ETV Bharat / bharat

ಬೆಂಗಳೂರಿನಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 470ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ - ಮಾ.1 ರಿಂದ ಬೆಂಗಳೂರಿನಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 470 ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ

ರಾಜ್ಯದಲ್ಲಿ ಮಹಾಮಾರಿ‌ ಕೊರೊನಾ ಸೋಂಕು ಮಕ್ಕಳನ್ನೂ ಬಿಟ್ಟಿಲ್ಲ. ನಗರದಲ್ಲಿ ಸೋಂಕಿತ ಮಕ್ಕಳ‌ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಸಾಮಾನ್ಯವಾಗಿ ಮಕ್ಕಳಿಗೆ ತಂದೆ ತಾಯಿ, ಹೊರಾಂಗಣ ಸಂಪರ್ಕದ ಮುಖಾಂತರವೇ ಸೋಂಕು ಹರಡಿದೆ.

ಮಾ.1 ರಿಂದ ಬೆಂಗಳೂರಿನಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 470 ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ

author img

By

Published : Mar 28, 2021, 5:43 PM IST

ಬೆಂಗಳೂರು: ಮಾರ್ಚ್‌1 ರಿಂದ ಬೆಂಗಳೂರಿನಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 470 ಕ್ಕೂ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಈ ತಿಂಗಳ ಆರಂಭದಲ್ಲಿ ಸೋಂಕು ಹೆಚ್ಚಳಗೊಂಡಿದೆ.

ಒಟ್ಟು 244 ಬಾಲಕರು ಮತ್ತು 228 ಬಾಲಕಿಯರು ಸೋಂಕಿಗೆ ತುತ್ತಾಗಿದ್ದಾರೆ. ಮಾರ್ಚ್ 1 ರಿಂದ 26 ರವರೆಗೆ ಅಧಿಕೃತ ಅಂಕಿಅಂಶಗಳ ಪ್ರಕಾರ, ಮಕ್ಕಳಲ್ಲಿ ಪ್ರಕರಣಗಳು ಹೆಚ್ಚಾಗಿವೆ.

ಇಷ್ಟು ಸಮಯದಲ್ಲಿ ಕೊರೊನಾಕ್ಕೆ ಒಳಗಾದ ಜನರನ್ನು ಪರಿಶೀಲಿಸಿದಾಗ ಮಕ್ಕಳಲ್ಲಿ ಈ ವೈರಸ್ ಅತ್ಯಂತ ವಿರಳವಾಗಿ ಕಾಣಿಸಿಕೊಂಡಿತ್ತು. ಆದರೆ ಈಗ ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಕಳವಳದ ಸಂಗತಿ.

ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ. ಹೊರಗಡೆ ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದಾಗಿ ಇತರ ಕುಟುಂಬ ಸದಸ್ಯರಂತೆಯೇ ಮಕ್ಕಳಲ್ಲೂ ಸಹ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಲೈಫ್‌ಕೋರ್ಸ್ ಎಪಿಡೆಮಿಯಾಲಜಿ, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಮುಖ್ಯಸ್ಥರಾದ ಡಾ.ಗಿರಿಧರ ಆರ್.ಬಾಬು ಹೇಳುತ್ತಾರೆ.

ಮಕ್ಕಳಿಗೆ ಮಾಸ್ಕ್​, ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸುವ ಮೂಲಕ ಅವರಲ್ಲಿ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳನ್ನು ಮುಚ್ಚಲು ನಾವು ಶಿಫಾರಸು ಮಾಡಿದ್ದೇವೆ. ಪಬ್ಲಿಕ್​ ಪರೀಕ್ಷೆ ಇರುವ ತರಗತಿಗಳನ್ನು ಹೊರತುಪಡಿಸಿ ಉಳಿದ ಮಕ್ಕಳನ್ನು ಪರೀಕ್ಷೆಯಿಲ್ಲದೆ ಮುಂದಿನ ದರ್ಜೆಗೆ ವರ್ಗಾಯಿಸಬೇಕೆಂದು ನಾವು ಶಿಫಾರಸು ಮಾಡಿದ್ದೇವೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.