ETV Bharat / bharat

ಬಿಡುವಿಲ್ಲದೇ ಮಾಧ್ಯಮಗಳಿಗೆ ಸಂದರ್ಶನ: ಪಾಕಿಸ್ತಾನದ ಸೀಮಾ ಹೈದರ್​ ಸುಸ್ತು - etv bharat kannada

ಅತಿಯಾದ ಬಿಸಿಲು ಮತ್ತು ಬಿಡುವಿಲ್ಲದೇ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಕಾರಣ ಸೀಮಾ ಹೈದರ್​ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ

pakistani-woman-seema-haider-health-deteriorated-getting-http://10.10.50.85:6060/finalout4/karnataka-nle/thumbnail/22-July-2023/19069778_thumbnail_16x9_ck.jpgtreated-in-greater-noida
ಬಿಡುವಿಲ್ಲದೆ ಮಾಧ್ಯಮಗಳಿಗೆ ಸಂದರ್ಶನ: ಪಾಕಿಸ್ತಾನದ ಸೀಮಾ ಹೈದರ್​ ಸುಸ್ತು
author img

By

Published : Jul 22, 2023, 9:39 PM IST

ನವದೆಹಲಿ/ಗ್ರೇಟರ್ ನೋಯ್ಡಾ: ಪಬ್​ಜಿ ಗೇಮ್​ನಲ್ಲಿ ಪರಿಚಯವಾದ ಭಾರತದ 22 ವರ್ಷದ ಸಚಿನ್ ಮೀನಾ ಎಂಬಾತನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿರುವ ಸೀಮಾ ಗುಲಾಮ್ ಹೈದರ್ ಆರೋಗ್ಯದಲ್ಲಿ ಏರುಪೇರಾಗಿದೆ.​ ಸದ್ಯ ಸೀಮಾ ಹೈದರ್ ಗ್ರೇಟರ್ ನೋಯ್ಡಾದ ರಬೂಪುರದಲ್ಲಿರುವ ಸಚಿನ್ ಮೀನಾ ಮನೆಯಲ್ಲಿ ವಾಸವಾಗಿದ್ದಾರೆ. ಸೀಮಾ ಗುಲಾಮ್​ ಹೈದರ್ ಶುಕ್ರವಾರ ದಿನವಿಡೀ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು.

ಈ ಕಾರಣದಿಂದಾಗಿ ಅವರ ಆರೋಗ್ಯ ಹದಗೆಟ್ಟಿದೆ, ಶನಿವಾರದಿಂದ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿಯಾದ ಬಿಸಿಲು ಮತ್ತು ಬಿಡುವಿಲ್ಲದ ಕಾರಣ ಸೀಮಾ ಅವರ ಆರೋಗ್ಯ ಏರುಪೇರಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯಕ್ಕೆ ಅವರನ್ನು ಮಾಧ್ಯಮಗಳಿಂದ ದೂರ ಇರಿಸಲಾಗಿದೆ. ಸೀಮಾ ಗುಲಾಮ್​ ಹೈದರ್ ಅವರನ್ನು ಉತ್ತರಪ್ರದೇಶ ಎಟಿಎಸ್ ತಂಡ ಎರಡು ದಿನಗಳ ಕಾಲ ವಿಚಾರಣೆ ನಡೆಸಿತ್ತು.

ನಂತರ ಸೀಮಾ ಶುಕ್ರವಾರ ಮಾಧ್ಯಮಗಳ ಜೊತೆ ಬಿಡುವಿಲ್ಲದೇ ಮಾತನಾಡಿದ್ದರು. ಇನ್ನು ಸೀಮಾ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಮರಳಿ ಹೋಗುವುದಿಲ್ಲ ಎಂದು ಈ ವೇಳೆ ಹೇಳಿದ್ದರು. ನೇಪಾಳದಲ್ಲಿ ಸಚಿನ್​ನನ್ನು ಮದುವೆಯಾಗಿರುವ ಫೋಟೋಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿರುವ ಅವರು, ತನಗೆ ಭಾರತದ ಪೌರತ್ವ ನೀಡುವಂತೆ ತಮ್ಮ ವಕೀಲರ ಮೂಲಕ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾರೆ.

ನೇಪಾಳದಲ್ಲಿ ಸಚಿನ್ ಜೊತೆ ಸೀಮಾ ಮದುವೆ: ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಗುಲಾಮ್​ ಹೈದರ್ ತನ್ನೊಂದಿಗೆ ನಾಲ್ವರು ಮಕ್ಕಳನ್ನೂ ಕರೆತಂದಿದ್ದಾಳೆ. ತನ್ನ ಪ್ರಿಯಕರ ಸಚಿನ್ ಮೀನಾ ಜೊತೆ ರಬೂಪುರದಲ್ಲಿ ಕಳೆದ ಎರಡು ತಿಂಗಳುಗಳಿಂದ ವಾಸವಾಗಿದ್ದಾಳೆ. ಸೀಮಾ ಗುಲಾಮ್ ಹೈದರ್ ನೇಪಾಳದಲ್ಲಿ ಸಚಿನ್ ಅವರನ್ನು ಮದುವೆಯಾಗಿದ್ದೇನೆ ಮತ್ತು ಈಗ ನಾನು ಸಚಿನ್ ಅವರ ಪತ್ನಿಯಾಗಿರುವುದಾಗಿ ಹೇಳಿದ್ದರು. ನಿನ್ನೆ, ಸೀಮಾ ಮೀನಾ ಹೆಸರಿನಲ್ಲಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ನೀಡುವಂತೆ ಮನವಿ ಮಾಡಿದ್ದಾರೆ.

ವೀಸಾ ಇಲ್ಲದ ಕಾರಣ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ: ಸೀಮಾಳನ್ನು ಯುಪಿಯ ಎಟಿಎಸ್ ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದರೂ ದಿನನಿತ್ಯ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆ ಸೀಮಾ ತಾನು ಯಾವುದೇ ನಕಲಿ ದಾಖಲೆಗಳನ್ನು ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತಕ್ಕೆ ಬರಲು ವೀಸಾ ಇರಲಿಲ್ಲ, ಹಾಗಾಗಿ ಅಕ್ರಮವಾಗಿ ಭಾರತಕ್ಕೆ ಬರಬೇಕಾಯಿತು ಎಂದು ಹೇಳಿದ್ದಾರೆ.

ಸದ್ಯ ಈ ಪ್ರಕರಣ ಸಂಬಂಧ ಪೊಲೀಸರು ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ, ಶೀಘ್ರದಲ್ಲೇ ಪೊಲೀಸರು ಈ ಪ್ರಕರಣದ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ನಂತರವಷ್ಟೇ ಸೀಮಾ ಗುಲಾಮ್​ ಹೈದರ್ ಗೂಢಚಾರಿಕೆಗಾಗಿಯೇ ಅಥವಾ ಸಚಿನ್ ಮೇಲಿನ ಪ್ರೀತಿಯಿಂದ ಭಾರತಕ್ಕೆ ಬಂದಿದ್ದಾಳೆ ಎಂಬುದು ಸ್ಪಷ್ಟವಾಗಲಿದೆ.

ಇದನ್ನೂ ಓದಿ: ಸೀಮಾ ಹೈದರ್​ ಪಾಕಿಸ್ತಾನಕ್ಕೆ ಕಳುಹಿಸುವ ಸಂಭವ ಕಡಿಮೆ: ಪ್ರಕರಣದ ವಿಚಾರಣೆಗೆ ಅಡ್ಡಿಯಾಗುವ ಸಾಧ್ಯತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.