ಅಮೃತ್ಸರ್ (ಪಂಜಾಬ್): ಇಲ್ಲಿನ ಭಾರತ-ಪಾಕ್ ಗಡಿಯಲ್ಲಿ ಭಾನುವಾರ ತಡರಾತ್ರಿ ಡ್ರೋನ್ ಹಾರಾಟ ಕಂಡುಬಂದಿದ್ದು, 183ನೇ ಬೆಟಾಲಿಯನ್ ಯೋಧರು ಗುಂಡುಹಾರಿಸಿದ ಪರಿಣಾಮ ಅದು ವಾಪಸ್ ತೆರಳಿದೆ ಎಂದು ತಿಳಿದುಬಂದಿದೆ.
ಹಳೆ ಸುಂದರ್ಗಢ್ನಲ್ಲಿರುವ ಗಡಿ ಪ್ರದೇಶದ ಬಳಿ ಡ್ರೋನ್ ಹಾರಾಟ ಕಂಡುಬಂದಿತ್ತು. ತಕ್ಷಣ ಸೈನಿಕರು ದಾಳಿ ನಡೆಸಿದ್ದು, ಡ್ರೋನ್ ವಾಪಸ್ ಪಾಕಿಸ್ತಾನದತ್ತ ತೆರಳಿದೆ ಎಂದು ತಿಳಿದುಬಂದಿದೆ.
ಈ ವಾರದಲ್ಲಿ ಕಂಡು ಬಂದ ಎರಡನೇ ಡ್ರೋನ್ ಆಗಿದ್ದು, ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಈ ಘಟನೆ ಬಳಿಕ ಸ್ಥಳದಲ್ಲಿ ಹೆಚ್ಚಿನ ಶೋಧ ನಡೆಸಲಾಗಿದೆ. ಬಿಎಸ್ಎಫ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇದೇ ರೀತಿ ನ.30ರಂದು ಸಹ ಡ್ರೋನ್ ಹಾರಾಟ ಕಂಡುಬಂದಾಗ ಶೋಧ ನಡೆಸಿದ್ದ ಭದ್ರತಾ ಪಡೆಗೆ ಸ್ಥಳದಲ್ಲಿ ನಾಲ್ಕು ಹೆರಾಯಿನ್ ಪ್ಯಾಕೆಟ್ಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಇಬ್ಬರು ಎಲ್ಇಟಿ ಉಗ್ರರ ಬಂಧನ.. ಶಸ್ತ್ರಾಸ್ತ್ರ, ಮದ್ದುಗುಂಡು ಜಪ್ತಿ