ETV Bharat / bharat

Anju-Nasrullah Love Story: ಅಂಜುವನ್ನು ಒಪ್ಪಿಕೊಳ್ಳುವುದಿಲ್ಲ, ನನ್ನ ಮಕ್ಕಳೇ ನಿರ್ಧಾರ ತೆಗೆದುಕೊಳ್ತಾರೆ: ಪತಿ ಅರವಿಂದ್ - ಅಂಜುನನ್ನು ನಾನು ಒಪ್ಪಿಕೊಳ್ಳುವುದಿಲ್ಲ

Indian woman marries Pakistan Facebook friend: ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ವಿವಾಹಿತ ಮಹಿಳೆ ಅಂಜು ಎಂಬಾಕೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನಸ್ರುಲ್ಲಾ ಎಂಬಾತನನ್ನು ವಿವಾಹವಾಗಿದ್ದಾರೆ. ಈ ಕುರಿತು ರಾಜಸ್ಥಾನದಲ್ಲಿರುವ ಪತಿ ಅರವಿಂದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Anju Nasrullah Love Story
ಅರವಿಂದ್
author img

By

Published : Jul 28, 2023, 9:54 AM IST

ಅಲ್ವಾರ್ (ರಾಜಸ್ಥಾನ): ಎರಡು ಮಕ್ಕಳ ತಾಯಿ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ತೆರಳಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ. ಈ ಕುರಿತು ಮಾಧ್ಯಮಗಳಿಗೆ ಅಂಜು ಪತಿ ಅರವಿಂದ್ ಪ್ರತಿಕ್ರಿಯೆ ನೀಡಿದ್ದು, "ನಾನು ಆಕೆಗೆ ಯಾವುದೇ ವಿಚ್ಛೇದನ ನೀಡಿಲ್ಲ. ಆದ್ದರಿಂದ ಆಕೆ ಬೇರೆ ಪುರುಷನನ್ನು ಮದುವೆಯಾಗಲು ಸಾಧ್ಯವಿಲ್ಲ" ಎಂದರು.

"ಮೂರು ವರ್ಷಗಳ ಹಿಂದೆ ಅಂಜು ದೆಹಲಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯದಿಂದ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಕಾನೂನುಬದ್ಧವಾಗಿ ಆಕೆ ಇನ್ನೂ ನನ್ನ ಹೆಂಡತಿ. ಹಾಗಾಗಿ ಅವಳು ಬೇರೆಯವರನ್ನು ಮದುವೆಯಾಗಲು ಸಾಧ್ಯವಿಲ್ಲ. ನಾನು ಖಂಡಿತವಾಗಿಯೂ ಅವಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಆಕೆ ಮತ್ತೆ ಮತ್ತೆ ಸುಳ್ಳು ಹೇಳುತ್ತಿದ್ದಾಳೆ. ಭಾರತಕ್ಕೆ ಮರಳಿದ ನಂತರ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ" ಎಂದು ಅರವಿಂದ್ ಹೇಳಿದ್ದಾರೆ.

  • #WATCH | Bhiwadi, Rajasthan: Arvind Kumar, husband of Anju who travelled to Pakistan says, "From my side, she has proved that she has done 'Nikah'...She is seeking divorce from me. She says that she has submitted the documents for it in Delhi but I have not gone there. I will… pic.twitter.com/HmkKie9lbr

    — ANI MP/CG/Rajasthan (@ANI_MP_CG_RJ) July 27, 2023 " class="align-text-top noRightClick twitterSection" data=" ">

