ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪುರಸ್ಕಾರಗಳನ್ನು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. ಒಟ್ಟು 106 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಇದರಲ್ಲಿ ಆರು ಪದ್ಮವಿಭೂಷಣ, ಒಂಭತ್ತು ಪದ್ಮಭೂಷಣ ಮತ್ತು 91 ಪದ್ಮಶ್ರೀಗಳನ್ನು ಪ್ರಕಟಿಸಲಾಗಿದೆ.
ರಾಜ್ಯದ ಎಂಟು ಜನರಿಗೆ ಗೌರವ.. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಅಲ್ಲದೇ, ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದುಡೇಕುಲಾ ಹಾಗೂ ಕಲಾ ವಿಭಾಗದಲ್ಲಿ ರಾಣಿ ಮಾಚಯ್ಯ, ನಾಡೋಜ ಪಿಂಡಿಪನಹಳ್ಳಿ ಮುನಿವೆಂಕಟಪ್ಪ, ಶಾ ರಶೀದ್ ಅಹ್ಮದ್ ಖಾದ್ರಿ ಮತ್ತು ಪುರಾತತ್ವ ಕ್ಷೇತ್ರದಲ್ಲಿ ಎಸ್.ಸುಬ್ಬರಾಮನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
-
For 2023, the President has approved conferment of 106 Padma Awards incl 3 duo cases. The list comprises 6 Padma Vibhushan, 9 Padma Bhushan & 91 Padma Shri. 19 awardees are women & the list also includes 2 persons from category of Foreigners/NRI/PIO/OCI and 7 Posthumous awardees pic.twitter.com/Gl4t6NGSzs
— ANI (@ANI) January 25, 2023 " class="align-text-top noRightClick twitterSection" data="
">For 2023, the President has approved conferment of 106 Padma Awards incl 3 duo cases. The list comprises 6 Padma Vibhushan, 9 Padma Bhushan & 91 Padma Shri. 19 awardees are women & the list also includes 2 persons from category of Foreigners/NRI/PIO/OCI and 7 Posthumous awardees pic.twitter.com/Gl4t6NGSzs
— ANI (@ANI) January 25, 2023For 2023, the President has approved conferment of 106 Padma Awards incl 3 duo cases. The list comprises 6 Padma Vibhushan, 9 Padma Bhushan & 91 Padma Shri. 19 awardees are women & the list also includes 2 persons from category of Foreigners/NRI/PIO/OCI and 7 Posthumous awardees pic.twitter.com/Gl4t6NGSzs
— ANI (@ANI) January 25, 2023
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿ. ಮುಲಾಯಂ ಸಿಂಗ್ ಯಾದವ್ ಅವರಿಗೂ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಸೇವೆ ಸಲ್ಲಿಸಿದ ದಿಲೀಪ್ ಮಹಲನಾಬಿಸ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ದಿಲೀಪ್ ಮಹಾಲನಬಿಸ್ ಅವರಿಗೆ (ಮರಣೋತ್ತರ) ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಅದೇ ರೀತಿ ಪಶ್ಚಿಮ ಬಂಗಾಳದ 102 ವರ್ಷದ ಆಟಗಾರ್ತಿ ಮಂಗಳಾ ಕಾಂತಿ ರಾಯ್, 98 ವರ್ಷದ ಸಾವಯವ ಕೃಷಿಕ ತುಲಾ ರಾಮ ಉಪ್ರೇಟಿ, ರತನ್ ಚಂದ್ರ ಕರ್, ಹೀರಾಬಾಯಿ ಲೋಬಿ, ಮುನೀಶ್ವರ್ ಚಂದರ್ ದಾವರ್, ಮುನೀಶ್ವರ್ ಚಂದರ್ ದಾವರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
19 ಮಹಿಳೆಯರಿಗೆ ಪದ್ಮ ಪುರಸ್ಕಾರ: ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಮೂರು ವಿಭಾಗದಲ್ಲಿ ಒಟ್ಟಾರೆ ಪ್ರಶಸ್ತಿ ಪುರಸ್ಕೃತರಲ್ಲಿ 19 ಮಹಿಳೆಯರು ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮತ್ತೊಂದೆಡೆ ವಿದೇಶಿಯರು, ಎನ್‌ಆರ್‌ಐ, ಪಿಐಒ, ಒಸಿಐ ವಿಭಾಗದಲ್ಲಿ ಇಬ್ಬರಿಗೆ ಪದ್ಮ ಗೌರವ ನೀಡಲಾಗಿದೆ. ಮರಣೋತ್ತರವಾಗಿ ಏಳು ಜನ ಪ್ರಮುಖರಿಗೆ ಪ್ರಶಸ್ತಿ ಘೋಷಿಸಲಾಗಿದೆ.
