ಬಿಜ್ನೋರ್(ಉತ್ತರ ಪ್ರದೇಶ): ಯುವಕನೋರ್ವನಿಗೆ ಪಂಚಾಯತ್‌ನಲ್ಲಿ ಹುಡುಗಿಯೊಬ್ಬಳು ಚಪ್ಪಲಿಯಲ್ಲಿ ಹೊಡೆದ ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿದ್ದಾರೆ.
ನಡೆದಿದ್ದಿಷ್ಟು...
ಕಿರಾತ್‌ಪುರದ ಗಾಜಿಪುರ ಗ್ರಾಮದ ಬಾಲಕಿಯೊಬ್ಬಳು ಪ್ರೇಮ ಪಾಶಕ್ಕೆ ಸಿಲುಕಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಬಾಲಕಿಯ ಮನೆಯವರು ಬಾಲಕಿಗೆ ಅಂತ್ಯಸಂಸ್ಕಾರ ಮಾಡಿ, ಘಟನೆಯ ಬಗ್ಗೆ ಗ್ರಾಮದ ಪಂಚರಿಗೆ(ಮುಖಂಡರು) ಮಾಹಿತಿ ನೀಡಿದ್ದರು. ಮಾಹಿತಿಯ ಆಧಾರದ ಮೇಲೆ, ಗ್ರಾಮದ ಒಂದು ಸ್ಥಳದಲ್ಲಿ ಪಂಚಾಯತ್ ಕರೆಯಲು ಪಂಚರು ನಿರ್ಧರಿಸಿದ್ದಾರೆ.
ಮೃತ ಬಾಲಕಿ ಕಡೆಯವರು ಹಾಗೂ ಬಾಲಕಿ ಪ್ರೇಮಿ ಎರಡೂ ಕಡೆಯವರು ಪಂಚಾಯತ್‌ಗೆ ಬಂದಿದ್ದಾರೆ. ಈ ಸಂದರ್ಭ ಮೃತ ಹುಡುಗಿಯ ಸಹೋದರಿ ತನ್ನ ಚಪ್ಪಲಿಯಿಂದ ಆತನಿಗೆ(ಪ್ರೇಮಿ) ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಾಳೆ. ಅಲ್ಲದೆ 5 ವರ್ಷಗಳ ಕಾಲ ಆತನಿಗೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ಈ ಜಗಳದ ವಿಡಿಯೋ ಹೇಗೋ ವೈರಲ್ ಆಗಿದೆ.
ಗಾಜಿಪುರ ವಿಡಿಯೋ ಹೊರಬೀಳುತ್ತಿದ್ದಂತೆ ಎಸ್‌ಪಿ ಕ್ರಮಕ್ಕೆ ಸೂಚನೆಗಳನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.