ETV Bharat / bharat

ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್​​ಗೆ ಸಿನಿಮಾ ಚಾನ್ಸ್​.. ಬಾಲಿವುಡ್​ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರ? - ಟೈಲರ್ ಕನ್ಹಯ್ಯ ಲಾಲ್ ಹತ್ಯೆ

ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವ ಸೀಮಾ ಹೈದರ್​ಗೆ 'ಎ ಟೈಲರ್ಸ್ ಮರ್ಡರ್ ಸ್ಟೋರಿ' ಎಂಬ ಬಾಲಿವುಡ್ ಸಿನಿಮಾದಲ್ಲಿ 'ರಾ' ಏಜೆಂಟ್ ಪಾತ್ರಕ್ಕಾಗಿ ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ.

pakistani-national-seema-haider-to-act-in-a-film-based-on-udaipur-kanhaiya-lal-murder
ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್​​ಗೆ ಸಿನಿಮಾ ಚಾನ್ಸ್​... ಬಾಲಿವುಡ್​ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರ?
author img

By

Published : Aug 3, 2023, 8:51 PM IST

ಹೈದರಾಬಾದ್: ಪಬ್​ಜಿ ಗೇಮ್ ಆಡುತ್ತಿದ್ದಾಗ ಪರಿಚಯವಾದ ಭಾರತದ ಯುವಕನಿಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವ ಸೀಮಾ ಹೈದರ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. ಜಾನಿ ಫೈರ್‌ಫಾಕ್ಸ್ ಪ್ರೊಡಕ್ಷನ್ ಹೌಸ್​ ರಾಜಸ್ಥಾನದ ಉದಯಪುರ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ಕುರಿತು 'ಎ ಟೈಲರ್ಸ್ ಮರ್ಡರ್ ಸ್ಟೋರಿ' (A Tailor's Murder Story) ಎಂಬ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರಕ್ಕಾಗಿ ಸೀಮಾ ಅವರನ್ನು ಸಂಪರ್ಕಿಸಲಾಗಿದೆ.

ಇದನ್ನೂ ಓದಿ: ಟೈಲರ್​ ಶಿರಚ್ಛೇದ ಪ್ರಕರಣ.. ಉದ್ಯಮಿ ಕೊಲೆಗೂ ಈ ಕಿರಾತಕರು ಇಟ್ಟಿದ್ದರಂತೆ ಮುಹೂರ್ತ!

ನಾಲ್ಕು ಮಕ್ಕಳ ತಾಯಿ ಆಗಿರುವ ಸಿಂಧ್ ಪ್ರಾಂತ್ಯದ ಕರಾಚಿಯ ಸೀಮಾ ಹೈದರ್​ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾಳೆ. ಸದ್ಯ ಪಬ್​ಜಿ ಗೇಮ್​ ಗೆಳೆಯ ಸಚಿನ್ ಮೀನಾ ಎಂಬಾತನನ್ನು ಮದುವೆಯಾಗಿರುವ ಸೀಮಾ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾಳೆ. ಸದ್ಯ ಆಕೆ ಜಾಮೀನಿನ ಮೇಲೆ ಹೊರಗಿದ್ದಾಳೆ. ಆದರೆ, ಹೊಸ ಮನೆಗೆ ಬಂದ ನಂತರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ಸೀಮಾ ಹೈದರ್ ತಿಳಿಸಿದ್ದಳು. ಇದಾದ ನಂತರ ಕೆಲ ದಿನಗಳ ನಂತರ ಸಿನಿಮಾ ನಿರ್ದೇಶಕರು ಸೀಮಾಳನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ಪ್ರವಾದಿಯನ್ನು ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ದುಷ್ಕರ್ಮಿಗಳು ಟೈಲರ್ ಕೆಲಸ ಮಾಡುತ್ತಿದ್ದ ಕನ್ಹಯ್ಯ ಲಾಲ್​ ಎಂಬವರನ್ನು ಶಿರಚ್ಛೇದನ ಮಾಡಿದ್ದರು. ಈ ಹತ್ಯೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂತಕರು ಹರಿಬಿಟ್ಟಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಸೌದಿಯಲ್ಲಿ ಗಂಡ.. ಪಬ್​ಜಿ ಗೇಮ್​​ ಪ್ರಿಯಕರನಿಗಾಗಿ ನಿವೇಶನ ಮಾರಿ ಭಾರತಕ್ಕೆ ಬಂದ ಪಾಕ್ ಮಹಿಳೆ ಪೊಲೀಸರ ಅತಿಥಿ!

ಟೈಲರ್ ಕನ್ಹಯ್ಯ ಲಾಲ್​ ಹತ್ಯೆಯ ಕುರಿತು ಜಾನಿ ಫೈರ್‌ಫಾಕ್ಸ್ ಪ್ರೊಡಕ್ಷನ್ ಹೌಸ್ 'ಎ ಟೈಲರ್ಸ್ ಮರ್ಡರ್ ಸ್ಟೋರಿ' ಎಂಬ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರವನ್ನು ನಿರ್ವಹಿಸಲು ಸೀಮಾ ಹೈದರ್​ಳನ್ನು ಚಿತ್ರತಂಡ ಸಂಪರ್ಕಿಸಿದೆ. ಅಲ್ಲದೇ, ಸಿನಿಮಾ ನಿರ್ದೇಶಕರಾದ ಜಯಂತ್ ಸಿನ್ಹಾ ಮತ್ತು ಭರತ್ ಸಿಂಗ್ ಮಂಗಳವಾರ ಸೀಮಾ ಅವರ ಪಾತ್ರಕ್ಕಾಗಿ ಆಡಿಷನ್ ಸಹ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸಚಿನ್ ಮೀನಾಗಾಗಿ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದ ಗಡಿ ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ಸೀಮಾ ಹೈದರ್ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿದ್ದವು. ಹೀಗಾಗಿ ಪೊಲೀಸರು ಸೀಮಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಈ ಪ್ರಕ್ರಿಯೆಯಲ್ಲಿ ಅನೇಕ ವಿಷಯಗಳು ಮುನ್ನೆಲೆಗೆ ಬಂದಿದ್ದವು. ತನ್ನ ಸಹೋದರನಿಗೆ ಪಾಕಿಸ್ತಾನ ಸೇನೆಯೊಂದಿಗೆ ಸಂಪರ್ಕವಿದೆ ಎಂದು ಸೀಮಾ ಪತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹೀಗಾಗಿ ಪಾಕಿಸ್ತಾನದ ಐಎಸ್​ಐ ಬಗ್ಗೆಯೂ ಪೊಲೀಸರು ಸೀಮಾಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಇದನ್ನೂ ಓದಿ: ಪಾಕ್​ ISI ಬಗ್ಗೆ ನಾನು ಕೇಳಿಯೇ ಇಲ್ಲ.. ಸೀಮಾ ಹೈದರ್‌ಗೆ ATS​ ಕೇಳಿದ 13 ಪ್ರಶ್ನೆಗಳು ಹಾಗೂ ಆಕೆ ಕೊಟ್ಟ ಉತ್ತರ ಇಲ್ಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.