ETV Bharat / bharat

ತೆಲಂಗಾಣದಲ್ಲೂ ಆಕ್ಸಿಜನ್ ಕೊರತೆ... ಮೂವರು ಕೋವಿಡ್ ರೋಗಿಗಳು ಸಾವು

author img

By

Published : May 9, 2021, 6:56 PM IST

Updated : May 9, 2021, 7:14 PM IST

ತೆಲಂಗಾಣದಲ್ಲೂ ಆಕ್ಸಿಜನ್ ಕೊರತೆಯಿಂದಾಗಿ ಮೂವರು ಕೋವಿಡ್​ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೈದರಾಬಾದ್​ನ​ ಕಿಂಗ್​ ಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Oxygen shortage
Oxygen shortage

ಹೈದರಾಬಾದ್​: ಇಲ್ಲಿನ ಕಿಂಗ್​ ಕೋಟಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಮೂವರು ಕೋವಿಡ್​​ ರೋಗಿಗಳು ಸಾವನ್ನಪ್ಪಿದ್ದಾರೆ. ಕಳೆದ 20 ಗಂಟೆಗಳಿಂದ ಈ ಆಸ್ಪತ್ರೆಯಲ್ಲಿ ಆಮ್ಲಜನಕ ಸಮಸ್ಯೆ ಉದ್ಭವವಾಗಿತ್ತು ಎಂದು ತಿಳಿದು ಬಂದಿದೆ.

ಆಸ್ಪತ್ರೆಗೆ ಆಮ್ಲಜನಕ ಹೊತ್ತು ತರಬೇಕಾಗಿದ್ದ ವಾಹನ ವಿಳಾಸ ಗೊತ್ತಿಲ್ಲದ ಕಾರಣ ಉಸ್ಮಾನಿಯಾ ಆಸ್ಪತ್ರೆಗೆ ತೆರಳಿದೆ. ಆಗ ಅಲ್ಲಿನ ಸಿಬ್ಬಂದಿ ಟ್ಯಾಂಕರ್​ನ್ನ ಕಿಂಗ್ ಕೋಟಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆಕ್ಸಿಜನ್​ ಸಿಲಿಂಡರ್​ ವಾಹನ ಕಿಂಗ್​ ಕೋಟಿ ಆಸ್ಪತ್ರೆಗೆ ಬರುವ ಹೊತ್ತಿಗೆ ಮೂವರು ಕೋವಿಡ್ ರೋಗಿಗಳ ಪ್ರಾಣ ಹಾರಿಹೋಗಿದೆ.

ಇದನ್ನೂ ಓದಿ: ವೈದ್ಯಕೀಯ ಸಲಕರಣೆ ಮೇಲಿನ ತೆರಿಗೆ ಈಗಾಗಲೇ ರದ್ದಾಗಿವೆ: ದೀದಿಗೆ ಸೀತಾರಾಮನ್ ತಿರುಗೇಟು​

ಆಸ್ಪತ್ರೆಗೆ ದಾಖಲಾಗಿದ್ದ ಅನೇಕ ರೋಗಿಗಳು ಆಕ್ಸಿಜನ್​ ಸಮಸ್ಯೆಯಿಂದ ತೊಂದರೆ ಅನುಭವಿಸಿದ್ದಾರೆಂದು ಸಂಬಂಧಿಕರು ದೂರಿದ್ದಾರೆ. ಸ್ಥಳಕ್ಕೆ ಆಮ್ಲಜನಕ ಹೊತ್ತು ಟ್ಯಾಂಕರ್​ ಬರುತ್ತಿದ್ದಂತೆ ಪೂರೈಕೆ ಪ್ರಾರಂಭಿಸಲಾಗಿದೆ ಎಂದು ಅಲ್ಲಿನ ವೈದ್ಯಕೀಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಮ್ಲಜನಕದ ಸಿಲಿಂಡರ್​ಗಳು ಖಾಲಿ ಆಗುವವರೆಗೆ ಸುಮ್ಮನಿದ್ದು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Last Updated : May 9, 2021, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.