ಅಹಮದಾಬಾದ್(ಗುಜರಾತ್) : ಪಾಕಿಸ್ತಾನದ ಸಮುದ್ರದಲ್ಲಿ ಸೆರೆ ಸಿಕ್ಕ ಗುಜರಾತ್‌ನ 20 ಮೀನುಗಾರರನ್ನು ಪಾಕ್ ಬಿಡುಗಡೆ ಮಾಡುತ್ತಿದೆ. ಜೂನ್ 20ರಂದು ಭಾರತೀಯ ಅಧಿಕಾರಿಗಳಿಗೆ ಮೀನುಗಾರರನ್ನ ಹಸ್ತಾಂತರಿಸಲಾಗುವುದು ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್‌ನ 20 ಮೀನುಗಾರರನ್ನು ಸೋಮವಾರ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಮಾಡಲಾಗುವುದು ಮತ್ತು ಪಂಜಾಬ್‌ನ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ನಮಗೆ ಮಾಹಿತಿ ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ ನಿರ್ದೇಶಕ ನಿತಿನ್ ಸಾಂಗ್ವಾನ್ ಹೇಳಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಗುಜರಾತ್ ಸರ್ಕಾರವು ವಿಧಾನಸಭೆಯಲ್ಲಿ ಹಂಚಿಕೊಂಡ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಗುಜರಾತ್‌ನ ಸುಮಾರು 500 ಮೀನುಗಾರರು ಪಾಕಿಸ್ತಾನದ ಜೈಲುಗಳಲ್ಲಿಯೇ ಇದ್ದಾರೆ. ಈ 500ರಲ್ಲಿ 358 ಜನರನ್ನು ಕಳೆದ ಎರಡು ವರ್ಷಗಳಲ್ಲಿ ಪಾಕ್ ಬಂಧಿಸಿದೆ. ಇದೆಲ್ಲದರ ನಡುವೆ ಈಗ 20 ಮೀನುಗಾರರನ್ನು ಪಾಕ್ ಬಿಡುಗಡೆ ಮಾಡುತ್ತಿದೆ.
ಕಾಲ್ಪನಿಕ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು (IMBL) ದಾಟಿ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ ಗುಜರಾತ್‌ನ ಮೀನುಗಾರರನ್ನು ಅರಬ್ಬೀ ಸಮುದ್ರದಲ್ಲಿ ಬಂಧಿಸಿತ್ತು.
ಇದನ್ನೂ ಓದಿ: ಮದುವೆ ಆಗಿ ಒಂದೇ ತಿಂಗಳಿಗೆ ನಾಲ್ಕು ತಿಂಗಳ ಗರ್ಭಿಣಿಯಾದ ಯುವತಿ : ನವ ವಿವಾಹಿತನಿಗೆ ಶಾಕ್