ETV Bharat / bharat

ಈ 'ರಾವಣ'ನಿಗೆ ಭಾರಿ ಡಿಮ್ಯಾಂಡ್​.. ಐದು ಕೋಟಿ ರೂಪಾಯಿಗೂ ಮಾರಲು ಒಪ್ಪದ ಮಾಲೀಕ! - ನಂದೂರಬಾರ್ ಜಿಲ್ಲೆಯಲ್ಲಿ ಕುದುರೆ ಜಾತ್ರೆ

Five crore rupees horse: ಮಹಾರಾಷ್ಟ್ರದ ನಂದುರ್​ಬಾರ್ ಜಿಲ್ಲೆಯ ಸಾರಂಗಖೇಡಾ ಜಾತ್ರೆಯಲ್ಲಿ ಕುದುರೆಗಳ ವ್ಯಾಪಾರ ಅದ್ಧೂರಿಯಾಗಿ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕುದುರೆಗಳು ಮಾರಾಟಕ್ಕೆ ಬಂದಿವೆ.

owners-refused-to-sell-ravan-horse-even-for-5-crore-in-horse-fare-in-sarangkheda
Five Crore Rupees Horse: 'ರಾವಣ'ನಿಗೆ ಭಾರಿ ಬೇಡಿಕೆ, ಐದು ಕೋಟಿಗೂ ರೂಪಾಯಿಗೂ ಒಪ್ಪದ ಮಾಲೀಕ
author img

By

Published : Dec 23, 2021, 10:13 AM IST

Updated : Dec 23, 2021, 10:24 AM IST

ನಂದುರ್​ಬಾರ್(ಮಹಾರಾಷ್ಟ್ರ): ನೀವು ಹಲವಾರು ಕುದುರೆಗಳನ್ನು ನೋಡಿರಬಹುದು. ಆದರೆ ಈ ಅಶ್ವ ಬಹಳ ವಿಶೇಷ. ನೋಡೋದಕ್ಕೆ ದಷ್ಟಪುಷ್ಟವಾಗಿ ಕಾಣಿಸುವ ಕುದುರೆಗಳನ್ನು ಖರೀದಿಸೋದಕ್ಕೆ ಸಾಕಷ್ಟು ಜನ ಮುಂದೆ ಬರ್ತಾರಂತೆ. ಐದು ಕೋಟಿ ರೂಪಾಯಿ ಕೊಡ್ತೀನಿ ಅಂತ ಕೆಲವರು ಹೇಳಿದರೂ, ಮಾಲೀಕ ಕುದುರೆ ಕೊಡೋಕೆ ಒಪ್ಪುತ್ತಿಲ್ಲವಂತೆ..

ಹೌದು, ನಂದುರ್​ಬಾರ್ ಜಿಲ್ಲೆಯ ಸಾರಂಗಖೇಡಾ ಜಾತ್ರೆಯಲ್ಲಿ ಕುದುರೆಗಳ ವ್ಯಾಪಾರ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿಗೆ ನಾಸಿಕ್​ನಿಂದ ಅಸದ್​ ಸಯ್ಯದ್ ಎಂಬಾತ ಸುಮಾರು 10 ಕುದುರೆಗಳನ್ನು ಜಾತ್ರೆಗೆ ಮಾರಲು ತಂದಿದ್ದಾನೆ. ಆದರಲ್ಲಿ 'ರಾವಣ್' ಎಂಬ ಕಪ್ಪು ಬಣ್ಣದ ಕುದುರೆ ಎಲ್ಲರನ್ನೂ ಸೆಳೆಯುತ್ತಿದೆ.

owners-refused-to-sell-ravan-horse-even-for-5-crore-in-horse-fare-in-sarangkheda
ಮತ್ತೊಂದು ಭಾರಿ ಬೆಲೆಯ ಕುದುರೆಯೊಂದಿಗೆ ರಾವಣ

ಈ ಕಡುಕಪ್ಪು ಬಣ್ಣದ ಕುದುರೆಗೆ ₹5 ಕೋಟಿ ಕೊಡ್ತೀವಿ ಅಂದ್ರೂ ಈ ವ್ಯಾಪಾರಿ ಒಪ್ಪುತ್ತಿಲ್ಲ. ಈ ವರ್ಷದ ಸಾರಂಗಖೇಡಾ ಜಾತ್ರೆಗೆ ಸುಮಾರು 2 ಸಾವಿರ ಕುದುರೆಗಳು ಬಂದಿದ್ದು, ಕಳೆದ ನಾಲ್ಕು ದಿನಗಳಿಂದ ಸುಮಾರು 278 ಕುದುರೆಗಳ ಮಾರಾಟ ಮಾಡಲಾಗಿದೆ. ಒಟ್ಟು ಒಂದು ಕೋಟಿ ರೂಪಾಯಿಯಷ್ಟು ವಹಿವಾಟು ನಡೆದಿದೆ. ಆದರೆ 'ರಾವಣ'ನ ಬೆಲೆಯೇ ಸದ್ಯಕ್ಕೆ ಐದು ಕೋಟಿ ಎಂದು ಅದರ ಮಾಲೀಕನ ಹೇಳುವ ಮಾತು.

ಈ ವರ್ಷ ರಾವಣ್ ಮಾತ್ರವಲ್ಲದೇ ರುಸ್ತುಂ, ಬುಲಂದ್ ಎಂಬ ಹಲವಾರು ಕೋಟಿ ರೂಪಾಯಿ ಮೌಲ್ಯದ ಕುದುರೆಗಳೂ ಇವೆ. ಆದರೆ ರಾವಣ್ ಕಡು ಕಪ್ಪುಬಣ್ಣದಲ್ಲಿ ಬಿಳಿಯ ತಿಲಕದ ಗುರುತು ಮುಂತಾದ ವಿಶೇಷತೆಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಒಟ್ಟು 68 ಇಂಚು ಎತ್ತರವಿರುವ ಈ ಕುದುರೆ ದಾಖಲೆ ನಿರ್ಮಿಸಿದ್ದು, ದಿನಕ್ಕೆ 10 ಲೀಟರ್ ಹಾಲು, ಕಡಲೆ, 1 ಕೆಜಿ ತುಪ್ಪ, 5 ಮೊಟ್ಟೆ, ಧಾನ್ಯಗಳು, ಡ್ರೈ ಫ್ರೂಟ್​ ಅನ್ನು ಕುದುರೆಗೆ ನೀಡಲಾಗುತ್ತದೆ ಎಂದು ಕುದುರೆ ಮಾಲೀಕ ಅಸದ್ ಸಯ್ಯದ್ ಹೇಳಿದ್ದಾರೆ.

ಇದನ್ನೂ ಓದಿ: ಒಣ ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಲು ಪ್ರಧಾನಿ ನೇತೃತ್ವದ ಕ್ಯಾಬಿನೆಟ್​ ಅನುಮೋದನೆ

Last Updated : Dec 23, 2021, 10:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.