ETV Bharat / bharat

ಪ್ಯಾಂಗೋಲಿನ್ ಕಳ್ಳಸಾಗಣೆ ದಂಧೆ: ಮೂವರು ಆರೋಪಿಗಳ ಬಂಧಿಸಿದ ಅಧಿಕಾರಿಗಳು - ಭುವನೇಶ್ವರದ ಛಕ್​​ನಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆದಾರರ ಬಂಧನ

ಜೀವಂತ ಪ್ಯಾಂಗೋಲಿನ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಮೂವರು ಆರೋಪಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

Pangolin smuggling racket busted, three held in Bhubaneswar
ಪ್ಯಾಂಗೋಲಿನ್ ಕಳ್ಳಸಾಗಣೆ ದಂಧೆ : ಮೂವರು ಆರೋಪಿಗಳ ಬಂಧಿಸಿದ ಅಧಿಕಾರಿಗಳು
author img

By

Published : Aug 7, 2021, 11:46 AM IST

ಭುವನೇಶ್ವರ(ಒಡಿಶಾ): ಅಪರಾಧ ವಿಭಾಗದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕಾರ್ಯಾಚರಣೆ ನಡೆಸಿ ಪ್ಯಾಂಗೋಲಿನ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರದ ಛಕ್​​ನಲ್ಲಿರುವ ಕಳಿಂಗ ಸ್ಟುಡಿಯೋ ಸಮೀಪದಲ್ಲಿ ನಡೆದಿದೆ.

ಕಾರ್ಯಾಚರಣೆಯಲ್ಲಿ ಒಂದು ಜೀವಂತ ಪ್ಯಾಂಗೋಲಿನ್ ಅನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದು, ಬಂಧಿತ ಆರೋಪಿಗಳನ್ನು ಕಟಕ್​ ಬಳಿಯ ಬಾದಂಬ ಪ್ರದೇಶದ ಚಿತ್ರಸೇನ್ ಸಾಹೂ, ಭುವನೇಶ್ವರದ ಪತ್ರಪದ ಪ್ರದೇಶದ ಖಗೇಶ್ವರ ಸಾಹೂ ಮತ್ತು ಗಂಜಾಂ ಬಳಿಯ ಕಂಸಮರಿ ಪ್ರದೇಶದ ಭಾಗೀರಥಿ ಬೆಹೆರಾ ಎಂದು ಗುರ್ತಿಸಲಾಗಿದೆ.

ಈ ಮೊದಲೇ ಸೆರೆಯಾಗಿದ್ದ ಅಪರಾಧಿಗಳಿಂದ ವಿಶ್ವಾಸಾರ್ಹ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಪ್ಯಾಂಗೋಲಿನ್ ಅನ್ನು ಚಂದಕ ಪ್ರದೇಶದ ಡಿಎಫ್​​​​ಒ ಹಸ್ತಾಂತರ ಮಾಡಲಾಗಿದೆ.

ವ್ಯಕ್ತಿಗಳು ಪ್ಯಾಂಗೋಲಿನ್ ಹೊಂದುವುದನ್ನು ಅಪರಾದ ಎಂದು ಪರಿಗಣಿಸಲಾಗಿದ್ದು, ಆರೋಪಿಗಳು ಪ್ಯಾಂಗೋಲಿನ್ ಅನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುತ್ತಿದ್ದ ಕಾರಣದಿಂದ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಮತ್ತು ಜೇಟ್ಲಿ ಕ್ರೀಡಾಂಗಣಗಳ ಮರುನಾಮಕರಣಕ್ಕೂ ಹೆಚ್ಚಿದ ಒತ್ತಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.