ETV Bharat / bharat

ಎಸ್.​ಎಲ್.ಭೈರಪ್ಪ, ಸುಧಾ ಮೂರ್ತಿಗೆ ಪದ್ಮಭೂಷಣ ಪ್ರದಾನ - PM Narendra Modi

ಎಸ್.​ಎಲ್.ಭೈರಪ್ಪ, ಸುಧಾ ಮೂರ್ತಿ, ಖಾದರ್ ವಲ್ಲಿ ದುಡೇಕುಲಾ, ಶಾ ರಶೀದ್​ ಅಹ್ಮದ್ ಖಾದ್ರಿ ಮತ್ತು ರಾಣಿ ಮಾಚಯ್ಯ ಅವರು ರಾಷ್ಟ್ರಪತಿಗಳಿಂದ ಪದ್ಮ ಪುರಸ್ಕಾರಗಳನ್ನು ಸ್ವೀಕರಿಸಿದರು.

Padma awards conferred to Mulayam Singh Yadav, Sudha Murty, SL Bhyrappa, Keeravaani
ಎಸ್​ಎಲ್ ಭೈರಪ್ಪ, ಸುಧಾ ಮೂರ್ತಿಗೆ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರದಾನ
author img

By

Published : Apr 5, 2023, 8:18 PM IST

ನವದೆಹಲಿ: ಕರ್ನಾಟಕದ ಹಿರಿಯ ಸಾಹಿಚಿ ಎಸ್.​ಎಲ್.ಭೈರಪ್ಪ, ಇನ್ಫೋಸಿಸ್ ​ಫೌಂಡೇಶನ್ ಸಂಸ್ಥಾಪಕಿ ಹಾಗು​ ಲೇಖಕಿ ಸುಧಾ ಮೂರ್ತಿ ಅವರಿಗೆ ದೇಶದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಸೇರಿದಂತೆ ಅನೇಕ ಗಣ್ಯರಿಗೆ ಇಂದು ಸಂಜೆ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

  • President Droupadi Murmu presents Padma Bhushan to Dr S.L. Bhyrappa for Literature & Education. A retired Professor of Philosophy, Dr Bhyrappa is a widely acclaimed Kannada author whose works have been translated in many languages. pic.twitter.com/62sszyVoSi

    — President of India (@rashtrapatibhvn) April 5, 2023 " class="align-text-top noRightClick twitterSection" data=" ">

ಗಣರಾಜ್ಯೋತ್ಸವ ಸಂದರ್ಭದಲ್ಲಿ ಜನವರಿಯಲ್ಲಿ 106 ಗಣ್ಯರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಮಾರ್ಚ್​ 22ರಂದು ಮೊದಲ ಹಂತದಲ್ಲಿ ಸುಮಾರು 50 ಮಂದಿ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಇಂದು ಒಟ್ಟು 53 ಮಂದಿ ಗಣ್ಯರಿಗೆ ಪದ್ಮ ಪುರಸ್ಕಾರಗಳನ್ನು ರಾಷ್ಟ್ರಪತಿ ಪ್ರದಾನ ಮಾಡಿದರು. ಮೂವರಿಗೆ ಪದ್ಮವಿಭೂಷಣ, ಐವರಿಗೆ ಪದ್ಮಭೂಷಣ ಹಾಗೂ 45 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  • President Droupadi Murmu presents Padma Bhushan to Smt Sudha Murty for Social Work. A philanthropist, renowned author and Chairperson of Murty Foundation, she has initiated many projects in the fields of healthcare, education, art & culture, animal welfare and women's empowerment pic.twitter.com/qQJeEjnKfY

