ETV Bharat / bharat

ಓವೈಸಿ ಬಿಜೆಪಿಯ 'ಚಾಚಾ ಜನ್': ಟಿಕಾಯತ್ ಗಂಭೀರ ಆರೋಪ

author img

By

Published : Sep 15, 2021, 2:08 PM IST

"ಓವೈಸಿ ಬಿಜೆಪಿಯ 'ಚಾಚಾ ಜನ್'" ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಗಂಭೀರ ಆರೋಪ ಮಾಡಿದ್ದಾರೆ.

Rakesh Tikait
ರಾಕೇಶ್ ಟಿಕಾಯತ್

ಬಾಗ್‌ಪತ್ (ಉತ್ತರ ಪ್ರದೇಶ): ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿ ಒಂದು ತಂಡವಾಗಿದ್ದು, ರೈತರು ಅವರ ನಡೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಓವೈಸಿ ಬಿಜೆಪಿಯ 'ಚಾಚಾ ಜನ್' ಎಂದು ಆರೋಪಿಸಿದ್ದಾರೆ. ಸರ್ಕಾರವು ರೈತರ ಬೇಡಿಕೆಗಳನ್ನು ಒಪ್ಪುವುದಿಲ್ಲ. ಹೀಗಾಗಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಅವರು ಖಡಕ್​ ಆಗಿ ಹೇಳಿದರು.

"ಸರ್ಕಾರವು ನಮ್ಮ ಬೇಡಿಕೆಗಳನ್ನು ಒಪ್ಪುವುದಿಲ್ಲ. ಆದ್ದರಿಂದ ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ. ನಾವು ನಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇವೆ. ರೈತರು ಮುಖ್ಯವೋ ಅಥವಾ ಕಾರ್ಪೊರೇಟರ್​ಗಳು ಮುಖ್ಯವೇ ಎಂದು ಸರ್ಕಾರ ಹೇಳಬೇಕು" ಎಂದರು.

"ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನುಗಳನ್ನು ಪರಿಚಯಿಸುವವರೆಗೂ ರೈತರಿಗೆ ಲಾಭ ಸಿಗುವುದಿಲ್ಲ. ಅಷ್ಟೇ ಅಲ್ಲದೆ, ಕೇಂದ್ರವನ್ನು ಕಾರ್ಪೊರೇಟ್‌ಗಳು ನಡೆಸುತ್ತಿದ್ದಾರೆ" ಎಂದು ಟಿಕಾಯತ್​ ಇದೇ ವೇಳೆ ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.