ನವದೆಹಲಿ : ಜನವರಿ 9ರಂದು ಟಾಮ್ಪ್ರೊದಲ್ಲಿ 16ನೇ ಪ್ರವಾಸಿ ಭಾರತೀಯ ದಿವಸ್ನ ಸಮಾವೇಶ ಆಯೋಜಿಸಲಾಗುವುದು ಅಂತಾ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀ ವಾಸ್ತವ ತಿಳಿಸಿದ್ದಾರೆ. ವರ್ಚುವಲ್ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರೆಸ್ ಆಫ್ ಸುರಿನಾಮ್ ಆಗಮಿಸಲಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಂದೇ ಭಾರತ್ ಮಿಷನ್‌ನ 9ನೇ ಹಂತದಲ್ಲಿ 24 ದೇಶಗಳಿಂದ 1,495 ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸಲಿವೆ. ಈ ಮೂಲಕ 2.8 ಲಕ್ಷ ಜನರು ಭಾರತಕ್ಕೆ ಹಿಂದಿರುಗಲಿದ್ದು, ಈಗಾಗಲೇ 49,000 ಮಂದಿ ಮರಳಿದ್ದಾರೆ. ಮೇ 2020ರಿಂದ ಈವರೆಗೆ 44.7 ಲಕ್ಷಕ್ಕೂ ಹೆಚ್ಚು ಜನರನ್ನು ವಿದೇಶಗಳಿಂದ ಮರಳಿ ಕರೆ ತರಲಾಗಿದೆ ಎಂದರು.
ಪಾಕಿಸ್ತಾನವು ಭಾರತವನ್ನು ಹತ್ತಿಕ್ಕಲು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು. ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದಿವೆ. ಜೊತೆಗೆ ರಷ್ಯಾದೊಂದಿಗೆ ವಿಶೇಷ ಮತ್ತು ಸವಲತ್ತು ಹೊಂದಿರುವ ಪಾಲುದಾರಿಕೆಯನ್ನು ಹೊಂದಿದ್ದು, ನಾವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತೇವೆ ಎಂದರು.
ಆಸ್ಟ್ರೇಲಿಯಾಗೆ ಕಲ್ಲಿದ್ದಲು ಸಾಗಿಸುವ ವೇಳೆ ಭಾರತದ ಹಡುಗುಗಳನ್ನು ಚೀನಾ ಸೇನೆ ವಶಪಡಿಸಿಕೊಂಡಿತ್ತು. ಹಡಗು ಹಾಗೂ ಸಿಬ್ಬಂದಿಯ ಶೀಘ್ರ ಬಿಡುಗಡೆಗಾಗಿ ಭಾರತೀಯ ರಾಯಭಾರಿಯು ಚೀನಾದ ಉಪ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ ಅಂತಾ ಹೇಳಿದರು.