ETV Bharat / bharat

ಯಾಸಿನ್​ ಮಲಿಕ್​ಗೆ ಶಿಕ್ಷೆ: ಪಾಕ್​ ಕೊತ ಕೊತ.. ಇದು ಪ್ರಜಾಪ್ರಭುತ್ವದ ಕರಾಳ ದಿನ ಎಂದ ಪಾಕ್​ ಪ್ರಧಾನಿ

ಉಗ್ರ ಯಾಸಿನ್​ ಮಲಿಕ್​ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಕುದ್ದು ಹೋಗಿರುವ ಪಾಕಿಸ್ತಾನ ತನ್ನ ದೇಶದಲ್ಲಿರುವ ಭಾರತದ ರಾಯಭಾರಿ ಕರೆಸಿಕೊಂಡು ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ, ಕಾಶ್ಮೀರಿಗಳ ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲಾಗದು ಎಂದು ಹೇಳಿದೆ.

pak-summons-indian
ಪಾಕ್​ ಕೊತ ಕೊತ.
author img

By

Published : May 26, 2022, 3:52 PM IST

ನವದೆಹಲಿ: ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಪಾಲಿಸುತ್ತಿದ್ದ ಜಮ್ಮು ಕಾಶ್ಮೀರದ ಉಗ್ರ ಯಾಸಿನ್​ ಮಲಿಕ್​ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ನೆರೆಯ ಕುತಂತ್ರಿ ದೇಶ ಪಾಕಿಸ್ತಾನ ಕುಪಿತಗೊಂಡಿದೆ. ಇದು ಭಾರತೀಯ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಕರಾಳ ದಿನ ಎಂದು ಜರೆದಿದೆ.

ಅಲ್ಲದೇ, ಇಸ್ಲಾಮಾಬಾದ್​ನಲ್ಲಿರುವ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳನ್ನು ತನ್ನ ವಿದೇಶಾಂಗ ಇಲಾಖೆ ಕಚೇರಿಗೆ ಕರೆಸಿಕೊಂಡು ಯಾಸಿನ್​ ಮಲಿಕ್‌ಗೆ ವಿಧಿಸಿದ ಶಿಕ್ಷೆಯ ವಿರುದ್ಧ ಖಂಡನಾ ಪ್ರತಿಭಟನೆ ಸಲ್ಲಿಸಿದೆ.

ಅಂತಾರಾಷ್ಟ್ರೀಯ ಸಮುದಾಯವು ಕಾಶ್ಮೀರದಲ್ಲಿನ ಉಲ್ಭಣಿಸುತ್ತಿರುವ ಪರಿಸ್ಥಿತಿಯನ್ನು ಶೀಘ್ರವಾಗಿ ಹತೋಟಿಗೆ ತೆಗೆದುಕೊಳ್ಳಬೇಕು. ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಕಾಯ್ದೆಯಡಿ ತನ್ನ ಜವಾಬ್ದಾರಿಗಳನ್ನು ಪೂರೈಸಲು ಭಾರತವನ್ನು ಒತ್ತಾಯಿಸಬೇಕು ಎಂದು ಪಾಕಿಸ್ತಾನ ಹೇಳಿದೆ.

ಯಾಸಿನ್​ ಶಿಕ್ಷೆಗೆ ಪಾಕ್​​ ಪ್ರಧಾನಿ ಬೇಸ್ತು: ಇನ್ನು ಯಾಸಿನ್​ ಮಲಿಕ್​ಗೆ ವಿಧಿಸಿದ ಶಿಕ್ಷೆಯನ್ನು ಟೀಕಿಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಇದು ಭಾರತದ ಪ್ರಜಾಪ್ರಭುತ್ವ ಮತ್ತು ಅದರ ನ್ಯಾಯ ವ್ಯವಸ್ಥೆಯ ಕರಾಳ ದಿನವಾಗಿದೆ. ಭಾರತ ಯಾಸಿನ್ ಮಲಿಕ್​ ಅವರನ್ನು ದೈಹಿಕವಾಗಿ ಬಂಧಿಸಬಹುದು. ಆದರೆ, ಆತ ಸಂಕೇತಿಸುವ ಸ್ವಾತಂತ್ರ್ಯದ ಕಲ್ಪನೆಯನ್ನು ಅದು ಎಂದಿಗೂ ಬಂಧಿಸುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಕಾಶ್ಮೀರಿಗಳ ಹಕ್ಕಿಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ಷರೀಫ್ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಯಾಸಿನ್ ಮಲಿಕ್ ಜೀವಾವಧಿ ಶಿಕ್ಷೆಯನ್ನು ಖಂಡಿಸಿದ್ದು, ಹುರಿಯತ್ ನಾಯಕ ಯಾಸಿನ್ ಮಲಿಕ್‌ಗೆ ನೆಪಮಾತ್ರದ ವಿಚಾರಣೆಯಲ್ಲಿ ಅನ್ಯಾಯವಾಗಿ ಶಿಕ್ಷೆ ವಿಧಿಸಲಾಗಿದೆ. ಭಾರತ ಕಾಶ್ಮೀರಿಗಳ ಸ್ವಾತಂತ್ರ್ಯ ಮತ್ತು ಧ್ವನಿಯನ್ನು ಎಂದಿಗೂ ಮೌನಗೊಳಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಕಾಶ್ಮೀರಿ ಸಹೋದರರು ಮತ್ತು ಸಹೋದರಿಯರೊಂದಿಗೆ ನಿಂತಿದೆ. ಅವರ ನ್ಯಾಯಯುತ ಹೋರಾಟಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ನಿನ್ನೆಯಷ್ಟೇ ವಿಶೇಷ ಎನ್​ಐಎ ನ್ಯಾಯಾಲಯ ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಆ ಬಳಿಕ ಕಾಶ್ಮೀರದಲ್ಲಿ ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಓದಿ: 'ಪರಿವಾರವಾದಿ' ಪಕ್ಷಗಳು ಪ್ರಜಾಪ್ರಭುತ್ವ-ಯುವ ಜನತೆಯ ದೊಡ್ಡ ಶತ್ರು: ಮೋದಿ ವಾಗ್ದಾಳಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.