ETV Bharat / bharat

ಭಾರತದ ಪೌರತ್ವ ನೀಡಿ, ಇಲ್ಲವೇ ಪಾಕಿಸ್ತಾನಕ್ಕೆ ಕಳಿಸಿಕೊಡಿ: ಉಗ್ರರ ಪತ್ನಿಯರ ಪ್ರತಿಭಟನೆ

author img

By

Published : Aug 3, 2021, 1:58 PM IST

ಮದುವೆಯಾಗಿ ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಮಹಿಳೆಯರು ಪೌರತ್ವಕ್ಕೆ ಆಗ್ರಹಿಸಿ ಜಮ್ಮುಕಾಶ್ಮೀರದ ಬಾರಮುಲ್ಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Pakistani wives of ex-militants
Pakistani wives of ex-militants

ಬಾರಾಮುಲ್ಲ (ಜಮ್ಮುಕಾಶ್ಮೀರ): ಕಣಿವೆ ರಾಜ್ಯದಲ್ಲಿರುವ ಪಾಕಿಸ್ತಾನದ ಮಾಜಿ ಉಗ್ರರ ಪತ್ನಿಯರು ಬಾರಾಮುಲ್ಲಾದ ಕರಿಯಪ ಪಾರ್ಕ್‌ನಿಂದ ಖಾನಪುರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ತಮಗೆ ಭಾರತೀಯ ಪೌರತ್ವ ನೀಡಿ ಇಲ್ಲವೇ ಪ್ರಯಾಣದ ದಾಖಲೆಗಳನ್ನು ನೀಡಿ ಎಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.

ನಮ್ಮ ಪ್ರತಿಭಟನೆ ಹೊಸತೇನಲ್ಲ, ಬಹಳ ಹಿಂದಿನಿಂದಲೂ ನಡೆಯುತ್ತಿದೆ. ನಾವು ಪಾಕಿಸ್ತಾನದಿಂದ ಬಂದಿದ್ದು, ನಾವು ನಮ್ಮ ಹೆತ್ತವರನ್ನು ಭೇಟಿ ಮಾಡಲು ಪಾಕ್​ಗೆ ಹೋಗಬೇಕಿದೆ. ನಮಗೆ ಪ್ರಯಾಣದ ದಾಖಲೆಗಳು ಅಥವಾ ಭಾರತದ ಪೌರತ್ವ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ಇಲ್ಲವಾದಲ್ಲಿ ಗಡಿಗಳನ್ನು ತೆರೆಯಿರಿ, ನಾವು ನಮ್ಮ ತವರಿಗೆ ಹೋಗುತ್ತೇವೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

ಬ್ಯಾನರ್ ಹಿಡಿದು ಮಕ್ಕಳು ತಮ್ಮ ಕುಟುಂಬಸ್ಥರ ಜತೆ ಸೇರಿ ಪ್ರತಿಭಟನೆ ನಡೆಸಿದ ಮಹಿಳೆಯರು, ನಾವು ಪದೇಪದೆ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಕಾಶ್ಮೀರಿಗಳನ್ನು ಮದುವೆಯಾಗಿದ್ದೇವೆ ಎಂದು ಮಾತ್ರಕ್ಕೆ ನಾವು ಅಪರಾಧಿಗಳಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಕೊನೆ ಉಸಿರು ಇರುವವರೆಗೂ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ ಎಂದರು.

2010 ರಲ್ಲಿ ಒಮರ್ ಅಬ್ದುಲ್ಲಾ ಸರ್ಕಾರದಲ್ಲಿ ಉಗ್ರರ ಪುನರ್ವಸತಿ ನೀತಿಯಡಿ, ಸುಮಾರು 450 ಕಾಶ್ಮೀರಿಗಳು ಗಡಿಯನ್ನು ದಾಟಿ ಪಾಕಿಸ್ತಾನಿ ಹುಡುಗಿಯರನ್ನು ಮದುವೆಯಾಗಿ ಕಾಶ್ಮೀರಕ್ಕೆ ಮರಳಿದರು. ಅವರಿಗೆ ಈವರೆಗೆ ಭಾರತದ ಪೌರತ್ವ ಸಿಕ್ಕಿಲ್ಲ. ಇದೀಗ ಅವರು ಪೌರತ್ವ ನೀಡಿ, ಇಲ್ಲವಾದರೆ ಪಾಕಿಸ್ತಾನಕ್ಕೆ ಕಳಿಸಿಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.