ಗುರುದಾಸ್‌ಪುರ (ಪಂಜಾಬ್): ಭಾರತದ ಗಡಿಯಲ್ಲಿ ಸತತ ಎರಡನೇ ದಿನವೂ ಪಾಕಿಸ್ತಾನ ಡ್ರೋನ್‌ಗಳ ಚಟುವಟಿಕೆ ಕಂಡು ಬಂದಿದೆ. ಬಿಎಸ್‌ಎಫ್‌ನ ಚಂದು ವಡಾಲಾ ಚೌಕಿ ಮತ್ತು ಡೇರಾ ಬಾಬಾ ನಾನಕ್‌ನಲ್ಲಿರುವ ಕಸೋವಾಲ್ ಪೋಸ್ಟ್‌ನ ಎರಡು ಸ್ಥಳಗಳಲ್ಲಿ ಪಾಕಿಸ್ತಾನದ ಡ್ರೋನ್‌ಗಳು ರಾತ್ರಿ ವೇಳೆ ಕಾಣಿಸಿಕೊಂಡಿವೆ. ಎಂದಿನಂತೆ ಬಿಎಸ್ಎಫ್ ಸಿಬ್ಬಂದಿ ಡ್ರೋನ್‌ಗಳ ಮೇಲೆ ಗುಂಡು ಹಾರಿಸಿದ್ದಾರೆ.
ಡಿಐಜಿ ಬಿಎಸ್‌ಎಫ್ ಪ್ರಭಾಕರ ಜೋಶಿ ಮಾತನಾಡಿ, ರಾತ್ರಿ10:20 ಕ್ಕೆ ಚಂದು ವಡಾಲ ಪೋಸ್ಟ್‌ನಲ್ಲಿ ಡ್ರೋನ್ ಕಾಣಿಸಿಕೊಂಡಿದೆ. ನಂತರ ಬಿಎಸ್‌ಎಫ್ ಸಿಬ್ಬಂದಿ 26 ಸುತ್ತು ಗುಂಡು ಹಾರಿಸಿದರು ಮತ್ತು 6 ಲಘು ಬಾಂಬ್‌ಗಳನ್ನೂ ಎಸೆದಿದ್ದಾರೆ. ಸ್ವಲ್ಪ ಸಮಯದ ನಂತರ, 10:48 ಕ್ಕೆ ಕಸೋವಾಲ್ ಪೋಸ್ಟ್‌ನಲ್ಲಿರುವ 51 ಗಡಿ ಸ್ತಂಭದ ಬಳಿ ಡ್ರೋನ್ ಚಲನೆ ಕಂಡುಬಂದಿದೆ. ಬಿಎಸ್‌ಎಫ್ ಸಿಬ್ಬಂದಿ ಅದರ ಮೇಲೆ 72 ಸುತ್ತು ಮತ್ತು ನಾಲ್ಕು ಫ್ಲ್ಯಾಷ್ ಬಾಂಬ್‌ಗಳನ್ನು ಹಾಕಿದ್ದಾರೆ ಎಂದರು.
ಇದನ್ನೂ ಓದಿ: ಪಂಜಾಬ್ ಪ್ರಾಂತ್ಯದಲ್ಲಿ ಮತ್ತೊಂದು ಪಾಕ್ ಡ್ರೋನ್ ಪತ್ತೆ..ಪೊಲೀಸರಿಂದ ತನಿಖೆ!
ಇದಾದ ನಂತರ, ಬಿಎಸ್ಎಫ್ ಯೋಧರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದರು. ಗಡಿ ಭದ್ರತಾ ಪಡೆ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯ ಹೊರತಾಗಿಯೂ, ಪಾಕಿಸ್ತಾನವು ತನ್ನ ಡ್ರೋನ್ ಚಟುವಟಿಕೆಯನ್ನು ನಿಲ್ಲಿಸುತ್ತಿಲ್ಲ.