ETV Bharat / bharat

ಸಂಸತ್ ಕಲಾಪಗಳಿಗೆ ನಿರಂತರ ಅಡೆತಡೆ: ಜಗದೀಪ್ ಧನಕರ್ ಬೇಸರ - ಬಜೆಟ್ ಅಧಿವೇಶನ

ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಯಾವುದೇ ಸಮಸ್ಯೆಗಳಿಲ್ಲದ ಸಮಯ ಎಂದಿಗೂ ಇರಲಾರದು ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಹೇಳಿದರು. ಇದೇ ವೇಳೆ ಸಂಸತ್‌ ಕಲಾಪಗಳು ವ್ಯರ್ಥವಾಗುತ್ತಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

Rajya Sabha Chairman Jagdeep Dhankhar
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್
author img

By

Published : Mar 31, 2023, 11:58 AM IST

ನವದೆಹಲಿ: ಬಜೆಟ್ ಅಧಿವೇಶನದ ಉಭಯ ಸದನಗಳ ಕಲಾಪಗಳಿಗೆ ಪ್ರತಿಪಕ್ಷಗಳು ನಿರಂತರ ಅಡ್ಡಿಪಡಿಸುತ್ತಿದ್ದು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ಸಂಸತ್ತಿನಲ್ಲಿ ಅವ್ಯವಸ್ಥೆ ಸಾಮಾನ್ಯ ಕ್ರಮವಾಗಿದೆ ಎಂದು ಹೇಳಿದ್ದಾರೆ.

"ಕ್ರಿಯಾತ್ಮಕ ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಯಾವುದೇ ಸಮಸ್ಯೆಗಳಿಲ್ಲದ ಸಮಯ ಎಂದಿಗೂ ಇರುವುದಿಲ್ಲ. ಇವುಗಳನ್ನು ಸಹಕಾರಿ ನಿಲುವುಗಳನ್ನು ಆಶ್ರಯಿಸಿ ಪರಿಹರಿಸಬೇಕಾಗಿದೆ" ಎಂದು ಇದೇ ವೇಳೆ ಧನಕರ್ ಸಲಹೆ ನೀಡಿದ್ದಾರೆ. ನ್ಯೂಸ್ 18 ಆಯೋಜಿಸಿದ್ದ 'ರೈಸಿಂಗ್ ಇಂಡಿಯಾ ಶೃಂಗಸಭೆ'ಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಸಂವಾದ ಮತ್ತು ಚರ್ಚೆ ಗೊಂದಲಗಳಿಂದ ಪೀಡಿತವಾಗಿವೆ. ಸಂಸತ್ತಿನಲ್ಲಿ ಇದು ಮಾಮೂಲಿಯಾಗಿದೆ ಎಂದು ವಿಷಾದಿಸಿದರು.

ಅದಾನಿ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳ ಬೇಡಿಕೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಬಗ್ಗೆ ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಒತ್ತಾಯಿಸಿದ ಹಿನ್ನೆಲೆ ಮಾ.13 ರಂದು ಆರಂಭವಾದ ಬಜೆಟ್ ಅಧಿವೇಶನದ ಎರಡನೇ ಹಂತದ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಯಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಇಂತಹ ಭಿನ್ನಾಭಿಪ್ರಾಯಗಳನ್ನು ವ್ಯವಸ್ಥಿತವಾಗಿ ಪರಿಹರಿಸಬೇಕೇ ಹೊರತು ಘರ್ಷಣೆಯ ಮೂಲಕ ಅಲ್ಲ ಎಂದು ಉಪ ರಾಷ್ಟ್ರಪತಿ ಸಲಹೆ ನೀಡಿದರು.

