ETV Bharat / bharat

ಉರಿ ಸೆಕ್ಟರ್​ನಲ್ಲಿ ಓರ್ವ ಉಗ್ರನ ಹತ್ಯೆ, ಮತ್ತೋರ್ವ ಶರಣು

author img

By

Published : Sep 28, 2021, 3:13 PM IST

ಕಳೆದ ಒಂದು ವಾರದಿಂದ ಭಯೋತ್ಪಾದಕರು ಗಡಿಯೊಳಗೆ ನುಸುಳುವ ಯತ್ನ ಮಾಡ್ತಿದ್ದು, ಭಾರತೀಯ ಯೋಧರು ಅವರಿಗೆ ಸೂಕ್ತ ತಿರುಗೇಟು ನೀಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿ ಪೊಲೀಸರು ವಿವಿಧ ರಾಜ್ಯಗಳ ಪೊಲೀಸರ ಸಹಾಯದಿಂದ ಅನೇಕ ಉಗ್ರರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು..

Pak terrorist caught
Pak terrorist caught

ಶ್ರೀನಗರ(ಜಮ್ಮು-ಕಾಶ್ಮೀರ) : ಜಮ್ಮು-ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಭಾರತೀಯ ಯೋಧರು ಓರ್ವ ಉಗ್ರನನ್ನ ಹತ್ಯೆಗೈದಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಉಗ್ರ ಶರಣಾಗಿದ್ದಾನೆಂದು ತಿಳಿದು ಬಂದಿದೆ.

  • One LeT terrorist Ali Babar Patra from Okhara, Punjab in Pakistan surrendered before security forces during an operation in the Uri sector of Jammu and Kashmir: Indian Army pic.twitter.com/M7URcShc9Z

    — ANI (@ANI) September 28, 2021 " class="align-text-top noRightClick twitterSection" data=" ">

19 ವರ್ಷದ ಲಷ್ಕರ್​​-ಇ-ತೊಯ್ಬಾ ಉಗ್ರ ಸಂಘಟನೆ ಭಯೋತ್ಪಾದಕ ಎಂದು ತಿಳಿದು ಬಂದಿದೆ. ಬಂಧಿತ ಉಗ್ರನನ್ನ ಪಾಕಿಸ್ತಾನದ ಪಂಜಾಬ್​​ನ ಅಲಿ ಬಾಬರ್​ ಎಂದು ಗುರುತಿಸಲಾಗಿದೆ. ಆತ ಎಲ್​ಇಟಿ ಸದಸ್ಯನೆಂದು ಒಪ್ಪಿಕೊಂಡಿದ್ದಾಗಿ ಭಾರತೀಯ ಸೇನೆ ಖುದ್ದಾಗಿ ತಿಳಿಸಿದೆ.

Pak terrorist caught
ಮಾಹಿತಿ ಹಂಚಿಕೊಂಡ ಮೇಜರ್ ಜನರಲ್ ವೀರೇಂದ್ರ ವಾಟ್ಸ್

ಇದನ್ನೂ ಓದಿರಿ: ಬಾಲಕನ ಕೊಂದ ತಾಲಿಬಾನಿಗಳು...ಕ್ರೂರತೆಗೆ ಮತ್ತೊಂದು ಸಾಕ್ಷ್ಯ!

ಶ್ರೀನಗರದ ರಾಜೌರಿಕದಲ್​ ಪ್ರದೇಶದಲ್ಲಿ ಉಗ್ರರ ಅಡಗುತಾಣ ನಿರ್ಮಾಣ ಮಾಡಲು ಲಷ್ಕರ್​​-ಇ-ತೊಯ್ಬಾ ಕಮಾಂಡರ್​ ರಿಯಾಜ್​ ಸತರ್​ಗುಂಡ್​ನ ಆದೇಶ ನೀಡಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆಂದು ಮೇಜರ್ ಜನರಲ್ ವೀರೇಂದ್ರ ವಾಟ್ಸ್ ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಭಯೋತ್ಪಾದಕರು ಗಡಿಯೊಳಗೆ ನುಸುಳುವ ಯತ್ನ ಮಾಡ್ತಿದ್ದು, ಭಾರತೀಯ ಯೋಧರು ಅವರಿಗೆ ಸೂಕ್ತ ತಿರುಗೇಟು ನೀಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿ ಪೊಲೀಸರು ವಿವಿಧ ರಾಜ್ಯಗಳ ಪೊಲೀಸರ ಸಹಾಯದಿಂದ ಅನೇಕ ಉಗ್ರರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.