ETV Bharat / bharat

ಪಂಜಾಬ್​ನಲ್ಲಿ ಪಾಕ್​ ಡ್ರೋನ್: ಗುಂಡು ಹಾರಿಸಿದ ಬಿಎಸ್ಎಫ್​

ಬೆಳ್ಳಂಬೆಳಗ್ಗೆ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ಪಟ್ಟಣದ ಪಾಕ್ ಡ್ರೋನ್​​ ಕಂಡುಬಂದಿದ್ದು, ಬಿಎಸ್​ಎಫ್ ಯೋಧರು ಗುಂಡು ಹಾರಿಸಿದ್ದಾರೆ

author img

By

Published : Jun 18, 2021, 12:12 PM IST

Pakistan drone enters Indian territory
ಪಂಜಾಬ್​ನಲ್ಲಿ ಪಾಕ್​ ಡ್ರೋನ್: ಗುಂಡು ಹಾರಿಸಿದ ಬಿಎಸ್ಎಫ್​

ಗುರುದಾಸ್‌ಪುರ(ಪಂಜಾಬ್): ಗಡಿಯಲ್ಲಿ ಮತ್ತೆ ಪಾಕ್‌ ತನ್ನ ಉಪಟಳ ಮುಂದುವರೆಸಿದೆ. ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ಪಟ್ಟಣದ ಮೇಲೆ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಗುಂಡು ಹಾರಿಸಿದ್ದಾರೆ.

ಮುಂಜಾನೆ 4.40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗಡಿಯಲ್ಲಿ ನಿಯೋಜಿಸಲಾದ ಬಿಎಸ್ಎಫ್ ಸಿಬ್ಬಂದಿಯ 10ನೇ ಬೆಟಾಲಿಯನ್ ಡ್ರೋನ್ ಮೇಲೆ ಏಳು ಸುತ್ತು ಗುಂಡು ಹಾರಿಸಿದರು. ಈ ಘಟನೆಯ ನಂತರ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆಯೂ ಪಂಜಾಬ್‌ನ ಹುಸೇನಿವಾಲಾ ಪ್ರದೇಶದ ಎರಡು ಹಳ್ಳಿಗಳ ಮೇಲೆ ಪಾಕಿಸ್ತಾನದ ಡ್ರೋನ್ ಹಾರಾಟ ಕಂಡುಬಂದಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ.

ಇದನ್ನೂ ಓದಿ: 'ಎಲ್ಲ ಇಲಾಖೆಯಲ್ಲೂ ವಿಜಯೇಂದ್ರ ಹಸ್ತಕ್ಷೇಪವಿದೆ, ಯಾವ ಮಂತ್ರಿಯೂ ಸಮಾಧಾನವಾಗಿಲ್ಲ'

ಪಾಕಿಸ್ತಾನ ಮೂಲದ ಡ್ರೋನ್‌ಗಳು ರಾಜ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಹಾರಿಸಲು ಬಳಸಿದ ಘಟನೆಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.