ ಮೋದಿ ಸರ್ಕಾರದ ಅಭಿಮಾನಿಯಾಗಿ ಮಾರ್ಪಟ್ಟು ಜನರ ಮೆಚ್ಚುಗೆ ಗಳಿಸಿದೆ.

ಗಿಳಿಗೆ ದೈನಂದಿನ ಆಹಾರ: ಗಿಳಿ ದಿನನಿತ್ಯ ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿ ಹಾಗೂ ವಿವಿಧ ರೀತಿಯ ಹಣ್ಣುಗಳನ್ನು ತಿನ್ನುತ್ತದೆ. ಹಾಲಿನ ಕೆನೆಯೊಂದಿಗೆ ಅಕ್ಕಿ ಮತ್ತು ರೊಟ್ಟಿಯನ್ನು ತಿನ್ನುತ್ತದೆ. ಆದರೆ ಬೆಕ್ಕು ಅಥವಾ ಹದ್ದು ದಾಳಿ ಮಾಡದಂತೆ ಭದ್ರತೆ ದೃಷ್ಟಿಯಿಂದ ಕೃಷಿ ಕಾರ್ಮಿಕ ಮಂಟು ಸಾವ್​ ಅದನ್ನು ಪಂಜರದಲ್ಲಿ ಸಾಕಿ ಬೆಳೆಸಿದ್ದಾನೆ.

ಕುಟುಂಬದ ಜನರ ಮನ ಗೆದ್ದ ಗಿಳಿ: ಗಿಳಿ ಮನೆಯಲ್ಲಿ ಇದ್ದಾಗಿನಿಂದ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ. ಕೆಲಸದಿಂದ ದಣಿದಿರುವಾಗ ಅಥವಾ ಯಾವುದೋ ವಿಷಯದ ಬಗ್ಗೆ ಟೆನ್ಶನ್‌ನಿಂದ ಹಿಂತಿರುಗಿದಾಗ ಗಿಳಿ ಧ್ವನಿ ಕೇಳಿ ಅದೆಲ್ಲ ಮರೆತು ಹೋಗುತ್ತದೆ. ಕೆಲವೊಮ್ಮೆ ಹಾಡು ಕೇಳಿ ಮೈಂಡ್ ಫ್ರೆಶ್ ಆಗುತ್ತಿದೆ. ದಿನನಿತ್ಯ ಕೆಲ ಸಮಯ ಗಿಳಿಯೊಂದಿಗೆ ಕಳೆಯುತ್ತಾರೆ ಈ ಕುಟುಂಬಸ್ಥರು.

ಬಿಹಾರದಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತಿರುವಾಗ, ಕೃಷಿ ಕಾರ್ಮಿಕ ಮಂಟು ಸಾವ್ ಸಾಕಿದ ಗಿಳಿ ದೇಶದ ಪ್ರಧಾನಿ ನರೇಂದ್ರ ಮೋದಿ ಜಿಂದಾಬಾದ್, ಮೋದಿ ಸರ್ಕಾರ್ ಜಿಂದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂದು ಮಾತನಾಡುತ್ತಿರುವುದು ಬಿಹಾರದಲ್ಲಿ ಹೊಸ ಅಲೆ ಸೃಷ್ಟಿಸುತ್ತಿದೆ. ಈಗ ಹೊಸ ರಾಜಕೀಯ ಟ್ರೆಂಡ್​ಗೆ ಶಕ್ತಿ ತುಂಬುತ್ತಿದೆ.

ಇದನ್ನೂ ಓದಿ: Nandini ghee.. ತಿರುಪತಿಗೆ ನಂದಿನಿ ತುಪ್ಪ ಸರಬರಾಜು ರದ್ದು.. ಕೆಎಂಎಫ್​ಗೆ ಲಾಭ, ನಷ್ಟದ ಲೆಕ್ಕಾಚಾರ: ತುಪ್ಪದಲ್ಲೂ ಏನಿದು ರಾಜಕೀಯ?

Last Updated : Aug 1, 2023, 11:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.