ETV Bharat / bharat

ಪಾರ್ಕಿಂಗ್​ ​ಲಾಟ್​ ಕುಸಿತ: ಹಲವಾರು ವಾಹನಗಳು ಜಖಂ, ಸಿಸಿಟಿವಿಯಲ್ಲಿ ವಿಡಿಯೋ ಸೆರೆ - ಪಾರ್ಕಿಂಗ್​ ಲಾಟ್​ ಕುಸಿದಿರುವ ಘಟನೆ

ನಿರ್ಮಾಣ ಹಂತದ ಕಟ್ಟಡದ ನೆಲಮಾಳಿಗೆ ಅಗೆಯುವಾಗ ಪಾರ್ಕಿಂಗ್​ ಲಾಟ್​ ಕುಸಿದಿರುವ ಘಟನೆ ನಡೆದಿದೆ.

ಪಾರ್ಕಿಂಗ್​ ​ಲಾಟ್​ ಕುಸಿತ
ಪಾರ್ಕಿಂಗ್​ ​ಲಾಟ್​ ಕುಸಿತ
author img

By

Published : Jun 15, 2023, 10:30 AM IST

ಪಾರ್ಕಿಂಗ್​ ​ಲಾಟ್​ ಕುಸಿತ

ಮೊಹಾಲಿ (ಪಂಜಾಬ್): ​ ಮೊಹಾಲಿ ಜಿಲ್ಲೆಯ ಸೆಕ್ಟರ್ - 83 ಪ್ರದೇಶದಲ್ಲಿನ ಪಾರ್ಕಿಂಗ್ ಸ್ಥಳ ಕುಸಿದು ಬಿದ್ದ ಹಲವಾರು ವಾಹನಗಳು ಹಾನಿಗೊಳಗಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಅವಶೇಷಗಳಡಿ ಹಲವಾರು ವಾಹನಗಳು ಹೂತು ಹೋಗಿದ್ದು ಅದೃಷ್ಟವಶಾತ್​ ಘಟನೆ ಸಂಭವಿಸಿದ ವೇಳೆ ಯಾರೊಬ್ಬರು ಪಾರ್ಕಿಂಗ್​ ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಅಲ್ಲದೇ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ: ಸೆಕ್ಟರ್​ 83 ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡದ ನೆಲಮಾಳಿಗೆಯನ್ನು ಅಗೆಯುವ ಕಾರ್ಯ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಲಾಟ್​ ಕುಸಿದಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರಲ್ಲಿ ಎರಡು ಕಾರುಗಳು ಪಾರ್ಕಿಂಗ್​ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಅಲ್ಲದೇ ಕೆಲವು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಆದರೇ ಯಾವುದೆ ಪ್ರಾಣಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಮೊಹಾಲಿ ಡಿಎಸ್‌ಪಿ ಹರ್ಸಿಮ್ರಾನ್ ಸಿಂಗ್, ಸೆಕ್ಟರ್ 83 ರ ಐಟಿ ಸಿಟಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮಧ್ಯಾಹ್ನ 12.45 ರ ಸುಮಾರಿಗೆ ನಿರ್ಮಾಣ ಹಂತದ ಕಟ್ಟಡದ ನೆಲಮಾಳಿಗೆ ಅಗೆಯುವಾಗ ಈ ಘಟನೆ ನಡೆದಿದೆ. ಇದರಲ್ಲಿ 9 ರಿಂದ 10 ವಾಹನಗಳು ಮತ್ತು ಒಂದೆರಡು ಕಾರುಗಳು ಸಂಪೂರ್ಣವಾಗಿ ಹಾನಿಯಾಗಿವೆ.

ಅನುಮತಿ ಮಿತಿ ಮೀರಿ ಕಟ್ಟಡದ ನೆಲಮಾಳಿಗೆಯ ಭೂಮಿಯನ್ನು ಅಗೆದು ಅಡಿಪಾಯ ದುರ್ಬಲಗೊಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೊಣೆಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ಸಿಂಗ್ ತಿಳಿಸಿದ್ದಾರೆ.

ನಿರ್ಮಾಣ ಹಂತದ ಸೇತುವ ಕುಸಿತ: ಕೆಲ ದಿನಗಳ ಹಿಂದೆ ಬಿಹಾರದ ಭಾಗಲ್ಪುರದಲ್ಲಿ ನಿರ್ಮಾಣ ಹಂತದ ಬೃಹತ್​ ಸೇತುವೆ ಕುಸಿದು ಬಿದ್ದಿತ್ತು. ಗಂಗಾ ನದಿಗೆ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿತ್ತು. ಸುಲ್ತಾನ್​ ಗಂಜ್​ ಮತ್ತು ಅಗುವಾನಿ ನಡುವಿನ ಗಂಗಾನದಿಗೆ ಸೇತುವೆ ನಿರ್ಮಾಣ ಮಾಡಲಾಗುತಿತ್ತು. ಸುಮಾರು ನೂರು ಮೀಟರ್​ ಉದ್ದದ ಸೇತುವೆ ಏಕಾಏಕಿ ಕುಸಿದು ಬಿದ್ದಿತ್ತು. ಈ ಹಿಂದೆಯೂ ಇದೇ ಸೇತುವೆ ಕುಸಿದು ಬಿದ್ದಿತ್ತು. ಅದರ ತನಿಖೆ ನಡೆಯುತ್ತಿರುವಾಗಲೇ ಸೇತುವೆ ಕುಸಿದಿದ್ದು, ಕಳಪೆ ಕಾಮಗಾರಿ ಮಾತು ಕೇಳಿ ಬಂದಿದ್ದವು.

ಮೂರು ಅಂತಸ್ತಿನ ಕಟ್ಟಡ ನಲಸಮ: ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನಲ್ಲಿ ನಡೆದ ಘಟನೆಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿತ್ತು. ವರ್ಧಮಾನ್ ಎಂಬ ಹೆಸರಿನ ಮೂರು ಅಂತಸ್ತಿನ ಕಟ್ಟಡವು ಏಕಾಏಕಿ ನೆಲಕ್ಕುರುಳಿತ್ತು. ಕಟ್ಟಡದಲ್ಲಿ ನಾಲ್ಕು ವಿವಿಧ ಕಂಪನಿಗಳ ಗೋದಾಮುಗಳನ್ನು ಇದ್ದವರು. ಬಳಿಕ ಬೃಹತ್ ರಕ್ಷಣಾ ಕಾರ್ಯ ನಡೆಸಿ ನಾಲ್ವರನ್ನು ರಕ್ಷಣೆ ಮಾಡಲಾಗಿತ್ತು.

ಬಹುಮಹಡಿ ಕಟ್ಟಡ ಕುಸಿತ: ರಾಷ್ಟ್ರ ರಾಜಧಾನಿ ದೆಹಲಿಯ ಭಜನ್​ಪುರ ಪ್ರದೇಶದಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಘಟನೆ ಕಳೆದ ತಿಂಗಳು ನಡೆದಿತ್ತು. ಮೊಬೈಲ್​​ನಲ್ಲಿ ಕಟ್ಟಡ ಕುಸಿಯುತದ ವಿಡಿಯೋ ಸೆರೆಯಾಗಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ಮಾಡಿದ್ದರು.

ಇದನ್ನೂ ಓದಿ: ಕುಸಿದು ಬಿತ್ತು ನಿರ್ಮಾಣ ಹಂತದ ಬೃಹತ್​ ಸೇತುವೆ : ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.