ನವದೆಹಲಿ: ಕೇಂದ್ರ ಆಯವ್ಯಯ 2021ರ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನದ ಮೊದಲ ಭಾಗ ನಿನ್ನೆಗೆ ಮುಕ್ತಾಯವಾಯಿತು. ಮೇಲ್ಮನೆಯ ಮಾರ್ಚ್ 8ರವರೆಗೆ ಮುಂದೂಡಲ್ಪಟ್ಟಿದ್ದು, ಶನಿವಾರದ ರಾಜ್ಯಸಭೆಯ ಚರ್ಚೆಯನ್ನು ರದ್ದುಪಡಿಸಲಾಗಿದೆ.
ನಿನ್ನೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಶ್ರೀಮಂತರ ಬಜೆಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸೀತಾರಾಮನ್ ಅವರು, ಅನುಭವ ಮತ್ತು ಆಡಳಿತಾತ್ಮಕ ಸಾಮರ್ಥ್ಯದ ಆಧಾರದಲ್ಲಿ ಈ ಬಜೆಟ್ ಮಂಡಿಸಲಾಗಿದೆ. ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ಸುದೀರ್ಘ ಅವಧಿಯ ಮೋದಿಯವರ ಆಡಳಿತದ ಅನುಭವದಲ್ಲಿ ಅಭಿವೃದ್ಧಿ, ಬೆಳವಣಿಗೆ ಹಾಗೂ ಸುಧಾರಣೆಗಳ ಕುರಿತಾದ ಬದ್ಧತೆಗೆ ರೂಪಕವಾಗಿ ಈ ಆಯವ್ಯಯ ರೂಪಿಸಲಾಗಿದೆ ಎಂದರು.
ಇದನ್ನೂ ಓದಿ: ಹಿಮನದಿ ಸ್ಫೋಟ: ಸುರಂಗದಲ್ಲಿ ಸಿಲುಕಿದ ಕಾರ್ಮಿಕ 5 ದಿನಗಳ ಬಳಿಕ ಫೋನ್ ಕಾಲ್ ರಿಸೀವ್!
ನಿನ್ನೆ ಲೋಕಸಭೆಯಲ್ಲಿ 2021ರ ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಹೊಸದಾಗಿ ಆಯ್ಕೆಯಾದ ರಾಜ್ಯಸಭಾ ಸಂಸದರನ್ನು ಭೇಟಿಯಾದರು.