ನವದೆಹಲಿ: ಅಂತಾರಾಷ್ಟ್ರಿಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪಂಡೋರಾ ಪೇಪರ್ಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ತನ್ನ ಪತಿ ಹೊಂದಿರುವ ಕಂಪನಿ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ. ಆ ಕಂಪನಿ ನಂಬಿಕಾರ್ಹ ಮತ್ತು ಕಾನೂನು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪಂಡೋರಾ ಪೇಪರ್ಸ್ ಕುರಿತಂತೆ ಟ್ವೀಟ್ ಮಾಡಿರುವ ಶಾ, ಭಾರತದಿಂದ ಹೊರಗಿರುವ ಪತಿ ಜಾನ್ ಶಾ ಅವರ ಟ್ರಸ್ಟ್ ಬಗ್ಗೆ ಪಂಡೋರಾ ಪೇಪರ್ಸ್ನ ವರದಿಗಳು ತಪ್ಪಾಗಿ ಬಿಂಬಿಸಿವೆ. ಈ ವರದಿಗಳಲ್ಲಿ ಹೇಳಿರುವಂತೆ ಭಾರತೀಯರು ಯಾರೂ ಈ ಟ್ರಸ್ಟ್ ಅನ್ನು ನಿಯಂತ್ರಿಸುತ್ತಿಲ್ಲ. ಇದು ನ್ಯಾಯ ಸಮ್ಮತವಾಗಿದೆ ಮತ್ತು ಸ್ವತಂತ್ರ ಟ್ರಸ್ಟಿಗಳಿಂದ ನಿರ್ವಹಿಸುತ್ತಿರುವ ಕಂಪನಿ ಆಗಿದೆ ಎಂದಿದ್ದಾರೆ.
-
Media stories reporting on Pandora Papers wrongly implicate my husband’s offshore trust, which is a bonafide, legitimate trust and is managed by Independent Trustees. No Indian resident holds “the key” to the trust as alleged in these stories.
— Kiran Mazumdar-Shaw (@kiranshaw) October 4, 2021 " class="align-text-top noRightClick twitterSection" data="
">Media stories reporting on Pandora Papers wrongly implicate my husband’s offshore trust, which is a bonafide, legitimate trust and is managed by Independent Trustees. No Indian resident holds “the key” to the trust as alleged in these stories.
— Kiran Mazumdar-Shaw (@kiranshaw) October 4, 2021Media stories reporting on Pandora Papers wrongly implicate my husband’s offshore trust, which is a bonafide, legitimate trust and is managed by Independent Trustees. No Indian resident holds “the key” to the trust as alleged in these stories.
— Kiran Mazumdar-Shaw (@kiranshaw) October 4, 2021
ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿರುವ ಕಿರಣ್ ಮಜುಂದಾರ್ ಶಾ, "ನನ್ನ ಪತಿ, ಜಾನ್ ಶಾ ಇಂಗ್ಲೆಂಡ್ ಪ್ರಜೆಯಾಗಿದ್ದು, ಅವರ ವಿದೇಶಿ ಕರೆನ್ಸಿ ಗಳಿಕೆಯಿಂದಾಗಿ 1999ರಲ್ಲಿ ಯುನಿಲಿವರ್ ಕಂಪನಿ ಷೇರುಗಳನ್ನು ಖರೀದಿಸಲು ಇತರ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಗ್ಲೆನ್ಟೆಕ್ ಇಂಟರ್‌ನ್ಯಾಷನಲ್ ಕಂಪನಿಯನ್ನು ಸ್ಥಾಪಿಸಿದ್ದರು" ಎಂದು ಸ್ಪಷ್ಟನೆ ನೀಡಿದ್ದಾರೆ.
