ತ್ರಿಪುರ: 2021ರ ಜನವರಿ 25, ತ್ರಿಪುರದ ಇತಿಹಾಸದಲ್ಲೇ ಮಹತ್ತರ ದಿನವಾಗಿದೆ. ಗಣರಾಜ್ಯೋತ್ಸವದ ನಿಮಿತ್ತ ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿಗಳಿಗೆ ರಾಜ್ಯದ ಇಬ್ಬರು ಭಾಜನರಾಗಿದ್ದಾರೆ.
ಜಾನಪದ ಕಲಾ ಕ್ಷೇತ್ರದಲ್ಲಿನ ಕೊಡುಗೆಗಳಿಗಾಗಿ ಸತ್ಯರಾಮ್ ರಿಯಾಂಗ್ಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದ್ದರೆ, 10 ವರ್ಷದ ಪೋರಿ, ಚೆಸ್ ಪಟು ಅರ್ಷಿಯಾ ದಾಸ್ಗೆ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ’ ಪ್ರಶಸ್ತಿ ಪಡೆದಿದ್ದಾರೆ. ಇನ್ನು ತ್ರಿಪುರದ ಆರು ಪೊಲೀಸರಿಗೆ ಕೂಡ ಪದಕ ನೀಡಿ ಗೌರವಿಸಲಾಗಿದೆ.
ಸತ್ಯರಾಮ್ ರಿಯಾಂಗ್
ತಂಗಾ ದರ್ಲಾಂಗ್ ಮತ್ತು ಬೆನಿ ಚಂದ್ರ ಜಮಾತಿಯಾ ನಂತರ, ಸತ್ಯರಾಮ್ ರಿಯಾಂಗ್ ತ್ರಿಪುರದ ಸ್ಥಳೀಯ ಸಮುದಾಯದಿಂದ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೂರನೇ ವ್ಯಕ್ತಿ ಸತ್ಯರಾಮ್ ರಿಯಾಂಗ್ ಆಗಿದ್ದಾರೆ. 1943 ರಲ್ಲಿ ತ್ರಿಪುರ ಸಂತೀರ್ ಬಜಾರ್‌ನಲ್ಲಿ ಜನಿಸಿದ ಇವರು ಜಾನಪದ ಕಲಾವಿದರಾಗಿ ಪ್ರಸಿದ್ಧರಾದರು. ರಿಯಾಂಗ್ ಸಮುದಾಯದ ಸಾಂಪ್ರದಾಯಿಕ ಹೊಜಗಿರಿ ನೃತ್ಯವನ್ನು ಉಳಿಸಿ - ಬೆಳೆಸಲು ಹೋರಾಡಿದ್ದಾರೆ. ತ್ರಿಪುರದ ಜಾನಪದ ನೃತ್ಯ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ರಷ್ಯಾ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.
![Tripura Awards](https://etvbharatimages.akamaized.net/etvbharat/prod-images/tripura-awards_25012021233658_2501f_1611598018_755.jpg)
ಅರ್ಷಿಯಾ ದಾಸ್
ಈಕೆ ಬಾಲಕಿಯರ ವಿಭಾಗದಲ್ಲಿ ಈಶಾನ್ಯ ಭಾರತದ ಮೊದಲ ಮತ್ತು ಏಕೈಕ ಅಂತಾರಾಷ್ಟ್ರೀಯ ಚೆಸ್ ಪಟು ಆಗಿದ್ದು, ವಿದೇಶಿ ನೆಲದಲ್ಲಿ ಚಿನ್ನದ ಪದಕವನ್ನೂ ಪಡೆದಿದ್ದಾರೆ. ರಾಷ್ಟ್ರೀಯ ಚೆಸ್ ಚಾಂಪಿಯನ್ ಕೂಡ ಆಗಿರುವ ಅರ್ಷಿಯಾಗೆ, ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಿ ಪ್ರಧಾನಿ ನರೇಂದ್ರ ಮೋದಿ ಗೌರವಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕೂಡ ಈಕೆ ಅನೇಕ ಆನ್‌ಲೈನ್ ಚೆಸ್ ಸ್ಫರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.