ETV Bharat / bharat

ಪಂಜಾಬ್‌ ಗಡಿಯಲ್ಲಿ ಪಾಕ್‌ ನುಸುಳುಕೋರನಿಗೆ ಬಿಎಸ್‌ಎಫ್‌ ಗುಂಡೇಟು

ಪಾಕಿಸ್ತಾನದ ನುಸುಳುಕೋರನೊಬ್ಬ ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿರುವ ಗಡಿ ಭದ್ರತಾ ಬೇಲಿಯ ಬಳಿ ಅನುಮಾಸ್ಪದವಾಗಿ ಸಂಚರಿಸುತ್ತಿದ್ದ. ಇದನ್ನು ಗಮನಿಸಿದ ಬಿಎಸ್ಎಫ್ ಆತನನ್ನು ಸುತ್ತುವರೆದು ಹೊಡೆದುರುಳಿಸಿದ್ದಾರೆ.

author img

By

Published : Jan 3, 2023, 1:22 PM IST

Pakistani infiltrator killed by BSF forces
ಬಿಎಸ್ಎಫ್ ಪಡೆಯಿಂದ ಹತ್ಯೆಗೊಳಗಾದ ಪಾಕಿಸ್ತಾನಿ ನುಸುಳುಕೋರ

ನವದೆಹಲಿ: ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಂದು ಪಾಕಿಸ್ತಾನಿ ನುಸುಳುಕೋರನೊಬ್ಬನನ್ನು ಗುಂಡು ಹಾರಿಸಿ ಹತ್ಯೆಗೈದಿದೆ. ಶಸ್ತ್ರಸಜ್ಜಿತನಾಗಿದ್ದ ನುಸುಳುಕೋರರನ್ನು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಪತ್ತೆ ಹಚ್ಚಲಾಗಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುದಾಸ್‌ಪುರ ಸೆಕ್ಟರ್‌ನ ಬಾರ್ಡರ್ ಔಟ್‌ಪೋಸ್ಟ್ ಚನ್ನಾ ಅಡಿಯಲ್ಲಿ ಬಿಎಸ್‌ಎಫ್ ಪಡೆಗಳು ಬೆಳಿಗ್ಗೆ ಶಂಕಿತನ ಚಲನವಲನ ಗಮನಿಸಿದ್ದಾರೆ. ಆತ ಗಡಿ ಬೇಲಿ ಕಡೆ ಚಲಿಸಿದಾಗ ಸುತ್ತುವರೆಯಲಾಗಿದೆ. ಇದೇ ಪ್ರದೇಶದಲ್ಲಿ ವ್ಯಾಪಕ ಶೋಧ ನಡೆಯುತ್ತಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ. ಸುಮಾರು 7,419 ಕಿಮೀ ವ್ಯಾಪ್ತಿಯ ಭಾರತ-ಪಾಕಿಸ್ತಾನ ಗಡಿಯನ್ನು ಬಿಎಸ್‌ಎಫ್‌ ಕಾವಲು ಕಾಯುತ್ತಿದೆ.

ಇದನ್ನೂ ಓದಿ: ಗಡಿ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್​ ಹೊಡೆದುರುಳಿಸಿದ ಮಹಿಳಾ ಯೋಧರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.