ETV Bharat / bharat

ಪಶ್ಚಿಮ ಬಂಗಾಳ: ಗುಡ್ಡಗಾಡು ಜನರಿಗಾಗಿ ಪಾಲ್ಕಿ ಆ್ಯಂಬುಲೆನ್ಸ್​ ಸೇವೆ ಜಾರಿ

ಅಲಿಪುರ್ದೂರ್ ಜಿಲ್ಲೆಯ ದೂರದ ಬಕ್ಸಾ ಬೆಟ್ಟ ಪ್ರದೇಶದಲ್ಲಿ ವಾಸಿಸುವ 14 ಹಳ್ಳಿಗಳ ಜನರಿಗೆ ಪಾಲ್ಕಿ ಎಂಬ ಆ್ಯಂಬುಲೆನ್ಸ್​ ಸೇವೆಯನ್ನು ಜಾರಿಗೊಳಿಸಲಾಗಿದೆ.

ಪಾಲ್ಕಿ ಎಂಬ ಆ್ಯಂಬುಲೆನ್ಸ್​ ಸೇವೆ
ಪಾಲ್ಕಿ ಎಂಬ ಆ್ಯಂಬುಲೆನ್ಸ್​ ಸೇವೆ
author img

By

Published : Dec 12, 2022, 5:31 PM IST

Updated : Dec 12, 2022, 6:09 PM IST

ಗುಡ್ಡಗಾಡು ಜನರಿಗಾಗಿ ಪಾಲ್ಕಿ ಆ್ಯಂಬುಲೆನ್ಸ್​ ಸೇವೆ ಜಾರಿ

ಅಲಿಪುರ್ದಾರ್ (ಪಶ್ಚಿಮ ಬಂಗಾಳ): ಉತ್ತರ ಬಂಗಾಳದ ಗುಡ್ಡಗಾಡು ಮತ್ತು ದುರ್ಗಮ ಪ್ರದೇಶದಲ್ಲಿ ವಾಸಿಸುವ ಜನರನ್ನು ಆಸ್ಪತ್ರೆಗೆ ಕರೆತರುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಆದರೀಗ ಇದನ್ನು ಸುಲಭವಾಗಿಸುವ ಸಲುವಾಗಿ, ಪಾಲ್ಕಿ (ಪಲ್ಲಕ್ಕಿ) ಆ್ಯಂಬುಲೆನ್ಸ್‌ನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೂ ಮೊದಲು ಬಿದಿರಿನಿಂದ ಮಾಡಿದ ಏಣಿಯ ರೀತಿಯ ವಸ್ತುವಿನ ಮೂಲಕ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು.

ಅಲಿಪುರ್ದೂರ್ ಜಿಲ್ಲೆಯ ದೂರದ ಬಕ್ಸಾ ಬೆಟ್ಟ ಪ್ರದೇಶದಲ್ಲಿ 14 ಹಳ್ಳಿಗಳಿವೆ. ಇಲ್ಲಿ ವಾಸಿಸುವ ಗರ್ಭಿಣಿಯರು ಮತ್ತು ಕೋಮಾದಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಆದರೀಗ ಪಾಲ್ಕಿ ಎಂಬ ಆ್ಯಂಬುಲೆನ್ಸ್​​ ಸೇವೆಯನ್ನು ಪರಿಚಯಿಸಿದ ಕಾರಣ ಇದು ತುಂಬಾ ಸುಲಭವಾಗಿದೆ.

ಪಾಲ್ಕಿ ಎಂಬ ಆ್ಯಂಬುಲೆನ್ಸ್​ ಸೇವೆ
ಪಾಲ್ಕಿ ಎಂಬ ಆ್ಯಂಬುಲೆನ್ಸ್​ ಸೇವೆ

ಇಲ್ಲಿ ತನಕ ರೋಗಿಗಳನ್ನು ಬಿದಿರಿನಿಂದ ಮಾಡಿದ ವಸ್ತು ಮೇಲೆ ಮಲಗಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಪಾಲ್ಕಿ ಆ್ಯಂಬುಲೆನ್ಸ್​ ಸೇವೆಯನ್ನು ಅಲಿಪುರ್‌ದವಾರ್ ಜಿಲ್ಲಾಡಳಿತದಿಂದ ಪ್ರಾರಂಭಿಸಲಾಗಿದೆ. ಬಕ್ಸಾ ಹಿಲ್‌ನ ಅಸ್ವಸ್ಥ ರೋಗಿಗಳು ಮತ್ತು ಗರ್ಭಿಣಿ ತಾಯಂದಿರನ್ನು ಆಸ್ಪತ್ರೆಗೆ ಕರೆದೊಯ್ಯಲು ಇದನ್ನು ಬಳಸಲಾಗುತ್ತಿದೆ.

ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಭಾರತೀಯ ಕುಟುಂಬ ಯೋಜನೆ ಜಂಟಿಯಾಗಿ ಪಾಲ್ಕಿ ಆ್ಯಂಬುಲೆನ್ಸ್​​ ಸೇವೆ ಪ್ರಾರಂಭಿಸಿದೆ. ಈಗಾಗಲೇ ಬಕ್ಸಾ ಹಿಲ್ಸ್‌ನಿಂದ ಪಾಲ್ಕಿ ಆ್ಯಂಬುಲೆನ್ಸ್​ ಮೂಲಕ ಮೂವರು ಗರ್ಭಿಣಿಯರು ಹಾಗೂ ಕೋಮಾ ಸ್ಥಿತಿಯಲ್ಲಿರುವ ಓರ್ವ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪಾಲ್ಕಿಯ ತೂಕದಿಂದಾಗಿ ರೋಗಿಯನ್ನು ಇದರಲ್ಲಿ ಇರಿಸುವುದು ಕಷ್ಟವಾಗಿದೆ. ತೂಕ ಕಡಿಮೆ ಮಾಡುತ್ತೇವೆ. ಹೊಸ ಪಲ್ಕಿಗಳನ್ನು ರಚಿಸುತ್ತೇವೆ ಎಂದು ಅಲಿಪುರ್ದೂರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುರೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.

ಪಾಲ್ಕಿ ಎಂಬ ಆ್ಯಂಬುಲೆನ್ಸ್​ ಸೇವೆ
ಪಾಲ್ಕಿ ಎಂಬ ಆ್ಯಂಬುಲೆನ್ಸ್​ ಸೇವೆ

ಹೊಸ ಪಲ್ಕಿಗಳು 25-30 ಕೆಜಿ ತೂಗುತ್ತವೆ. ಇದರಿಂದ ತೂಕವು ಸಾಕಷ್ಟು ಕಡಿಮೆಯಾಗುತ್ತದೆ. ಹಾಗೆ ಮಾಡುವುದರಿಂದ ನಾಲ್ಕು ಜನರನ್ನು ಪಲ್ಕಿಯಲ್ಲಿ ಕೂರಿಸಬಹುದಾಗಿದೆ. ಈ ವರ್ಷ ಪಾಲ್ಕಿ ಆ್ಯಂಬುಲೆನ್ಸ್​​ನಲ್ಲಿ ಮೂವರು ಗರ್ಭಿಣಿ ತಾಯಂದಿರು ಮತ್ತು ಒಬ್ಬ ರೋಗಿಗೆ ಸೇವೆ ಸಲ್ಲಿಸಲಾಗಿದೆ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ತುಷಾರ್ ಚಕ್ರವರ್ತಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಡೋಲಿಯಲ್ಲಿ ಗರ್ಭಿಣಿ, ಕಬ್ಬಿಣದ ಏಣಿ ಮೂಲಕ ಮನೆ ತಲುಪಲು ಅಪಾಯಕಾರಿ ಪಯಣ

ಅಲಿಪುರ್ದೂರ್ ಜಿಲ್ಲೆಯ ಜಿಲ್ಲಾಧಿಕಾರಿ ಸುರೇಂದ್ರ ಕುಮಾರ್ ಮೋನಾ ಮಾತನಾಡಿ, ಬಕ್ಸಾ ಹಿಲ್ಸ್‌ನ ಜನರ ಆರೋಗ್ಯ ಸೇವೆಗಾಗಿ ನಾವು ಈ ಪಾಲ್ಕಿ ಆಂಬ್ಯುಲೆನ್ಸ್ ಅನ್ನು ಪ್ರಾರಂಭಿಸಿದ್ದೇವೆ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳನ್ನು ಒದಗಿಸಲು ನಾವು ಬಯಸುತ್ತೇವೆ. ನಾವು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಈ ಸೇವೆ ಒದಗಿಸುತ್ತಿದ್ದೇವೆ ಎಂದರು.

Last Updated : Dec 12, 2022, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.