ಗ್ಲೆನ್ಟೆಕ್ ಮಾರಿಷಸ್‌ನಲ್ಲಿ ನೋಂದಾಯಿತ ಘಟಕವಾಗಿದ್ದು, ಈ ಕುರಿತು ಆರ್‌ಬಿಐ ಮತ್ತು ಸೆಬಿ ಎರಡಕ್ಕೂ ಮಾಹಿತಿ ನೀಡಲಾಗಿದೆ. 2004ರಲ್ಲಿ ಬಯೋಕಾನ್ ಸಾರ್ವಜನಿಕ ಪಟ್ಟಿಯ ಕಂಪನಿಯಾದ ನಂತರ ಗ್ಲೆನ್ಟೆಕ್ ಬಯೋಕಾನ್ನಲ್ಲಿ ಹೊಂದಿರುವ ಷೇರುಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿತ್ತು. ಬಯೋಕಾನ್ ಲಿಮಿಟೆಡ್ನಲ್ಲಿ ಗ್ಲೆನ್ಟೆಕ್ ಶೇ 19.76ರಷ್ಟು ಪಾಲುದಾರಿಕೆ ಹೊಂದಿದೆ ಎಂದು ಕಿರಣ್ ಮಜುಂದಾರ್ ಮಾಹಿತಿ ನೀಡಿದ್ದಾರೆ.
ಶೇಕಡಾ 99ರಷ್ಟು ಜಾನ್ ಶಾ ಒಡೆತನದಲ್ಲಿರುವ ಗ್ಲೆನ್ಟೆಕ್ ನಂಬಿಕೆಗೆ ಅರ್ಹವಾದ ಕಂಪನಿಯಾಗಿದೆ. ಕಾನೂನಿನ ಪ್ರಕಾರ ಕಂಪನಿಯ ಲೆಕ್ಕವನ್ನು ಪರಿಶೋಧನೆ ಮಾಡಲಾಗುತ್ತದೆ. ಭಾರತೀಯ ಕಂಪನಿಗಳಿಂದ ಆದ ಲಾಭಾಂಶವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿದೆ. ಗ್ಲೆನ್ಟೆಕ್ ತನ್ನ ತೆರಿಗೆಯನ್ನ ಕಾಲಕಾಲಕ್ಕೆ ಕಟ್ಟುತ್ತಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಡೀನ್ಸ್ಟೋನ್ ಟ್ರಸ್ಟ್ ಬಗ್ಗೆ..
ಪಂಡೋರಾ ಪೇಪರ್ಸ್ನಲ್ಲಿ ಡೀನ್ಸ್ಟೋನ್ ಟ್ರಸ್ಟ್ ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಿರಣ್ ಮಜುಂದಾರ್ ಶಾ, ಈ ಟ್ರಸ್ಟ್ ಅನ್ನು ಗ್ಲೆನ್ಟೆಕ್ 2015ರಲ್ಲಿ ಸ್ಥಾಪನೆ ಮಾಡಲಾಗಿದೆ. ಅನೇಕ ಸಮಾಜ ಪರವಾದ ಕೆಲಸಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
ಈ ಟ್ರಸ್ಟ್ ಅನ್ನು ಇದು ವಿದೇಶಿ ಪ್ರಜೆಗಳು ನಿರ್ವಹಣೆ ಮಾಡುತ್ತಿದ್ದು, ನಂಬಿಕಾರ್ಹವಾಗಿದೆ. ಇದರ ಟ್ರಸ್ಟ್ನಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಯಾರೂ ಕೂಡಾ ಭಾರತದಲ್ಲಿ ವಾಸಿಸುತ್ತಿಲ್ಲ. ಪಂಡೋರಾ ಪೇಪರ್ಸ್ನಲ್ಲಿ ಬಂದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ. ಜಾನ್ ಶಾ ಮತ್ತು ನಾನು ಇಬ್ಬರೂ ಕಾನೂನು ಪಾಲಿಸುತ್ತಿದ್ದೇವೆ. ಎಲ್ಲವೂ ಕಾನೂನಿನ ನಿಯಮಗಳಿಗೆ ಅನುಸಾರವಾಗಿ ನಡೆಯುತ್ತಿವೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಇದನ್ನೂ ಓದಿ: CBDT ನೇತೃತ್ವದಲ್ಲಿ ಪಂಡೋರಾ ಪೇಪರ್ಸ್ ಹಗರಣದ ತನಿಖೆ: ಕೇಂದ್ರ ಸರ್ಕಾರ