ETV Bharat / bharat

ಅಮೆರಿಕ​ ಜೊತೆ ಉತ್ತಮ ಸೇನಾ ಸಂಬಂಧ ಗಳಿಸುವಲ್ಲಿ ಪಾಕಿಸ್ತಾನ ಹೆಜ್ಜೆ - ಯುದ್ಧಬೂಮಿಯಾಗಿ ಮಾರ್ಪಡಲಿದೆ ಪಾಕಿಸ್ತಾನ

ನಮಗೆ ಕ್ಯಾಂಪ್​ ರಾಜಕೀಯದ ಅಗತ್ಯವಿಲ್ಲ. ಇತಿಹಾಸದ ಕಾಲದಿಂದಲೂ ನಮಗೆ ಯುಎಸ್​ ಜೊತೆ ಉತ್ತಮ ಸಂಬಂಧವಿದೆ. ನಮ್ಮಲ್ಲಿರುವ ವಿಶಾಲವಾದ ಸುಸುಜ್ಜಿತ ಸೈನ್ಯ ಯುಎಸ್​ನಿಂದ ತರಬೇತಿ ಪಡೆದದ್ದು. ನಮ್ಮಲ್ಲಿರುವ ಅತ್ಯುತ್ತಮ ಸಾಧನವೆಂದರೆ ಯುಎಸ್ ಉಪಕರಣಗಳು ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್​ ಕಮರ್​ ಜಾವೇದ್​ ಬಾಜ್ವಾ ಹೇಳಿದ್ದಾರೆ.

Pakisthan
ಪಾಕಿಸ್ತಾನ
author img

By

Published : Apr 9, 2022, 11:15 AM IST

ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್​ ಕಮರ್​ ಜಾವೇದ್​ ಬಾಜ್ವಾ ಅಲ್ಲಿ ನಡೆಯುತ್ತಿರುವ ರಾಜಕೀಯ ಕಿತ್ತಾಟದ ವಿರುದ್ಧ ಸೆಟೆದು ನಿಂತಿದ್ದು, ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧವೇ ಪಾಕಿಸ್ತಾನದ ಪ್ರಭಾವಿ ಸೇನೆ ಕಣಕ್ಕಿಳಿದಿದೆ. ರಾಜಕೀಯ ತಿಕ್ಕಾಟ ಪ್ರಾರಂಭವಾದ ಇತ್ತೀಚಿನ ದಿನಗಳಲ್ಲಿ ಸರ್ಕಾರ ಹಾಗೂ ದೇಶದ ಸೇನೆಯ ಮಧ್ಯೆ ಎಲ್ಲವೂ ಸರಿಯಿಲ್ಲ. ಇಮ್ರಾನ್​ ಖಾನ್​ ರಷ್ಯಾ ಚೀನಾ ಗಡಿ ವಿವಾದದ ಕುರಿತು ಚಾಟಿ ಬೀಸುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ಮಾತ್ರ ಅಮೆರಿಕದ ಜೊತೆ ಹೆಚ್ಚಿನ ಸ್ನೇಹ ಗಳಿಸಲು ಪ್ರಯತ್ನಿಸುತ್ತಿದೆ.

ಏಪ್ರಿಲ್ 2 ರಂದು ಇಸ್ಲಾಮಾಬಾದ್ ಸೆಕ್ಯುರಿಟಿ ಡೈಲಾಗ್‌ನಲ್ಲಿ ಅವರ ಭಾಷಣದ ನಂತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜನರಲ್ ಬಾಜ್ವಾ, ನಮಗೆ ಕ್ಯಾಂಪ್​ ರಾಜಕೀಯದ ಅಗತ್ಯವಿಲ್ಲ. ಇತಿಹಾಸದ ಕಾಲದಿಂದಲೂ ನಮಗೆ ಯುಎಸ್​ ಜೊತೆ ಉತ್ತಮ ಸಂಬಂಧವಿದೆ. ನಮ್ಮಲ್ಲಿರುವ ವಿಶಾಲವಾದ ಸುಸುಜ್ಜಿತ ಸೈನ್ಯ ಯುಎಸ್​ನಿಂದ ತರಬೇತಿ ಪಡೆದದ್ದು. ನಮ್ಮಲ್ಲಿರುವ ಅತ್ಯುತ್ತಮ ಸಾಧನವೆಂದರೆ ಯುಎಸ್ ಉಪಕರಣಗಳು. ನಮಗೆ ಯುಎಸ್​ನ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.

