ETV Bharat / bharat

PM Jan Dhan Account : 44 ಕೋಟಿ ಜನ್​​ಧನ್​​ ಖಾತೆಗಳಲ್ಲಿ ಶೇ. 55ರಷ್ಟು ಮಹಿಳೆಯರದ್ದೇ ಪಾಲು!

author img

By

Published : Dec 6, 2021, 6:28 PM IST

2014ರ ಆಗಸ್ಟ್​ ತಿಂಗಳಲ್ಲಿ ಆರಂಭಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಜನ್​ಧನ್​ ಖಾತೆಯಲ್ಲಿ ಮಹಿಳೆಯರ ಪಾಲು ಹೆಚ್ಚು ಎಂದು ಕೇಂದ್ರ ಮಾಹಿತಿ ನೀಡಿದೆ..

PM Jan Dhan Account
PM Jan Dhan Account

ನವದೆಹಲಿ : ಕಳೆದ ಆರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆರಂಭಿಸಿದ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನಿ ಜನ್‌ಧನ್​​​ ಯೋಜನೆ ಈಗಾಗಲೇ ಆರು ವರ್ಷ ಪೂರೈಕೆ ಮಾಡಿದೆ. ಇದೇ ವಿಚಾರವಾಗಿ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಭಗವಂತ್​​ ಕರ್ದಾ ರಾಜ್ಯಸಭೆಯಲ್ಲಿ ಇದರ ಬಗ್ಗೆ ಮಾಹಿತಿ ನೀಡಿದರು.

ದೇಶದಲ್ಲಿ ಒಟ್ಟು 44 ಕೋಟಿ ಜನ್​​ಧನ್​​​​​ ಖಾತೆಗಳಿವೆ. ಇದರಲ್ಲಿ ಶೇ.55ರಷ್ಟು ಖಾತೆಗಳನ್ನ ಮಹಿಳೆಯರು ಹೊಂದಿದ್ದಾರೆಂಬ ಮಾಹಿತಿ ಹಂಚಿಕೊಂಡರು.

ನವೆಂಬರ್​​​ 17, 2021ರ ಪ್ರಕಾರ ದೇಶದಲ್ಲಿ 43.90 ಕೋಟಿ ಫಲಾನುಭವಿಗಳು ಪ್ರಧಾನಮಂತ್ರಿ ಜನ್‌ಧನ್​​ ಯೋಜನೆ ಅಕೌಂಟ್​​ ಹೊಂದಿದ್ದಾರೆ. ಇದರಲ್ಲಿ 24.42 ಕೋಟಿ ಮಹಿಳಾ ಫಲಾನುಭವಿಗಳು ಖಾತೆ ಹೊಂದಿದ್ದಾರೆಂಬ ಮಾಹಿತಿ ನೀಡಿದರು.

ಗುಜರಾತ್​​​ನಲ್ಲಿ 1.65 ಕೋಟಿ ಫಲಾನುಭವಿಗಳಿದ್ದಾರೆ ಎಂಬ ಮಾಹಿತಿ ನೀಡಿದರು. ಇನ್ನು, 1,42,73,910 ಮಹಿಳೆಯರು ಸುಕನ್ಯಾ ಸಮೃದ್ಧಿ ಅಕೌಂಟ್​​​ ಹೊಂದಿದ್ದಾರೆಂಬ ಮಾಹಿತಿ ಹಂಚಿಕೊಂಡರು.

ಉತ್ತರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಅತಿ ಹೆಚ್ಚಿನ ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್​​ ಹೊಂದಿರುವ ರಾಜ್ಯಗಳಾಗಿವೆ ಎಂಬ ಮಾಹಿತಿಯನ್ನ ಸಹ ಹಂಚಿಕೊಂಡರು.

ಇದನ್ನೂ ಓದಿರಿ: ಯಾದವ್​​ ಕುಟುಂಬದ ಸೊಸೆಯಾದರೂ ಆದರ್ಶ ಮಹಿಳೆಯರ ಸಾಲಿನಲ್ಲಿ 'ಡಿಂಪಲ್'​​.. ಅವರ ಬಗ್ಗೆ ನಿಮಗೆಷ್ಟು ಗೊತ್ತು!?

2014ರಲ್ಲಿ ಪ್ರಧಾನಿಯಾದ ನಂತರ ನರೇಂದ್ರ ಮೋದಿ 2014ರ ಆಗಸ್ಟ್ 15ರಂದು ಜನ್​ಧನ್ ಯೋಜನೆ ಪ್ರಾರಂಭಿಸಿದ್ದರು. ದೇಶದ ಎಲ್ಲರೂ ಬ್ಯಾಂಕ್ ಖಾತೆ ತೆರೆಯುವುದು ಇದರ ಉದ್ದೇಶವಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಬ್ಯಾಂಕ್​ ಖಾತೆ ಕೇವಲ 250 ರೂಪಾಯಿಯಲ್ಲಿ ತೆರೆಯಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.