ETV Bharat / bharat

ಪಶ್ಚಿಮ ಬಂಗಾಳ ವಿಧಾನಸಭೆ ಕಲಾಪದಲ್ಲಿ ಭಾರಿ ಗದ್ದಲ - ಕೋಲಾಹಲ - Pandemonium in West Bengal Assembly

ರಾಮಪುರಹತ್ ಹತ್ಯಾಕಾಂಡ ಸಂಬಂಧ ಚರ್ಚೆಗೆ ಬಿಜೆಪಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಭಾರಿ ಗದ್ದಲ ಕೋಲಾಹಲ ಉಂಟಾಗಿದೆ.

Pandemonium in West Bengal Assembly
ಪಶ್ಚಿಮ ಬಂಗಾಳ ವಿಧಾನಸಭೆ ಕಲಾಪದಲ್ಲಿ ಭಾರಿ ಗದ್ದಲ-ಕೋಲಾಹಲ
author img

By

Published : Mar 28, 2022, 1:10 PM IST

Updated : Mar 28, 2022, 1:36 PM IST

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಭಾರಿ ಗದ್ದಲ ಕೋಲಾಹಲ ಉಂಟಾಗಿದೆ. ಬಿಜೆಪಿ ಹಾಗೂ ಟಿಎಂಸಿ ಸದಸ್ಯರ ನಡುವೆ ನೂಕಾಟ ತಳ್ಳಾಟವಾಗಿದ್ದು, ಉಭಯ ಶಾಸಕರನ್ನು ತಹಬದಿಗೆ ತರಲು ಸ್ಥಳದಲ್ಲಿದ್ದ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಕಲಾಪದಲ್ಲಿ ಭಾರಿ ಗದ್ದಲ - ಕೋಲಾಹಲ

ಬಿರ್‌ಭೂಮ್‌ ಹತ್ಯಾಕಾಂಡ ಪ್ರಕರಣ ಸಂಬಂಧ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆಗೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವು ಬಿಜೆಪಿ ಶಾಸಕರು ಒತ್ತಾಯಿಸಿ ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

  • Absolute pandemonium in the West Bengal Assembly. After Bengal Governor, TMC MLAs now assault BJP MLAs, including Chief Whip Manoj Tigga, as they were demanding a discussion on the Rampurhat massacre on the floor of the house.

    What is Mamata Banerjee trying to hide? pic.twitter.com/umyJhp0jnE

    — Amit Malviya (@amitmalviya) March 28, 2022 " class="align-text-top noRightClick twitterSection" data=" ">

ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ನೂಕಾಟ ತಳ್ಳಾಟವೂ ನಡೆಯಿತು. ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿ ಐವರು ಬಿಜೆಪಿ ಶಾಸಕರನ್ನು ಮುಂದಿನ ಆದೇಶದ ವರೆಗೆ ಸದನದಿಂದ ಅಮಾನತು ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸುವೇಂದು ಅಧಿಕಾರಿ, ಕಲಾಪದ ಕೊನೆಯ ದಿನವಾದರೂ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ಬಿಜೆಪಿ ಒತ್ತಾಯಿಸಿದೆ. ಆದರೆ ಆಡಳಿತ ಪಕ್ಷ ಟಿಎಂಸಿ ಕೋಲ್ಕತ್ತ ಪೊಲೀಸರನ್ನು ಸಿವಿಲ್‌ ಡ್ರೆಸ್‌ನಲ್ಲಿ ಸದನಕ್ಕೆ ಕರೆಸಿ 8-10 ಮಂದಿ ಶಾಸಕರೊಂದಿಗೆ ಗಲಾಟೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹತ್ಯಾಕಾಂಡ ನಡೆದ ಬಿರ್ಭೂಮ್​ನಲ್ಲಿ 40 ಕಚ್ಚಾ ಬಾಂಬ್​ಗಳು ಪತ್ತೆ.. ಕೇಸ್​ ಲಿಂಕ್​​ ಬಗ್ಗೆ ತನಿಖೆ

Last Updated : Mar 28, 2022, 1:36 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.