ತೆಲಂಗಾಣ : ಕೋಟಿ ಆಸ್ತಿ ಹೊಂದಿದ್ದ ಯುವಕನೊಬ್ಬ ಮಂಗಳಮುಖಿಯಾಗಿ ಬದಲಾಗಿರುವ ಘಟನೆ ಇಲ್ಲಿನ ವೇಮುಲವಾಡದಲ್ಲಿ ನಡೆದಿದೆ. ಆ ಯುವಕನನ್ನು ಪೋಷಕರು ಹಿಗ್ಗಾಮುಗ್ಗಾ ಥಳಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಪೆದ್ದಪಲ್ಲಿ ಜಿಲ್ಲೆಯ ಮುಂಜಪಲ್ಲಿ ಗ್ರಾಮದ ವಂಗ ಮಹೇಶ್ ಎಂಬ ಯುವಕ ಕಳೆದೆರಡು ತಿಂಗಳಿನಿಂದ ನಾಪತ್ತೆಯಾಗಿದ್ದ. ಮಹೇಶ್ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ಮಹೇಶ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅಷ್ಟರಲ್ಲೇ ಮಹೇಶ್ ರಾಜನ್ನ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡದಲ್ಲಿ ಇರುವುದು ಆತನ ಪೋಷಕರಿಗೆ ತಿಳಿದಿದೆ. ಕೂಡಲೇ ಪೋಷಕರು ಮಹೇಶ್ ನೋಡಲು ತೆರಳಿದ್ರು. ಅಲ್ಲಿ ಮಹೇಶ್ನನ್ನು ನೋಡಿದ ಕುಟುಂಬಸ್ಥರು ಒಂದು ಕ್ಷಣ ಶಾಕ್ಗೆ ಒಳಗಾಗಿದ್ದಾರೆ. ನಮ್ಮೆಲ್ಲರ ಮುಂದೇ ಪ್ಯಾಂಟ್, ಶರ್ಟ್ ಹಾಕಿಕೊಂಡು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದ ಮಹೇಶ್, ಏಕಾಏಕಿ ಮಂಗಳಮುಖಿಯಾಗಿ ಕಾಣಿಸಿದ್ದಾನೆ. ಹೀಗಾಗಿ, ತಂದೆ-ತಾಯಿ ಜೊತೆ ಬಂಧುಗಳು ಸಹ ಒಂದು ಕ್ಷಣ ಅಚ್ಚರಿಗೊಳಗಾದರು.
ಇನ್ನು, ಮಹೇಶ್ಗೆ ನಮ್ಮ ಜೊತೆ ಬರುವಂತೆ ಬಂಧುಗಳು, ಸ್ನೇಹಿತರು ಮತ್ತು ಪೋಷಕರು ಹೇಳಿದ್ದಾರೆ. ಆದ್ರೆ, ಮಹೇಶ್ ಇದಕ್ಕೆ ನಿರಾಕರಿಸಿದ್ದಾನೆ. ಹೀಗಾಗಿ, ಮಹೇಶ್ ಮೇಲೆ ಸಿಡಿಮಿಡಿಗೊಂಡ ಪೋಷಕರು ರಸ್ತೆ ಮಧ್ಯೆದಲ್ಲೇ ಎಲ್ಲರೂ ನೋಡು-ನೋಡುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿ ಮನೆಗೆ ಎಳೆದೊಯ್ದರು. ಈ ವೇಳೆ ಮಂಗಳಮುಖಿಯರ ಜೊತೆ ವಾಗ್ವಾದ ನಡೆದಿದ್ದು, ಸ್ವಲ್ಪ ಸಮಯ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.
ತಮ್ಮ ಮಗನನ್ನು ಮಂಗಳಮುಖಿಯಾಗಿ ಬದಲಾಯಿಸಿದಕ್ಕೆ ತಂದೆ-ತಾಯಿ ಆಕ್ರೋಶ ವ್ಯಕ್ತಪಡಿಸಿದರು. ತಮಗೆ 20 ಎಕರೆ ಭೂಮಿ ಇದೆ. ಅವನಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದು ಮಹೇಶ್ ಪೋಷಕರು ಕಣ್ಣೀರು ಹಾಕಿದರು.