ಯುಎಸ್ ಜೊತೆಗಿನ ತಮ್ಮ ಸೇನೆಯ ಐತಿಹಾಸಿಕ ಸಂಬಂಧಗಳನ್ನು ಪ್ರಸ್ತಾಪಿಸಿದ ಅವರು, ನಾವು ಬಹಳ ವರ್ಷಗಳಿಂದ ನಿಮ್ಮ (ಯುಎಸ್) ಮಿತ್ರರಾಗಿದ್ದೇವೆ. ನಾವು (SEATO, CENTO) ಸೀಟೊ, ಸೆಂಟೋ ಮತ್ತು ಬಾಗ್ದಾದ್ ಒಪ್ಪಂದದ ಭಾಗವಾಗಿದ್ದೇವೆ. ವಿಯೆಟ್ನಾಂನಲ್ಲಿ, ಅಫ್ಘಾನಿಸ್ತಾನದಲ್ಲಿ ನಿಮ್ಮನ್ನು ಬೆಂಬಲಿಸಿದ್ದೇವೆ. ಹಿಂದಿನ ಸೋವಿಯತ್ ಒಕ್ಕೂಟವನ್ನು ಕೆಡವುವಲ್ಲಿಯೂ ನಿಮಗೆ ಸಹಾಯ ಮಾಡಿದ್ದೇವೆ. ನಿನ್ನೆ ನಿಮ್ಮಿಂದಾದ ಅಚಾತುರ್ಯವನ್ನೂ ನಾವು ಸರಿಮಾಡಲು ಪ್ರಯತ್ನಿಸುತ್ತಿದ್ದೇವೆ. ನಿಮಗಾಗಿ ನಾವು ಸಾಕಷ್ಟು ಖರ್ಚು ಮಾಡಿದ್ದೇವೆ. ನಮಗಾಗಿ ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಬಾಜ್ವಾ ಅವರ ಪ್ರತಿಪಾದನೆಯು ಯುಎಸ್‌ಗೆ ಮನವಿಗೆ ಸಮನಾಗಿದ್ದರೆ, 2001 ರ 9/11 ಘಟನೆಯೊಂದಿಗೆ ಸೋರಿಕೆ ಪ್ರಾರಂಭವಾಗುವ ಮೊದಲು ಮತ್ತು ನಂತರದ ಘಟನೆಗಳು ಮತ್ತಷ್ಟು ಕುಸಿಯುವ ಮೊದಲು ಪಾಕಿಸ್ತಾನವು ಯುಎಸ್‌ನೊಂದಿಗೆ ನಿಕಟವಾದ ಕಾರ್ಯತಂತ್ರ ಮತ್ತು ಮಿಲಿಟರಿ ಸಂಬಂಧಗಳನ್ನು ದಶಕಗಳಿಂದ ಪಾಲಿಸುತ್ತಿತ್ತು. ಇದರಿಂದಾಗಿ ಚೀನಾ CPEC ಸೇರಿದಂತೆ ಪಾಕಿಸ್ತಾನದಲ್ಲಿ ಹೆಚ್ಚು ಹೂಡಿಕೆ ಮಾಡಿದ ಸಂದರ್ಭ, ಯುಎಸ್​ ಭಾರತವನ್ನು ಗೆಲ್ಲುವ ತನ್ನ ಗುರಿಯನ್ನು ಬದಲಾಯಿಸಿತ್ತು.