-
Congratulations to those who have been conferred the Padma Awards. India cherishes their rich and varied contributions to the nation and their efforts to enhance our growth trajectory. #PeoplesPadma https://t.co/M6p4FWGhFU
— Narendra Modi (@narendramodi) January 25, 2023 " class="align-text-top noRightClick twitterSection" data="
">Congratulations to those who have been conferred the Padma Awards. India cherishes their rich and varied contributions to the nation and their efforts to enhance our growth trajectory. #PeoplesPadma https://t.co/M6p4FWGhFU
— Narendra Modi (@narendramodi) January 25, 2023Congratulations to those who have been conferred the Padma Awards. India cherishes their rich and varied contributions to the nation and their efforts to enhance our growth trajectory. #PeoplesPadma https://t.co/M6p4FWGhFU
— Narendra Modi (@narendramodi) January 25, 2023
ಆರು ಪದ್ಮವಿಭೂಷಣ ಪುರಸ್ಕೃತರು: ಗುಜರಾತ್ನ ಬಾಲಕೃಷ್ಣ ಜೋಷಿ (ಮರಣೋತ್ತರ), ಮಹಾರಾಷ್ಟ್ರದ ಜಾಕೀರ್ ಹುಸೇನ್, ಕರ್ನಾಟಕದ ಎಸ್ಎಂ ಕೃಷ್ಣ, ಪಶ್ಚಿಮ ಬಂಗಾಳದ ದಿಲೀಪ್ ಮಹಲನಾಬಿಸ್ (ಮರಣೋತ್ತರ), ಅಮೆರಿಕದ ಶ್ರೀನಿವಾಸ ವರ್ಧನ್, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ.
ಒಂಭತ್ತು ಪದ್ಮಭೂಷಣ ಪುರಸ್ಕೃತರು: ಕರ್ನಾಟಕದ ಎಸ್ಎಲ್ ಭೈರಪ್ಪ, ಮಹಾರಾಷ್ಟ್ರದ ಕುಮಾರ್ ಮಂಗಳಂ ಬಿರ್ಲಾ, ದೀಪಕ್ ದಾರ, ತಮಿಳುನಾಡಿನ ವಾಣಿ ಜೈರಾಮ್, ತೆಲಂಗಾಣದ ಸ್ವಾಮಿ ಚಿನ್ನಾ ಜೀಯರ್, ಮಹಾರಾಷ್ಟ್ರದ ಸುಮನ್ ಕಲ್ಯಾಣ್ಪುರ, ದೆಹಲಿಯ ಕಪಿಲ್ ಕಪೂರ್, ಕರ್ನಾಟಕದ ಸುಧಾಮೂರ್ತಿ, ತೆಲಂಗಾಣದ ಕಲ್ಮೇಶ್ ಡಿ ಪಟೇಲ್ ಅವರಿಗೆ ಪದ್ಮಭೂಷಣ ಪುರಸ್ಕೃತರು ನೀಡಲಾಗಿದೆ.
ಪ್ರಧಾನಿಯಿಂದ ಅಭಿನಂದನೆಗಳು: ಅತ್ಯುನ್ನತ ಪ್ರಶಸ್ತಿಗಳಿಗೆ ಭಾಜನವಾದ ಸಾಧಕರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ಭಾರತವು ರಾಷ್ಟ್ರಕ್ಕೆ ಪುರಸ್ಕೃತರ ಶ್ರೀಮಂತ ಮತ್ತು ವೈವಿಧ್ಯಮಯ ಕೊಡುಗೆಗಳನ್ನು ಹಾಗೂ ನಮ್ಮ ಬೆಳವಣಿಗೆಯ ಪಥವನ್ನು ಹೆಚ್ಚಿಸುವ ಅವರ ಪ್ರಯತ್ನಗಳನ್ನು ಗೌರವಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಲವು ಧರ್ಮಗಳು, ಭಾಷೆಗಳು ನಮ್ಮನ್ನು ವಿಭಜಿಸಲಿಲ್ಲ, ಅವು ನಮ್ಮನ್ನು ಒಗ್ಗೂಡಿಸಿವೆ: ರಾಷ್ಟ್ರಪತಿ ಮುರ್ಮು