ಮಧುರೈ(ತಮಿಳುನಾಡು): ಕಂಠಪೂರ್ತಿ ಕುಡಿದು ಮನೆಯಲ್ಲಿ ಪ್ರತಿದಿನ ಜಗಳವಾಡ್ತಿದ್ದ ಮಗನನ್ನ ಹೆತ್ತ ತಂದೆ-ತಾಯಿಯೇ ಕೊಲೆ ಮಾಡಿ, ನಂತರ ಸುಟ್ಟು ಹಾಕಿರುವ ಘಟನೆ ಮಧುರೈನಲ್ಲಿ ನಡೆದಿದೆ. ಮೃತ ವ್ಯಕ್ತಿ ಮಣಿಕಂದನ್(46) ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.
ಮಧುರೈನ ವೈಗೈ ನದಿಯ ಬಳಿ ಗೋಣಿ ಚೀಲದಲ್ಲಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಕೊಲೆ ಮಾಡಿರುವವರ ಬಗ್ಗೆ ಮಾಹಿತಿ ಗೊತ್ತಾಗಿದೆ.
ಇದನ್ನೂ ಓದಿರಿ: ನನಸಾಗದ ಕಾರು ಖರೀದಿ ಕನಸು.. ಗುಜರಿ ವಸ್ತುಗಳಿಂದ ಸ್ಪೋರ್ಟ್ಸ್ ಕಾರು ತಯಾರಿಸಿದ ಹಳ್ಳಿ ಪ್ರತಿಭೆ!
ಮದ್ಯವ್ಯಸನಿ ಆಗಿದ್ದ ಮಣಿಕಂದನ್ ಪ್ರತಿದಿನ ಕಂಠಪೂರ್ತಿ ಕುಡಿದು ಮನೆಯಲ್ಲಿ ಜಗಳವಾಡುತ್ತಿದ್ದನು. ಇದರಿಂದ ಆತನ ಕುಟುಂಬ ರೋಸಿ ಹೋಗಿತ್ತು. ಇದೇ ಕಾರಣಕ್ಕಾಗಿ ಹೆತ್ತವರು ಆತನ ಕೊಲೆ ಮಾಡಿದ್ದಾರೆ. ಮೃತದೇಹ ಪತ್ತೆಯಾಗಿರುವ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಣಿಕಂದನ್ ಕೊಲೆ ಮಾಡಿರುವ ಪೋಷಕರು ಮೃತದೇಹ ಸೈಕಲ್ ಮೇಲೆ ಇಟ್ಟುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಇದೀಗ ಮರುಗೇಶನ್ ಮತ್ತು ಕೃಷ್ಣವೇಣಿಯನ್ನ ಬಂಧಿಸಲಾಗಿದೆ. ಮೃತ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