ETV Bharat / bharat

ದೂರಸಂಪರ್ಕ, ಚುನಾವಣಾ ಆಯುಕ್ತರ ನೇಮಕ ಮಸೂದೆ ಅಂಗೀಕಾರ: ಮಹತ್ವವೇನು? - ರಾಜ್ಯಸಭೆ

ದೂರಸಂಪರ್ಕ ಮಸೂದೆ ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಗಳು ಅಂಗೀಕಾರವಾಗಿವೆ.

telecom-election-commissioners-appointment-bills-passed

author img

By PTI

Published : Dec 21, 2023, 3:49 PM IST

ನವದೆಹಲಿ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ದೂರಸಂಪರ್ಕ ಸೇವೆಗಳ ಮೇಲೆ ತಾತ್ಕಾಲಿಕವಾಗಿ ನಿಯಂತ್ರಣ ಸಾಧಿಸುವ ಮತ್ತು ಹರಾಜಿಲ್ಲದೆ ಉಪಗ್ರಹ ತರಂಗಾಂತರಗಳನ್ನು ಹಂಚಿಕೆ ಮಾಡಲು ಸರ್ಕಾರಕ್ಕೆ ಅವಕಾಶ ನೀಡುವ ಮಸೂದೆಯನ್ನು ಸಂಸತ್ತು ಗುರುವಾರ ಅಂಗೀಕರಿಸಿದೆ. ದೂರಸಂಪರ್ಕ ಮಸೂದೆ, 2023 ಅನ್ನು ರಾಜ್ಯಸಭೆ ಗುರುವಾರ ಧ್ವನಿ ಮತದ ಮೂಲಕ ಅಂಗೀಕರಿಸಿತು.

ಲೋಕಸಭೆಯಲ್ಲಿ ಬುಧವಾರ ಸಣ್ಣ ಚರ್ಚೆಯ ನಂತರ ಈ ಮಸೂದೆ ಅಂಗೀಕಾರವಾಗಿತ್ತು. ಯಾವುದೇ ಸಾರ್ವಜನಿಕ ತುರ್ತು ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಟೆಲಿಕಾಂ ನೆಟ್​ವರ್ಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಇದು ಕೇಂದ್ರಕ್ಕೆ ಅವಕಾಶ ನೀಡುತ್ತದೆ. ಇದಲ್ಲದೆ ಸಾರ್ವಜನಿಕ ತುರ್ತು ಸಂದರ್ಭದಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ, ಅಪರಾಧವೆಸಗಲು ಪ್ರಚೋದನೆ ನೀಡುವುದನ್ನು ತಡೆಗಟ್ಟಲು ಸಂದೇಶಗಳ ಪ್ರಸಾರವನ್ನು ನಿಲ್ಲಿಸಲು ಮತ್ತು ತಡೆಹಿಡಿಯಲು ಇದು ಅವಕಾಶ ನೀಡುತ್ತದೆ.

ಮಸೂದೆಯ ಪ್ರಕಾರ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ವರದಿಗಾರರ ಪತ್ರಿಕಾ ಸಂದೇಶಗಳನ್ನು ಸಾರ್ವಜನಿಕ ತುರ್ತು ಪರಿಸ್ಥಿತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅನ್ವಯವಾಗುವ ನಿಯಮಗಳ ಅಡಿಯಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸದ ಹೊರತು ಅವುಗಳನ್ನು ತಡೆಹಿಡಿಯಲಾಗುವುದಿಲ್ಲ ಅಥವಾ ಅವುಗಳು ಓದಲ್ಪಡುವುದಿಲ್ಲ.

ರಾಜ್ಯಸಭೆಯಲ್ಲಿ ಚರ್ಚೆಗೆ ಉತ್ತರಿಸಿದ ಸಂವಹನ ಸಚಿವ ಅಶ್ವಿನಿ ವೈಷ್ಣವ್, ಎರಡು ವಸಾಹತುಶಾಹಿ ಯುಗದ ಕಾನೂನುಗಳನ್ನು ಬದಲಾಯಿಸುವ ನವ ಭಾರತದ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದೂರಸಂಪರ್ಕ ಮಸೂದೆ 2023 ಅನ್ನು ತರಲಾಗುತ್ತಿದೆ ಎಂದು ಹೇಳಿದರು. "ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಭಾರತದ ಟೆಲಿಕಾಂ ಕ್ಷೇತ್ರವು ಪ್ರಕಾಶಮಾನವಾಗಿ ಬೆಳಗುತ್ತಿದೆ" ಎಂದು ಸಚಿವರು ಪ್ರತಿಪಾದಿಸಿದರು.

ಇದೇ ಅವಧಿಯಲ್ಲಿ, ಟೆಲಿಕಾಂ ಟವರ್​ಗಳ ಸಂಖ್ಯೆ 2014 ರಲ್ಲಿ ಕೇವಲ 6 ಲಕ್ಷ ಇದ್ದದ್ದು ಪ್ರಸ್ತುತ 25 ಲಕ್ಷಕ್ಕೆ ಏರಿದೆ ಮತ್ತು ಇಂಟರ್ನೆಟ್ ಬ್ರಾಡ್​ಬ್ಯಾಂಡ್​ ಬಳಕೆದಾರರ ಸಂಖ್ಯೆ ಹಿಂದಿನ 1.5 ಕೋಟಿಯಿಂದ ಇಂದು 85 ಕೋಟಿಗೆ ಏರಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತವು ಸ್ಥಳೀಯವಾಗಿ ತಯಾರಿಸಿದ ಉಪಕರಣಗಳೊಂದಿಗೆ ವಿಶ್ವದ 5ಜಿ ತಂತ್ರಜ್ಞಾನವನ್ನು ವೇಗವಾಗಿ ಜಾರಿಗೊಳಿಸಿದೆ ಎಂದು ಅವರು ಹೇಳಿದರು.

ಚುನಾವಣಾ ಆಯುಕ್ತರ ನೇಮಕಾತಿ ಮಸೂದೆ ಪಾಸ್: ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಕಾರ್ಯವಿಧಾನವನ್ನು ಜಾರಿಗೊಳಿಸುವ ಮಸೂದೆಯನ್ನು ಲೋಕಸಭೆ ಗುರುವಾರ ಸಂಕ್ಷಿಪ್ತ ಚರ್ಚೆಯ ನಂತರ ಅಂಗೀಕರಿಸಿತು.

ಚರ್ಚೆಗೆ ಉತ್ತರಿಸಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಸಿಇಸಿ ಮತ್ತು ಇಸಿಗಳ ಸೇವಾ ಷರತ್ತುಗಳ ಬಗ್ಗೆ 1991 ರ ಕಾಯ್ದೆ ಅಪೂರ್ಣವಾಗಿತ್ತು ಮತ್ತು ಪ್ರಸ್ತುತ ಮಸೂದೆಯು ಹಿಂದಿನ ಶಾಸನಗಳಲ್ಲಿ ಬಿಟ್ಟುಹೋದ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು. ನಂತರ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಮಸೂದೆ, 2023ಕ್ಕೆ ರಾಜ್ಯಸಭೆ ಈಗಾಗಲೇ ಅನುಮೋದನೆ ನೀಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪ ಸಮಿತಿ ರಚನೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.