ಇದನ್ನೂ ಓದಿ: ಅದಾನಿ ಗ್ರೂಪ್​ ವಿರುದ್ಧ ಆರೋಪ ಕುರಿತು ಚರ್ಚೆಗೆ ವಿರೋಧ ಪಕ್ಷಗಳ ಒತ್ತಾಯ: ಸಂಸತ್ತಿನ ಉಭಯ ಸದನ ಮುಂದೂಡಿಕೆ

ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ: ಅದಾನಿ ವಿವಾದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ಕೇಂದ್ರದ ವಿರುದ್ಧ ಖಂಡನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಕಪ್ಪು ಬಟ್ಟೆ ಧರಿಸಿ ಸಂಸತ್ತಿನ ಸಂಕೀರ್ಣದಿಂದ ರಾಷ್ಟ್ರ ರಾಜಧಾನಿಯ ವಿಜಯ್ ಚೌಕ್'ನತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.

ರಾಜಕೀಯ ಕಾರ್ಯತಂತ್ರದ ಭಾಗವಾಗಿ ನಿರಂತರ ಅಡೆತಡೆ ಬಗ್ಗೆ ಉಪ ರಾಷ್ಟ್ರಪತಿ ಬೇಸರ ವ್ಯಕ್ತಪಡಿಸಿದರು. ಇದು ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲಭೂತ ಅಂಶಗಳಿಗೆ ವಿರುದ್ಧವಾಗಿದೆ. ಜತೆಗೆ, ಶಾಸಕಾಂಗದ ಸದಸ್ಯರು ತಮ್ಮ ಶಾಸಕಾಂಗ ಜವಾಬ್ದಾರಿಗಳು ಮತ್ತು ಪಕ್ಷದ ಜವಾಬ್ದಾರಿಗಳ ನಡುವೆ ವ್ಯತ್ಯಾಸವನ್ನು ಗಮನಿಸಬೇಕು ಎಂದರು. ಸಾಂವಿಧಾನಿಕ ಉದ್ದೇಶಗಳನ್ನು ಸಾಧಿಸಲು ರಾಷ್ಟ್ರದ ಎಲ್ಲಾ ಮೂರು ಅಂಗಗಳ ನಡುವೆ ಸಹಕಾರ ಸಮನ್ವ ಅಗತ್ಯ. ಮೂರು ಅಂಗಗಳ ನಡುವಿನ ಆರೋಗ್ಯಕರ ಪರಸ್ಪರ ಕ್ರಿಯೆಯಲ್ಲಿ ಕ್ರಿಯಾತ್ಮಕ ಸಮತೋಲನವನ್ನು ಸಾಧಿಸುವುದು ಸಾಂವಿಧಾನಿಕ ಆಡಳಿತವಾಗಿದೆ ಎಂದು ಜಗದೀಪ್ ಧನಕರ್ ಹೇಳಿದರು.

ಇದನ್ನೂ ಓದಿ: ರಾಹುಲ್​ ಹೇಳಿಕೆ, ಅದಾನಿ ತನಿಖೆ ಗದ್ದಲ: ಸಂಸತ್​ ಸಮಯ ವ್ಯರ್ಥ, ಕಲಾಪ ಮುಂದೂಡಿಕೆ

ವಿಪಕ್ಷಗಳ ಗುದ್ದಾಟಕ್ಕೆ ಸಾಕ್ಷಿ: ಬಜೆಟ್​ ಮಂಡನೆಯಾದ ತಿಂಗಳ ಬಳಿಕ ಆರಂಭವಾದ 2ನೇ ಚರಣದ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ತೀವ್ರ ಗುದ್ದಾಟಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಲಂಡನ್​ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದಾರೆ ಎಂಬುದನ್ನು ಆಡಳಿತ ಪಕ್ಷ ಬಲವಾಗಿ ವಿರೋಧಿಸುತ್ತಿದೆ. ಸದನದ ಸದಸ್ಯರೊಬ್ಬರು ಈ ರೀತಿ ದೇಶದ ಮರ್ಯಾದೆಯನ್ನು ವಿದೇಶದಲ್ಲಿ ಹಾಳು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಅವರು ದೇಶದ ಜನರಿಗೆ ಸಂಸತ್ತಿನಲ್ಲಿ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.