"ದೇಶಕ್ಕೆ ಮರಳಿದ ಮೇಲೆ ಅಂಜುವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಈ ಕುರಿತ ಅಂತಿಮ ನಿರ್ಧಾರವನ್ನು ನನ್ನ ಮಕ್ಕಳೇ ತೆಗೆದುಕೊಳ್ಳುತ್ತಾರೆ. ಆದರೀಗ ಮಕ್ಕಳು ಕೂಡ ಅವಳೊಂದಿಗೆ ಮಾತನಾಡಲು ಬಯಸುವುದಿಲ್ಲ. ಅಂಜು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಕಲಿ ದಾಖಲೆಗಳು ಮತ್ತು ಸಹಿ ಬಳಸಿರಬಹುದು. ವೀಸಾ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಅವಳು ನನಗೆ ಎಂದಿಗೂ ತಿಳಿಸಲಿಲ್ಲ, ನಾನು ಯಾವುದೇ ಪಾಸ್‌ಪೋರ್ಟ್ ಕಚೇರಿಗೆ ಹೋಗಿಲ್ಲ. ಹಾಗಾಗಿ, ಈ ಕುರಿತು ತನಿಖೆ ನಡೆಸಬೇಕು. ಭಾರತ ಸರ್ಕಾರ ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾವನ್ನು ವಶಪಡಿಸಿಕೊಳ್ಳಬೇಕು" ಎಂದು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: Anju becomes Fatima: ಇಸ್ಲಾಂಗೆ ಮತಾಂತರವಾಗಿ ಪಾಕಿಸ್ತಾನದ ನಸ್ರುಲ್ಲಾನನ್ನು ಮದುವೆಯಾದ ವಿವಾಹಿತ ಭಾರತೀಯ ಮಹಿಳೆ ಅಂಜು

ಅಂಜು ಮಾನಸಿಕವಾಗಿ ಹೇಗಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಅರವಿಂದ್, "ಕೆಲಸದ ಕಾರಣದಿಂದ ಅವಳು ಕೆಲವೊಮ್ಮೆ ಉದ್ವಿಗ್ನಗೊಳ್ಳುತ್ತಿದ್ದಳು, ನನ್ನೊಂದಿಗೆ ಜಗಳವಾಡುತ್ತಿದ್ದಳು. ಆದರೆ ಅವಳು ಇಂತಹ ಹೆಜ್ಜೆ ಇಡುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ಮಕ್ಕಳೊಂದಿಗೆ ಚೆನ್ನಾಗಿಯೇ ಬೆರೆಯುತ್ತಿದ್ದಳು. ಚಿಕ್ಕ ಚಿಕ್ಕ ವಿಷಯಕ್ಕೂ ಸುಳ್ಳು ಹೇಳುವ ಅಭ್ಯಾಸ ಅಂಜುಗೆ ಇತ್ತು. ಮನೆಗೆ ತಡವಾಗಿ ಬರುತ್ತಿದ್ದಳು" ಎಂದರು.

ಇದನ್ನೂ ಓದಿ: ಸೀಮಾ, ಅಂಜುಗೂ ಮುನ್ನವೇ ಪ್ರೀತಿಗಾಗಿ ಗಡಿ ದಾಟಿದ್ದ ಪಾಕಿಸ್ತಾನಿ ಉಜ್ಮಾ..!

ಏನಿದು ಪ್ರಕರಣ? : ರಾಜಸ್ಥಾನದ ಭಿವಾಡಿ ಜಿಲ್ಲೆಯ 34 ವರ್ಷದ ಮಹಿಳೆ ಅಂಜು ಫೇಸ್‌ಬುಕ್​ನಲ್ಲಿ ಪರಿಚಯವಾದ ಪಾಕಿಸ್ತಾನದ ಅಪ್ಪರ್ ದಿರ್ ಜಿಲ್ಲೆಯ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಎಂಬಾತನನ್ನು ಭೇಟಿಯಾಗಲು ಪಾಕ್​ಗೆ ತೆರಳಿದ್ದರು. ಅಲ್ಲಿ ಇಸ್ಲಾಂಗೆ ಮತಾಂತರಗೊಂಡ ನಂತರ ವಿವಾಹ ಮಾಡಲಾಗಿದೆ. ಅಪ್ಪರ್ ದಿರ್‌ನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ಮದುವೆ (ನಿಕಾಹ್) ನಡೆದಿತ್ತು. ವಿವಾಹದ ಬಳಿಕ ಜೋಡಿಯು 'ಅಂಜು ವೆಡ್ಸ್ ನಸ್ರುಲ್ಲಾ' ಎಂಬ ಶೀರ್ಷಿಕೆಯ ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.