ETV Bharat / bharat

ಹಿಂಸಾತ್ಮಕ ಪ್ರತಿಭಟನೆ : ಪಾಕ್‌ನಲ್ಲಿ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿಷೇಧ - ಪಾಕ್​ನಲ್ಲಿ ವಾಟ್ಸ್​ಆ್ಯಪ್​ ನಿಷೇಧ

ಪಾಕಿಸ್ತಾನದ ಟಿಎಲ್​ಪಿಯ ಈ ಹಿಂಸಾಚಾರಕ್ಕೆ ಫ್ರಾನ್ಸ್ ದೇಶದಲ್ಲಿ ನಡೆದ ಘಟನೆಯ ನಂಟಿದೆ ಎನ್ನಲಾಗಿದೆ. ಪ್ರವಾದಿ ಬಗ್ಗೆ ಅವಹೇಳನಕಾರಿ ಕಾರ್ಟೂನ್ ತೋರಿಸಿದ ಫ್ರಾನ್ಸ್​ನ ಶಿಕ್ಷಕನನ್ನು ಹತ್ಯೆಗೈಯಲಾಗಿತ್ತು. ಆ ಬಳಿಕ ಇಸ್ಲಾಂ ಮೂಲಭೂತವಾದಿಗಳ ವಿರುದ್ಧ ಫ್ರಾನ್ಸ್ ಆಕ್ರೋಶಗೊಂಡು ಖಂಡಿಸಿತ್ತು..

Pakistan suspends services of social media platforms following violent protest
ಪಾಕಿಸ್ತಾನದಲ್ಲಿ ಸಾಮಾಜಿಕ ಜಾಲತಾಣಗಳು ತಾತ್ಕಾಲಿಕವಾಗಿ ನಿಷೇಧ
author img

By

Published : Apr 16, 2021, 8:55 PM IST

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ತಲೆದೋರಿರುವ ಕಾನೂನು ಸಮಸ್ಯೆ ಹಿನ್ನೆಲೆ ಇಮ್ರಾನ್​ ಖಾನ್ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.

ಫೇಸ್​ಬುಕ್, ವಾಟ್ಸ್‌ಆ್ಯಪ್, ಟ್ವಿಟ್ಟರ್, ಟಿಕ್‌ಟಾಕ್, ಗೂಗಲ್, ಯೂಟ್ಯೂಬ್ ಆ್ಯಪ್ ಮತ್ತು ಜಾಲತಾಣಗಳನ್ನು ನಾಲ್ಕು ಗಂಟೆಗಳ ಕಾಲ ನಿರ್ಬಂಧಿಸಿದೆ. ಬೆಳಗ್ಗೆ 11ಗಂಟೆಯಿಂದ ಇವುಗಳಿಗೆ ಹೇರಲಾಗಿರುವ ನಿಷೇಧವು ಮಧ್ಯಾಹ್ನ 3ರವರೆಗೆ ಇರಲಿದೆ ಎಂದು ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಪಿಟಿಎ ತಿಳಿಸಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯದ ಸೂಚನೆ ಮೇರೆಗೆ ಪಿಟಿಎ ಈ ಕ್ರಮ ಕೈಗೊಂಡಿರುವುದಾಗಿ ಮಾಹಿತಿ ಇದೆ.

ಪಾಕಿಸ್ತಾನದ ಉಗ್ರ ಸಂಘಟನೆ ಟೆಹ್ರೀಕ್-ಇ-ಲಬ್ಬಾಯಿಕ್ (ಟಿಎಲ್​ಪಿ)ಗೆ ಸೇರಿದ ಸದಸ್ಯರು ಮತ್ತು ಬೆಂಬಲಿಗರು ತಮ್ಮ ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿ ಬಂಧನ ವಿರೋಧಿಸಿ ಸೋಮವಾರದಿಂದ ದೇಶಾದ್ಯಂತ ಹಿಂಸಾಚಾರ ನಡೆಸುತ್ತಿದ್ದಾರೆ. ಬುಧವಾರ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿತ್ತು.

ಇಂದು ಶುಕ್ರವಾರದ ಪ್ರಾರ್ಥನೆ ಬಳಿಕ ಟಿಎಲ್​ಪಿ ಸಂಘಟನೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಲಿದೆ ಎಂಬ ಮಾಹಿತಿ ದೊರೆತಿತ್ತು. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸಾಮಾಜಿಕ ಜಾಲತಾಣಗಳನ್ನು ತಾತ್ಕಾಲಿಕ ನಿಷೇಧಿಸಲಾಗಿದೆ. ಹಾಗೆಯೇ, ಟಿಎಲ್​ಪಿಗೆ ಸಂಬಂಧಿತ ಸುದ್ದಿಗಳನ್ನ ಪ್ರಸಾರ ಮಾಡಬಾರದೆಂದು ಪಾಕ್​ನ ಟಿವಿ ವಾಹಿನಿಗಳಿಗೆ ಖಡಕ್​ ಸೂಚನೆ ನೀಡಲಾಗಿದೆ.

ಪಾಕಿಸ್ತಾನದ ಟಿಎಲ್​ಪಿಯ ಈ ಹಿಂಸಾಚಾರಕ್ಕೆ ಫ್ರಾನ್ಸ್ ದೇಶದಲ್ಲಿ ನಡೆದ ಘಟನೆಯ ನಂಟಿದೆ ಎನ್ನಲಾಗಿದೆ. ಪ್ರವಾದಿ ಬಗ್ಗೆ ಅವಹೇಳನಕಾರಿ ಕಾರ್ಟೂನ್ ತೋರಿಸಿದ ಫ್ರಾನ್ಸ್​ನ ಶಿಕ್ಷಕನನ್ನು ಹತ್ಯೆಗೈಯಲಾಗಿತ್ತು. ಆ ಬಳಿಕ ಇಸ್ಲಾಂ ಮೂಲಭೂತವಾದಿಗಳ ವಿರುದ್ಧ ಫ್ರಾನ್ಸ್ ಆಕ್ರೋಶಗೊಂಡು ಖಂಡಿಸಿತ್ತು.

ಪ್ರವಾದಿ ಕಾರ್ಟೂನ್​ಗಳನ್ನ ಹಿಂಪಡೆಯಲು ಸಾಧ್ಯವಿಲ್ಲ ಎಂದಿತ್ತು. ಫ್ರಾನ್ಸ್​ನ ಧೋರಣೆಯನ್ನು ಪಾಕಿಸ್ತಾನ ಸೇರಿದಂತೆ ಕೆಲವಾರು ಮುಸ್ಲಿಂ ದೇಶಗಳು ಖಂಡಿಸಿದ್ದವು. ಫ್ರಾನ್ಸ್ ಜೊತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಬೇಕು.

ಫ್ರಾನ್ಸ್ ವಸ್ತುಗಳನ್ನ ಪಾಕ್‌ನಲ್ಲಿ ನಿಷೇಧಿಸಬೇಕು ಎಂಬ ಬೇಡಿಕೆಗಳನ್ನ ಟಿಎಲ್​ಪಿ ಸರ್ಕಾರದ ಮುಂದಿಟ್ಟು ಹೋರಾಟ ನಡೆಸುತ್ತಿದೆ. ಬೇಡಿಕೆ ಈಡೇರಿಸಿದ ಕಾರಣ ಟಿಎಲ್​ಪಿ ದೊಡ್ಡ ಮಟ್ಟದ ಚಳವಳಿ ಮಾಡಲು ನಿರ್ಧರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.