ಪಾಲಿ(ರಾಜಸ್ಥಾನ): ವಿದ್ಯಾರ್ಥಿಗಳ ಪಾಲಿಗೆ ಹೀರೋಗಳಾಗಬೇಕಾದ ಶಿಕ್ಷಕರು ಕೆಲವೊಮ್ಮೆ ವಿಲನ್ಗಳಾಗಿ ಬಿಡ್ತಾರೆ. ಸಣ್ಣಪುಟ್ಟ ವಿಷಯಗಳನ್ನಿಟ್ಟುಕೊಂಡು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸದ್ಯ ಅಂತಹದೊಂದು ಪ್ರಕರಣ ರಾಜಸ್ಥಾನದ ಪಾಲಿಯಲ್ಲಿ ಬೆಳಕಿಗೆ ಬಂದಿದೆ. ಪಾಲಿಯಲ್ಲಿರುವ ವಿಶ್ವವಿಖ್ಯಾತ ಗುರುಕುಲ ಓಂ ವಿಶ್ವದೀಪ್ ನಲ್ಲಿ ಈ ಘಟನೆ ನಡೆದಿದೆ. ಪದವಿ ಮುಗಿಸಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರ(ಟಿಸಿ) ಪಡೆದುಕೊಳ್ಳಲು ಬಂದಾಗ ಶಿಕ್ಷಕರೊಬ್ಬರು ಗನ್ನಿಂದ ಬೆದರಿಸಿದ್ದಾರೆಂದು ಹೇಳಲಾಗ್ತಿದೆ.
ಘಟನೆಯ ಸಂಪೂರ್ಣ ವಿವರ: ಬಿಎ ಪದವಿ ಮುಗಿಸಿದ್ದ ವಿದ್ಯಾರ್ಥಿಗಳು ಟಿಸಿ ತೆಗೆದುಕೊಳ್ಳುವ ಉದ್ದೇಶದಿಂದ ಕಾಲೇಜ್ಗೆ ಬಂದಿದ್ದರು. ಈ ವೇಳೆ ಶಿಕ್ಷಕರು-ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಅದು ವಿಕೋಪಕ್ಕೆ ತೆರಳಿದೆ. ಈ ವೇಳೆ ಶಿಕ್ಷಕ ಹೀರಾ ಪ್ರಕಾಶ್ ಅವರು ವಿದ್ಯಾರ್ಥಿಗಳಿಗೆ ಕಂಟ್ರಿ ಪಿಸ್ತೂಲ್ನಿಂದ ಬೆದರಿಸಿದ್ದಾರೆ. ಇದು ಮತ್ತಷ್ಟು ತಾರಕ್ಕೇರುವಂತೆ ಮಾಡಿದೆ. ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಶಿಕ್ಷಕ ಹಾಗೂ ಗಲಾಟೆ ಸೃಷ್ಟಿಸಿರುವ ಕೆಲ ವಿದ್ಯಾರ್ಥಿಗಳ ಬಂಧನ ಮಾಡಲಾಗಿದೆ. ಶಿಕ್ಷಕನಿಂದ ದೇಶಿ ನಿರ್ಮಿತ್ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡು ವಶಕ್ಕೆ ಪಡೆದುಕೊಳ್ಳಲಾಗಿದೆ. ಗಲಾಟೆ ಸೃಷ್ಟಿ ಮಾಡಿರುವ ವಿದ್ಯಾರ್ಥಿಗಳ ವಿರುದ್ಧ ಗಾಂಜಾ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಮಂಗಳೂರಲ್ಲಿ ಹಿಜಾಬ್ ವಿವಾದ: ಕಾಲೇಜಿನಿಂದ ಟಿಸಿ ಪಡೆಯಲು ಮುಂದಾದ ವಿದ್ಯಾರ್ಥಿನಿಯರು
ಕೆಲ ಮಾಹಿತಿ ಪ್ರಕಾರ, ಗುರುಕುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ವೀಕ್ಷಣೆಗೋಸ್ಕರ ಗುರುಕುಲದ ಕೆಲ ಮಾಜಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವೇಳೆ ಯಾವುದೋ ವಿಷಯಕ್ಕೆ ಜಗಳ ಶುರುವಾಗಿದೆ. ಇದನ್ನು ಗಮನಿಸಿರುವ ಶಿಕ್ಷಕ ಹೀರಾ ಪ್ರಸಾದ್ ಹಳೆ ವಿದ್ಯಾರ್ಥಿಗಳನ್ನ ಅಲ್ಲಿಂದ ಹೊರಕಳುಹಿಸಿದ್ದಾರೆ. ಹೊರಹೋಗಿರುವ ವಿದ್ಯಾರ್ಥಿಗಳು ಮತ್ತಷ್ಟು ಸ್ನೇಹಿತರೊಂದಿಗೆ ಗುರುಕುಲಕ್ಕೆ ಬಂದು ಜಗಳವಾಡಿದ್ದಾರೆ ಎನ್ನಲಾಗ್ತಿದೆ. ಇವರೆಲ್ಲರೂ ಗಾಂಜಾ ಸೇವನೆ ಮಾಡಿದ್ದರು ಎನ್ನಲಾಗ್ತಿದೆ. ಇದೇ ಕಾರಣಕ್ಕಾಗಿ ಶಿಕ್ಷಕ ಪಿಸ್ತೂಲ್ನಿಂದ ಬೆದರಿಸಿದ್ದಾರೆ ಎಂಬ ಮಾಹಿತಿ ಸಹ ಇದೆ.