  • We still have deep cooperation with US and our Western friends. A month back American Air Force was here for a huge exercise with our Air Force.
    ▫️China of course is a very important neighbour and has helped us in many ways. Our military cooperation with China is growing because pic.twitter.com/q8lUGctXPR

    — Major Adil Raja (R) (@soldierspeaks) April 4, 2022 " class="align-text-top noRightClick twitterSection" data=" ">

ಭಾರತದ ಒತ್ತಡದ ಕಾರಣದಿಂದಾಗಿ ಯುಎಸ್​ ಹಾಗೂ ಪಶ್ಚಿಮದ ದೇಶ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ನಿರಾಕರಿಸಿತ್ತು. ಹಾಗಾಗಿ ಚೀನಾದೊಂದಿಗಿನ ಮಿಲಿಟರಿ ಸಂಬಂಧ ವರ್ಧಿಸಿತ್ತು ಎಂದ ಜನರಲ್ ಬಜ್ವಾ, ನಾವು ಪಶ್ಚಿಮದ ದೇಶದಿಂದ ಮಿಲಿಟರಿ ಉಪಕರಣಗಳನ್ನು ನಿರಾಕರಿಸಿದ ಕಾರಣ ಚೀನಾದೊಂದಿಗಿನ ನಮ್ಮ ಮಿಲಿಟರಿ ಸಹಕಾರ ಇನ್ನಷ್ಟು ಬೆಳೆಯುತ್ತಿದೆ. ಹಲವಾರು ಒಪ್ಪಂದಗಳನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನದಲ್ಲಿ ಚೀನಾದ ಪ್ರಭಾವ ಹೆಚ್ಚಿದೆ ಎಂದು ನೀವು ಭಾವಿಸಿದರೆ, ಕೌಂಟರ್ ಇನ್ವೆಸ್ಟ್‌ಮೆಂಟ್ ಅನ್ನು ತರುವುದೇ ಅದನ್ನು ಎದುರಿಸಲಿರುವ ಏಕೈಕ ಮಾರ್ಗ. ನಿಮ್ಮನ್ನು ತಡೆಯುವವರು ಯಾರು? ನಾವು ಯಾವುದೇ ಹೂಡಿಕೆಯನ್ನಾದರೂ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಮತ್ತೊಂದೆಡೆ, ಏಪ್ರಿಲ್ 3ರಂದು ಇಮ್ರಾನ್ ಖಾನ್, ಮಧ್ಯ ಮತ್ತು ದಕ್ಷಿಣ ಏಷ್ಯಾದ ಯುಎಸ್ ರಾಜ್ಯ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಅವರನ್ನು 'ವಿದೇಶಿ ಪಿತೂರಿ'ಯಲ್ಲಿ ಭಾಗಿಯಾಗಿರುವ ವ್ಯಕ್ತಿ ಎಂದು ಹೆಸರಿಸುವ ಮಟ್ಟಕ್ಕೆ ಹೋಗಿದ್ದಾರೆ. ಅದರ ಜೊತೆಗೆ ರಷ್ಯಾ ಹಾಗೂ ಯುಎಸ್​ ಪಾಕಿಸ್ತಾನದಲ್ಲಿ ತಮ್ಮ ಮೆಚ್ಚುಗೆಯನ್ನು ಘೋಷಿಸಿವೆ. ಇದರಿಂದಾಗಿ ಚೀನಾ ಹೂಡಿಕೆ ಮಾಡಲು ಭಯಪಡುವುದು ಖಚಿತ. ಮೇಲ್ನೋಟಕ್ಕೆ, ಖಾನ್ ಮತ್ತು ಜನರಲ್ ಬಜ್ವಾ ನಡುವೆ ಸಾಮಾನ್ಯ ಘರ್ಷಣೆಯಂತೆ ಕಾಣುತ್ತಿರುವುದು ಒಳಗಿನಿಂದ ತೀವ್ರವಾದ ಯುದ್ಧವೇ ನಡೆಯುತ್ತಿದೆ.

ಇದನ್ನೂ ಓದಿ: ಭಾರತವನ್ನು ನೋಡಿ ಸ್ವಾಭಿಮಾನ ಕಲಿಯಬೇಕು: ಪಾಕ್ ಪ್ರಧಾನಿ ಇಮ್ರಾನ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.