ಹೈದರಾಬಾದ್: ಕುಟುಂಬದ ವಿರೋಧದ ನಡುವೆ ಮುಸ್ಲಿಂ ಸಮುದಾಯದ ಯುವತಿಯೊಬ್ಬಳನ್ನು ವರಿಸಿದ್ದಕ್ಕಾಗಿ 25 ವರ್ಷದ ದಲಿತ ಯುವಕ ನಾಗರಾಜ್‌ನನ್ನು ಹೈದರಾಬಾದ್‌ನಲ್ಲಿ ಕೊಲೆ ಮಾಡಿರುವ ಮರ್ಯಾದಾ ಹತ್ಯೆ ಪ್ರಕರಣವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿ, ಇದು 'ಇಸ್ಲಾಂನಲ್ಲಿ ಅತ್ಯಂತ ಘೋರ ಅಪರಾಧ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 4 ರಂದು ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ್ ಎಂಬುವರನ್ನು ಹೈದರಾಬಾದ್‌ನ ಸರೂರ್‌ನಗರದ ನಡುರಸ್ತೆಯಲ್ಲೇ ಹತ್ಯೆಗೈಯ್ಯಲಾಗಿತ್ತು. ನಾಗರಾಜ್ ಅವರು ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇದು ಉಭಯ ಕುಟುಂಬಗಳ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೇ, ಕುಟುಂಬದವರ ಅನುಮತಿ ಇಲ್ಲದೇ ಯುವತಿಯನ್ನು ಕರೆದುಕೊಂಡು ಹೋಗಿ ಗೌಪ್ಯವಾಗಿ ಮದುವೆಯಾಗಿ, ಹೈದರಾಬಾದ್‌ನಲ್ಲಿ ಜೀವನ ನಡೆಸುತ್ತಿದ್ದರು.
-
Hyderabad mein Nagraju ka qatl, Islam ke khilaaf hai. Ladki ne apni pasand se shaadi ki thi, Kanoon iski ijazat deta hai. Islam mein qatl sabse ghinona jurm haipic.twitter.com/vI4beXXWPZ
— Asaduddin Owaisi (@asadowaisi) May 7, 2022 " class="align-text-top noRightClick twitterSection" data="
">Hyderabad mein Nagraju ka qatl, Islam ke khilaaf hai. Ladki ne apni pasand se shaadi ki thi, Kanoon iski ijazat deta hai. Islam mein qatl sabse ghinona jurm haipic.twitter.com/vI4beXXWPZ
— Asaduddin Owaisi (@asadowaisi) May 7, 2022Hyderabad mein Nagraju ka qatl, Islam ke khilaaf hai. Ladki ne apni pasand se shaadi ki thi, Kanoon iski ijazat deta hai. Islam mein qatl sabse ghinona jurm haipic.twitter.com/vI4beXXWPZ
— Asaduddin Owaisi (@asadowaisi) May 7, 2022
'ಹೈದರಾಬಾದ್‌ನಲ್ಲಿ ನಡೆದ ನಾಗರಾಜು ಕೊಲೆ ಇಸ್ಲಾಂಗೆ ವಿರುದ್ಧವಾಗಿದೆ. ಹುಡುಗಿ ತನ್ನ ಸ್ವಂತ ಇಚ್ಛೆಯಿಂದ ಅವನನ್ನು ಮದುವೆಯಾಗಿದ್ದಳು. ಪತಿಯನ್ನು ಕೊಲ್ಲುವ ಹಕ್ಕು ಆಕೆಯ ಸಹೋದರನಿಗೆ ಇಲ್ಲ. ಇಸ್ಲಾಂ ಧರ್ಮದ ಪ್ರಕಾರ ಇದು ಅತ್ಯಂತ ಘೋರ ಅಪರಾಧ. ಆದರೆ, ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವು ಪಕ್ಷಗಳು ಘಟನೆಗೆ ಬೇರೆ ಬಣ್ಣ ನೀಡಲು ಪ್ರಯತ್ನಿಸುತ್ತಿವೆ' ಎಂದು ಓವೈಸಿ ಹೇಳಿದರು.
ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಮರ್ಯಾದಾ ಹತ್ಯೆ: ಗಂಡನ ಕಳೆದುಕೊಂಡ ಅಶ್ರೀನ್ ಸುಲ್ತಾನಾ ಹೇಳಿದ್ದೇನು?