ETV Bharat / bharat

ಕಳೆದ 7 ವರ್ಷಗಳಲ್ಲಿ ಪೌರತ್ವ ತ್ಯಜಿಸಿದ 8 ಲಕ್ಷಕ್ಕೂ ಹೆಚ್ಚು ಭಾರತೀಯರು! - ತೆಲಂಗಾಣ ರಾಷ್ಟ್ರ ಸಮಿತಿ ಸಂಸದ ಕೋಥಾ ಪ್ರಭಾಕರ ರೆಡ್ಡಿ

ಕಳೆದ ಏಳು ವರ್ಷಗಳಲ್ಲಿ ಸೆಪ್ಟೆಂಬರ್ 30 ರ ವೇಳೆಗೆ 8 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ ಎಂದು ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. 8,81,254 ಭಾರತೀಯರಲ್ಲಿ 1,11,287 ಜನರು ತಮ್ಮ ಪೌರತ್ವವನ್ನು ಈ ವರ್ಷದ ಸೆಪ್ಟೆಂಬರ್ 30 ರವರೆಗೆ ತ್ಯಜಿಸಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದಾರೆ.

ಕಳೆದ 7 ವರ್ಷಗಳಲ್ಲಿ ದೇಶದ ಪೌರತ್ವ ತ್ಯಜಿಸಿದ್ದಾರೆ 8 ಲಕ್ಷಕ್ಕೂ ಹೆಚ್ಚು ಭಾರತೀಯರು!

author img

By

Published : Dec 14, 2021, 5:16 PM IST

ನವದೆಹಲಿ: ಕಳೆದ ಏಳು ವರ್ಷಗಳಲ್ಲಿ ಸೆಪ್ಟೆಂಬರ್ 30ರ ವೇಳೆಗೆ 8 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ತೆಲಂಗಾಣ ರಾಷ್ಟ್ರ ಸಮಿತಿ ಸಂಸದ ಕೋಥಾ ಪ್ರಭಾಕರ ರೆಡ್ಡಿ ಅವರು ಎತ್ತಿರುವ ಪ್ರಶ್ನೆಗಳಿಗೆ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಉತ್ತರಿಸಿದ್ದಾರೆ. 8,81,254 ಭಾರತೀಯರು ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಮಾಹಿತಿ ನೀಡಿದರು.

2020 ರಲ್ಲಿ 85,248 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಹಾಗೆ 2019 ಮತ್ತು 2018 ರಲ್ಲಿ ಕ್ರಮವಾಗಿ 1,44,017 ಮತ್ತು 1,34,561 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ರೈ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Council Result... ಬೆಳಗಾವಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಲಖನ್ ಗೆಲುವು

2017 ರಲ್ಲಿ 1,33,049 ಭಾರತೀಯರು ತಮ್ಮ ಭಾರತೀಯ ಪೌರತ್ವಕ್ಕೆ ವಿದಾಯ ಹೇಳಿದ್ದು, 2016 ರಲ್ಲಿ ಈ ಸಂಖ್ಯೆ 1,41,603 ಏರಿತ್ತು. ಹಾಗೆ 2015 ರಲ್ಲಿ 1,31,489 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ವಿವರಿಸಿದ್ದಾರೆ.

ಪೌರತ್ವವನ್ನು ತ್ಯಜಿಸಲು ಬಯಸುವ ಭಾರತೀಯರಿಗೆ ಕೇಂದ್ರ ಸರ್ಕಾರವು ಪ್ರಕ್ರಿಯೆಯನ್ನು ಸರಳಗೊಳಿಸಿದೆಯೇ ಎಂಬ ಪ್ರಶ್ನೆಗೆ ರೈ ಉತ್ತರಿಸಿ, 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 8 ರ ನಿಬಂಧನೆಗಳ ಅಡಿ ಭಾರತದ ಪೌರತ್ವವನ್ನು ತ್ಯಜಿಸಬಹುದು ಎಂದು ಪ್ರತಿಕ್ರಿಯಿಸಿದರು.

ಭಾರತೀಯ ಪೌರತ್ವವನ್ನು ತ್ಯಜಿಸಲು ಆನ್‌ಲೈನ್ ಪೋರ್ಟಲ್ ಅನ್ನು ಆಗಸ್ಟ್ 2021 ರಲ್ಲಿ ಸಕ್ರಿಯಗೊಳಿಸಲಾಗಿದೆ. ಆನ್‌ಲೈನ್ ಪೌರತ್ವ ಮಾಡ್ಯೂಲ್‌ನಲ್ಲಿ ಈ ಸಂಬಂಧ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.