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಪುರಸ್ಕೃತರಾದ ಎಸ್.​ಎಲ್.ಭೈರಪ್ಪ ಮತ್ತು ಸುಧಾ ಮೂರ್ತಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ವಿಜ್ಞಾನ ಮತ್ತು ಇಂಜಿನಿಯರಿಂಗ್​ ವಿಭಾಗದಲ್ಲಿ ಖಾದರ್ ವಲ್ಲಿ ದುಡೇಕುಲಾ, ಕಲಾ ವಿಭಾಗದಲ್ಲಿ ಶಾ ರಶೀದ್​ ಅಹ್ಮದ್ ಖಾದ್ರಿ ಮತ್ತು ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿ ಪಡೆದರು. ‘ಆರ್‌ಆರ್‌ಆರ್‌’ ಚಿತ್ರದ ಹಾಡಿನ ‘ನಾಟು ನಾಟು’ ಹಾಡಿಗೆ ಆಸ್ಕರ್‌ ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಹಾಗೂ ಬಾಲಿವುಡ್‌ ನಟಿ ರವೀನಾ ಟಂಡನ್‌ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು.

  • President Droupadi Murmu presents Padma Shri to Dr Khadar Valli Dudekula for Science & Engineering. Known as the 'Millet man of India', Dr Dudekula has spread awareness about the millets as our staple grains and their importance in preventing and healing diseases. pic.twitter.com/VBdDqk6mTb

ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು 1971ರ ಬಾಂಗ್ಲಾದೇಶ ಯುದ್ಧ ನಿರಾಶ್ರಿತರ ಶಿಬಿರಗಳಲ್ಲಿ ಸೇವೆ ಸಲ್ಲಿಸಲು ಅಮೆರಿಕದಿಂದ ಮರಳಿದ್ದ ದಿಲೀಪ್ ಮಹಲನಾಬಿಸ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರದಾನ ಮಾಡಲಾಯಿತು. ಮುಲಾಯಂ ಸಿಂಗ್ ಪರವಾಗಿ ಪುತ್ರ ಅಖಿಲೇಶ್ ಯಾದವ್ ಪ್ರಶಸ್ತಿ ಸ್ವೀಕರಿಸಿದರೆ, ದಿಲೀಪ್​ ಮಹಲನಾಬಿಸ್ ಪ್ರಶಸ್ತಿಯನ್ನು ಅವರ ಸೋದರಳಿಯ ಸ್ವೀಕರಿಸಿದರು.

  • President Droupadi Murmu presents Padma Shri to Smt. Iymudiyanda Rani Machaiah for Art. A folk exponent of the Ummathat dance art of Kodagu, she is propagating the cause of folk dance in the role of performer, organiser and trainer. pic.twitter.com/Og8BgwLxam

ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಹಲವು ಕೇಂದ್ರ ಸಚಿವರು ಉಪಸ್ಥಿತರಿದ್ದರು. ಈ ಬಾರಿ ಕರ್ನಾಟಕದ ಎಸ್.​​ಎಂ.ಕೃಷ್ಣ, ಎಸ್​.ಎಲ್​.ಭೈರಪ್ಪ, ಸುಧಾಮೂರ್ತಿ ಸೇರಿದ ಎಂಟು ಜನರಿಗೆ ಪದ್ಮ ಪುರಸ್ಕಾರಗಳನ್ನು ಪ್ರಕಟಿಸಲಾಗಿತ್ತು. ಮಾರ್ಚ್​ 22ರಂದು ಎಸ್​.​ಎಂ.ಕೃಷ್ಣ ಅವರು ಪದ್ಮವಿಭೂಷಣ, ನಾಡೋಜ ಪಿಂಡಿಪನಹಳ್ಳಿ ಮುನಿವೆಂಕಟಪ್ಪನವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು.

  • #WATCH | Shah Rasheed Ahmed Quadari, known for introducing many new patterns and designs in Bidri art, receives the Padma Shri from President Droupadi Murmu pic.twitter.com/1vAyYbJuuJ

    — ANI (@ANI) April 5, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಮಾಜಿ ಸಿಎಂ ಎಸ್​ಎಂ ಕೃಷ್ಣಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.