ಕಟಕ್ (ಒಡಿಶಾ): ಕೆಲವು ದಿನಗಳ ಹಿಂದೆ ಒಡಿಶಾದ ಕಟಕ್‌ನ ಅಥಾಗಡ್ ಅರಣ್ಯ ವಿಭಾಗದ ತಂಡವು ಕಳ್ಳಸಾಗಾಣಿಕೆದಾರರಿಂದ ರಕ್ಷಿಸಿದ ಚಿಪ್ಪು ಹಂದಿಯನ್ನು ಇಂದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಚಿಪ್ಪು ಹಂದಿ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಥಾಗಡ್ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಸಾಸ್ಮಿತಾ ಲೆಂಕಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿಯನ್ನೇ ಕೊಲ್ಲುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ, ಆರೋಪಿ ಬಂಧನ
ಕಳ್ಳಸಾಗಣೆ ಮಾಡಲಾಗುತ್ತಿದ್ದ ಚಿಪ್ಪು ಹಂದಿಯೊಂದನ್ನು ನಾವು ಕೆಲವು ದಿನಗಳ ಹಿಂದೆ ರಕ್ಷಿಸಿದ್ದೆವು. ಅನಾರೋಗ್ಯದ ಸ್ಥಿತಿಯಲ್ಲಿದ್ದ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದು, ಸುರಕ್ಷಿತವಾಗಿ ಅರಣ್ಯಕ್ಕೆ ಸ್ಥಳಾಂತರ ಮಾಡಿದ್ದೇವೆ ಎಂದು ಲೆಂಕಾ ಹೇಳಿದ್ದಾರೆ.